Tuesday, January 4, 2011

ಹಿಂದೂಗಳನ್ನು ಕಾಯುವ ನಾಯಕರು
ಮೊನ್ನೆ ಮಂಗಳೂರಿನ ನೆಹರು ಮೈದಾನದಲ್ಲಿ ಬರೋಬ್ಬರಿ ವೆಚ್ಹ ಮಾಡಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವಕ್ಕೆ, ಕುಡಿದ ಅಮಲು ತುಸು ಇದ್ದರು ಬಹಳ ಉತ್ಸಾಹದಿಂದ ಧರ್ಮಿಷ್ಠನಾಗುವುದು ಹೇಗೆ ಎಂದು ತಿಳಿಯಲು ಸಂಘಟನೆಯ ಮಹಾನ್ 'ದಂಡ'ನಾಯಕರ ಭಾಷಣವನ್ನು ಕೇಳಲು ತೆರಳಿದ್ದ ಉಜಾಲಪುರದ ಗಾಂಧಿಪಾರ್ಕ್ ಸುರೇಶ ಅಲ್ಲಿ ಬಿಗಿದ ಭಾಷಣದ ವೈಖರಿಯನ್ನು ಕೇಳಿ ಬಸವಳಿದು ಅಲ್ಲಿಂದ ಎದ್ದೊಬಿದ್ದು ಓಡಿ ಸಿಟಿಸೆಂಟರ್ ನ  ಹೊರಾಂಗಣದ ಮೂಲೆಯಲೆಲ್ಲೋ ತಲೆಗೆ ಕೇಸರಿ ಶಾಲು ಹೊದೆದುಕೊಂಡು ಬೀಡಿ ಸೇದುತ್ತಾ ಕುಳಿತಿದ್ದನಂತೆ.
ಅಲ್ಲಿಗೆ ಬಂದ ಸೆಕ್ಯುರಿಟಿಯೊಬ್ಬ 'ಏನಪ್ಪಾ ಸಮಾಚಾರ' ಎಂದದಕ್ಕೆ, ನಮ್ಮ ಸುರೇಶ, ಅಲ್ಲಯ್ಯ ಆಚಾರ ವಿಚಾರದ ಬಗ್ಗೆ ಗಾಂಭೀರ್ಯದ ಮಾತುಗಳನ್ನು ಕೇಳುವ ಅಂದ್ರೆ, ಆ ಘರ್ಷ- ಈ ಘರ್ಷ,  ಮತ್ತಿನ್ನೇನೋ ಸಂಘರ್ಷ ಅಂತ ತಲೆತಿಂದ ಕಣಯ್ಯಾ. ಅದ್ಯಾರೋ ಉಗ್ರಗಾಮಿಗಳನ್ನ ಹೇಗೆ ಮಟ್ಟ ಹಾಕೋದು ಅಂತ ಒಳಗಡೆ ಕೂತು ಪ್ಲಾನ್ ಹಾಕೋ ಬದ್ಲು, ಹೊರಗಡೆ ನಿಂತ್ಕೊಂಡು ತಪ್ಪು ಮಾಡಿದವರನ್ನು ಬಿಟ್ಟು ಯಾರು ಯಾರನ್ನೋ ಬೈಕೊಂಡು, ನಮ್ಮನಮ್ಮಲ್ಲೇ ತಂದು ಹಾಕ್ತರಲ್ರಿ. 
ಮತ್ತಿನ್ನೇನೋ ಅರ್ಥ ವ್ಯವಸ್ಥೆ ದಿಕ್ಕೆಡಿಸುವವರ ವಿರುದ್ದ ಹೊಸ ಸಂಘರ್ಷ ಅಂತೆ. ಆ ಉಗ್ರಗಾಮಿಗಳು ಇದ್ದಾರಲ್ವ, ಅವರು ಬಾಂಬ್ ಹಾಕಿ ಇಡಿ ಭಾರತದ ಅರ್ಥ ವ್ಯವಸ್ಥೆಯನ್ನು ತಿಂದು ಹಾಕ್ತಾರಂತೆ. ಇಲ್ಲಿ ಈ ಬಡ್ಡಿಮಕ್ಳು ರಾಜ್ಯ ಕೊಳ್ಳೆ ಹೊಡಿಬೇಕಾದ್ರೆ, ಶಿಳ್ಳೆ ಹೊಡ್ಕೊಂಡು ಇನ್ನೂ ಕೊಳ್ಳಿ ಮತ್ತೂ ಕೊಳ್ಳಿ ಅಂತ ಸಪೋರ್ಟ್ ಮಾಡೋ ಜನ ಅರ್ಥ ವ್ಯವಸ್ಥೆ ಬಗ್ಗೆ ಮಾತಾಡೋ ಹಾಗಾಯಿತಲ್ಲ. 
ಇದೇ ಉತ್ಸವ ಮಾಡೋ ದುಡ್ಡನ್ನ ಸಾವಿರಮಂದಿ ಬಡವರಿಗೆ ಹಂಚಿದರೆ ಅವರಾದ್ರೂ ಹೊಟ್ಟೆ ತುಂಬಾ ಉಂಡು ಸೂರಡಿಯಲ್ಲಿ ಮಲಗ್ತಾಯಿದ್ರು. ಅದು ಬಿಟ್ಟು ಇವರಿಗೆ ನೈತಿಕತೆ ಇಲ್ಲ, ಇನ್ನು  ಊರವ್ರಿಗೆಲ್ಲ ನೈತಿಕತೆ ಪಾಠ ಹೇಳ್ಕೊಡಕ್ಕೆ ಹೋಗ್ತಾರೆ.
ಇದು ಸೈದ್ದಾಂತಿಕ ಷಂಡತನದ ಪರಾಮವಧಿ ಎನ್ನುತ್ತಾ ಬೀಡಿ ಮುಗಿಯುತ್ತಿದ್ದಹಾಗೆ, ಎದ್ದು, ಉಜಾಲಪುರ ಬಸ್ ಹತ್ತಿ ತನ್ನ ಊರನ್ನು ಸೇರಿ ಗಾಂಧಿಪಾರ್ಕ್ ನ  ಗಲ್ಲಿಯೊಳಗೆ ನುಸುಳಿಬಿಟ್ಟ.
                                                -  ಡಾ.ಶ್ರೇ...

1 comment: