Monday, January 31, 2011

ವಾವ್! ಸಿನ್ಹಾ
ಅಂತೂ, ಇಂತೂ ಬಿ.ಜೆ.ಪಿ ನಾಯಕರು ನಿದ್ದೆಯಿಂದ ಎದ್ದಿದ್ದಾರೆ. ಬಿ.ಜೆ.ಪಿ ಗೂ ಕಣ್ಣಿದೆ ಎಂಬ ವಿಚಾರ ಈಗ ಜನರಿಗೆ ಗೊತ್ತಾಗುತ್ತಿದೆ. ಶತ್ರುಘ್ನ ಸಿನ್ಹಾ ಅವರು ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದಿರುವುದು ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿದೆ.
ರಾಜ್ಯದಲ್ಲಿ ಹಗರಣಗಳ ಮೇಲೆ ಹಗರಣಗಳು ಬಯಲಾಗುತ್ತಿದ್ದರು, ಬಾಲ ಮುಚ್ಚಿಕೊಂಡು ಸುಮ್ಮನಿದ್ದ ಬಿ.ಜೆ.ಪಿ ಯ 'ಅಗ್ರ'ನಾಯಕರು  ಶತ್ರುಘ್ನ ಸಿನ್ಹಾ ಮೂಲಕ ಮಾತನಾಡುತ್ತ ಇದ್ದಾರೋ ಏನೋ? ಇಲ್ಲ ಬಿ.ಜೆ.ಪಿಯಲ್ಲಿದ್ದುಕೊಂಡು, ಸ್ವಚ್ಚ ರಾಜಕಾರಣ ಮಾಡಿ ಸತ್ತ ಯಾವುದೋ ಒಬ್ಬ ನಾಯಕನ ಆತ್ಮ ಸಿನ್ಹಾರ ಮೂಲಕ ಮಾತನಾಡುತ್ತಿದೆ ಇರಬೇಕು. ಇಲ್ಲವಾದರೆ ಸಿನ್ಹಾ ಅವರು 'ಯಡಿಯೂರಪ್ಪ ಎದುರಿಸುತ್ತಿರುವ ಆರೋಪಗಳ ಜೊತೆ ಆದರ್ಶ ಹಗರಣ,ಸಿಡಬ್ಲ್ಯೂಜಿ ಮತ್ತು 2ಜಿ ಹಗರಣವನ್ನು ತುಲನೆ ಮಾಡಲು ಸಾಧ್ಯವಿಲ್ಲ. ಆದರೆ, ಚಿಕ್ಕ ಕಳ್ಳರು ಮತ್ತು ದೊಡ್ಡ ಕಳ್ಳರು ಎಂಬ ಅರ್ಥದಲ್ಲಿ ಯಾರು ಮಾತನಾಡಬಾರದು. ಚಿಕ್ಕವನಿರಲಿ, ದೊಡ್ದವನಿರಲಿ ಕಳ್ಳ ಕಳ್ಳನೇ. ಯಡಿಯೂರಪ್ಪ ರಾಜೀನಾಮೆ ನೀಡಬೇಕು' ಎಂಬ ಮಾತುಗಳನ್ನು ಹೇಳಲು ಸಾಧ್ಯವಿರಲಿಲ್ಲ.
ಒಟ್ಟಿನಲ್ಲಿ ಯಡಿಯೂರಪ್ಪನವರು ಮಾಡಿದ್ದು ತಪ್ಪು ಎಂದು ಹೇಳಲು ಅಂಜುತ್ತಿದ್ದ ಬಿ.ಜೆ.ಪಿಯ ನಾಯಕರಿಗೆ ಶತ್ರುಘ್ನ ಸಿನ್ಹಾ ಅವರು ಮಾದರಿಯಾಗಿದ್ದಾರೆ, Hats off ಸಿನ್ಹಾ
ಏನೇ ಇರಲಿ ಬಿ.ಜೆ.ಪಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಂಡು, ರಾಜ್ಯಕ್ಕೆ ಅಂಟಿದ ಕಳಂಕವನ್ನು ದೂರ ಮಾಡಿದರೆ ಸಾಕು. ಈ ಪಕ್ಷಾತೀತವಾದ ಭ್ರಷ್ಟಾಚಾರಗಳಿಂದ ರಾಜ್ಯದ ಜನರಿಗೆ 'ನಾನು ಕನ್ನಡಿಗ' ಎಂದು ಹೆಮ್ಮೆಯಿಂದ ಹೇಳಲು ಸಾಧ್ಯವಿಲ್ಲದಂತಾಗಿದೆ.
ಹಾಗೇ ಸುಮ್ಮನೆ - ಸಿನ್ಹಾ ಅವರ ಹೇಳಿಕೆಯನ್ನು ಕೇಳಿದ ಉಮೇಶ, 'ಅಯ್ಯೋ ದೇವರೇ ನಮ್ಮ ಸಿನ್ಹಾ ಅವರು ಬಿ.ಜಿ.ಪಿ ಬಿಟ್ಟು ಕೈ ಪಕ್ಷದ 
ಹ್ಯಾಂಡ್-ಆಪರೇಶನ್ ಬಲೆಗೆ ಏನಾದರು ಬಿದ್ದರೋ' ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾನೆ.
                                                      -ಡಾ.ಶೆಟ್ಟಿ 

No comments:

Post a Comment