Sunday, January 16, 2011

ಪ್ರಾಯೋಗಿಕ ಷಂಡರು 
ಹಗರಣ ಬಯಲು ಮಾಡುವುದರಲ್ಲೇ ನಿರತರಾಗಿರುವ ನಮ್ಮ ರಾಜಕಾರಣಿಗಳನ್ನು, ಪ್ರಾಯೋಗಿಕ ಷಂಡರು ಎಂದರೆ ಅದರಲ್ಲಿ ಯಾವ Sensational ಆಗಲಿ, ಅತಿಶಯೋಕ್ತಿಯಾಗಲಿ ಇಲ್ಲ.
ಸರಿ, ಒಂದು ಬಾರಿ ಎಲ್ಲರ ಹಗರಣಗಳು ಹೊರಗಡೆ ಬಂದು, ಅದಕ್ಕೆ ಸಮಜಾಯಿಷಿ ಕೊಟ್ಟು ಮುಗಿದ ಅಧ್ಯಾಯ ಆದ ನಂತರವೂ, ಮತ್ತೆ ಅದನ್ನೇ ಕೆದಕಿ-ಬೆದಕಿ ಪುನಃ ಎಲ್ಲರ ಹಗರಣಗಳನ್ನು ಬಯಲು ಮಾಡುತ್ತೇವೆ ಎನ್ನುವುದು ಶುದ್ಧ ಮೂರ್ಖತನ. ನಿಜವಾಗಿಯೂ ಇವರುಗಳಲ್ಲಿ ನೈತಿಕ ಹಾಗೂ ಮೌಲ್ಯಯುತವಾದ ರಾಜಕಾರಣದ ಬಗ್ಗೆ ಆಸಕ್ತಿ ಇದ್ದಿದ್ದರೆ, ಈಗ ನಡೆಯುತ್ತಿರುವ ಹಗರಣವನ್ನು ಹೇಗೆ  ತಡೆಗಟ್ಟ ಬಹುದು ಎಂದು ಧೀರ್ಘಾಲೋಚನೆ ಮಾಡಬೇಕಿತ್ತು.
ಆದರೆ, ಇವರುಗಳಿಗೆ ಬೇಕಾಗಿರುವುದು ಕೇವಲ ರಾಜ್ಯದ ಆಡಳಿತ. ಅವರ ಹಗರಣ ಇವರು,ಇವರ ಹಗರಣ ಅವರು ಹೊರಗಡೆ ಹಾಕಿ; ಯಾರದ್ದು ತೂಕ ಜಾಸ್ತಿಎಂದು ತುಲನೆ ಮಾಡಿ, ಜಾಸ್ತಿ ಇರುವವರು ಕೆಳಗಡೆ ಇಳಿಯಬೇಕೆಂಬ ತರ್ಕ ವಿಹೀನ ಸಿದ್ದಾಂತದೊಂದಿಗೆ ಸಾಗುತ್ತಿದ್ದಾರೆ.
ಇಲ್ಲಿ ನಾವು ಕೇವಲ ಪ್ರೆಕ್ಷಕರಾಗದೆ, ಪ್ರಜೆಗಳಾಗಿ ನಮ್ಮ ಮೂಲಕ ಹೊಸ ಆಲೋಚನೆಯ ಪರಿಚ್ಛೇದ ಹೆಣೆದರೆ ಉತ್ತಮ ರಾಜಕಾರಣ ಕಟ್ಟಲು ಸಾಧ್ಯ.
                                     -ಡಾ.ಶ್ರೇ.

1 comment: