Monday, January 17, 2011

ಪೂರ್ವಾಗ್ರಹ ಪೀಡಿತರಾಗದಿರಿ!!!
ಮೂರು ಹೊತ್ತು ಕೈಯಲ್ಲಿ ಮಣಿಹಿಡಿದು ಊರು ಸುತ್ತುವ, ಬೆಳಗ್ಗೆ-ಸಂಜೆಯಾಗುತ್ತಲೇ ಮೈ ಪೂರ್ತಿ ಗಂಧ ಬಳೆದು ದೇವರ ಎದುರು ಜಪ ತಪ ಎಂದು ಕೂರುವ, ಯೋಗ್ಯ ಶಬ್ಧಕ್ಕೆ ಮೀರಿದ ದೇವರ ಸಾಕ್ಷಾತ್ಕಾರ ರೂಪ ಎಂದು ಭಾವಿಸಿದ ಆಪ್ತರಿಗೆ ನನ್ನ ಈ ಮಾತು.
ದೇವರ ನಾಮ ಸ್ಮರಣೆಗೆ, ಹೀಗೆ ನಡೆಯಬೇಕೆಂಬ ವಿಧಿಗಳಿಲ್ಲ. ಮನದ ಶುದ್ಧಿಗಾಗಿ ಇರುವ ಒಂದು ಉತ್ತಮ ಹಾದಿ ಎಂದರೆ, 'ಲೋಕಾ ಸಮಸ್ತ ಸುಖಿನಾಬವಂತು'  ಎಂಬ ಮಾತಿನಂತೆ ನಡೆಯುವುದು.
ಮನಸ್ಸಿನ ತುಂಬಾ ಇತರರ ಏಳಿಗೆ ಬಯಸದೆ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ತಮ್ಮ ನಡತೆಗಳು ತಮಗೆ ಅರಿವಿಲ್ಲದಂತೆ ಬೆತ್ತಲಾಗುತ್ತಾ ಇರುತ್ತದೆ. ಇದಕ್ಕೆ ಯಾವುದೇ ಜಾತಿಯಾಗಲಿ ಮತವಾಗಲಿ ಹೊರತಾಗಿಲ್ಲ. 
ಆಪ್ತರನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ; ಇಲ್ಲದೆ ಹೋದರೆ, ಬೇರೆಯವರು 'ಇಸಂ' ನಲ್ಲಿ ಕುಳಿತು ಮಾತನಾಡುತ್ತಿದ್ದಾರೆ ಎಂದು ಬೊಗಳುವ ನೀವುಗಳು, ನಿಮ್ಮದೇ ಒಂದು ನೀವೇ ಕಾಣಲಾಗದ 'ಇಸಂ'ನಲ್ಲಿ ಬಾಕಿ ಯಾಗಿ ಬಿಡುವಿರಿ.  
ಪ್ರತಿಯೊಬ್ಬನಿಗೂ ಅವನದ್ದೇ ಆದ ಸ್ವಾತಂತ್ರ ಈ ವ್ಯವಸ್ಥೆಯಲ್ಲಿ ಇರುವುದರಿಂದ, ಇಲ್ಲಿ ಯಾರ ವೈಯಕ್ತಿಕ  ಕಾರ್ಯಗಳ ಬಗ್ಗೆಯೂ Judgement ಕೊಡುವ ಅವಶ್ಯಕತೆ ಇಲ್ಲ. ದಯಮಾಡಿ ಪೂರ್ವಾಗ್ರಹ ಪೀಡಿತರಾಗಿ ಇತರರನ್ನು ಅಳೆಯಲು ಹೋಗಬೇಡಿ.
                                                                      -ಕೆ.ಪಿ.ಭಟ್ 

No comments:

Post a Comment