Tuesday, January 11, 2011

ಧರ್ಮದ ಹೆಸರಲ್ಲಿ ಗಲಭೆ ಬೇಡ 
ಓ ಅಲ್ಲಿ ಕುರುಚಲು ಗಡ್ಡ ಬಿಟ್ಟು ನಿಂತುಕೊಂಡಿರುವಿದು ನಮ್ಮ ಜನಾಂಗದವನ? ಅಲ್ವ? ಹಾಗಾದರೆ ಬಾ ಹೊಡೆಯೋಣ ಅವನಿಗೆ. ಮೊನ್ನೆಯಿಂದ ನೋಡುತ್ತಿದ್ದೇನೆ, ಈತ ನಮ್ಮ ಬೀದಿಯಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದಾನೆ.
ಇಂತಹ ಪರಿಸ್ಥಿತಿ ಒಂದು ಸಣ್ಣ ಉದಾಹರಣೆ ಅಷ್ಟೆ. ಇದೇ  ರೀತಿಯ  ಹಲವು ಕೋಮು ಮನೋಭಾವದ ಆಲೋಚನೆಗಳು, ಆಲೋಚನೆಯುಳ್ಳವರು ಮತ್ತು ಈ ಆಲೋಚನೆಯನ್ನು ಮುಗ್ಧ ಮನಸುಗಳಲ್ಲಿ ಬಿತ್ತುತ್ತಿರುವವರು  ನಮ್ಮ ಹತ್ತಿರವೇ  ಸುಳಿದಾಡುತ್ತಿದ್ದರೆ . ಈ  ಮನೋಭಾವಗಳು ಹಲವು ಕೋಮು ಗಲಭೆಗೆ  ಮುನ್ನುಡಿ ಬರೆಯುತ್ತಿದೆ. ಆತ ಹಿಂದೂ, ಈತ ಮುಸಲ್ಮಾನ, ಈತ ಸಿಕ್ಕ, ಆತ ಪಾರ್ಸಿ ಹೀಗೆ ಆತ ಈತ ಎಂಬ ಧರ್ಮದ ಮೇಲಿನ ಅಂಧಾಭಿಮಾನದಿಂದ ಅಂಧರಾಗಿದ್ದರೆ. ನಮ್ಮ ದೇಶದಲ್ಲಿ ಈಗಾಗಲೇ ಬಹಳಷ್ಟರ ಮಟ್ಟಿಗೆ ಇಂತ ಸಂಕುಚಿತತೆ ಹಾಸು ಹೊಕ್ಕಾಗಿದೆ. ಹಿಂದೂ ಮುಸಲ್ಮಾನರ ಕೋಮು ಗಲಭೆಯಿಂದ ದೇಶ ನಿಜವಾಗಲು ಗುಂಡಿಯೊಳಕ್ಕೆ ಬೀಳುತ್ತಿದೆ. ಅನ್ಯರಿಗೆ, ರಾಜಕಾರಣಿಗಳಿಗೆ ಇದೆ ಗೆಲುವಿನ ಅಸ್ತ್ರ ಕೂಡಾ ಆಗಿದೆ. ದೇಶ ಬಾವಿಯಲ್ಲಿ ಬೀಳುವುದು! ಊಹಿಸಲೂ ಸಾಧ್ಯವಿಲ್ಲ. ಅಬ್ಬಬ್ಬ !
೧೯೪೭ ರ ದೇಶ ವಿಭಜನೆಯ ಸಂಧರ್ಭದಿಂದ ತೊಡಗಿ, ಅಯೋಧ್ಯೆಯ ಮೂಲಕ ಸಾಗಿ ಇವತ್ತಿನ ವರೆಗೆ ಇದು ಮುಂದುವರೆಯುತ್ತಲೇ ಇದೆ. ಇದರ ನಡುವೆಯೂ ಸಂತಸದ ವಿಚಾರ ಎಂದರೆ, ಮೊನ್ನೆಯ ಅಯೋಧ್ಯಾ ತೀರ್ಪನ್ನು ಜನ ಸ್ವೀಕರಿಸಿದ ಪರಿ. (ಕೆಲವು  ವ್ಯತಿರಿಕ್ತತೆಯನ್ನು ಹೊರತು ಪಡಿಸಿ). ಇದೇ  ರೀತಿ ಮುಂದುವರಿಯಬೇಕೆಂಬುದೇ  ಆಶಯ.
ಧರ್ಮ ಯಾವುದೇ ಇರಲಿ, ನಾವು ನಮ್ಮದೇ ಧರ್ಮವನ್ನು ನಮ್ಮ ಹೃದಯದಿಂದ ಪರಿಪಾಲಿಸಿದರೆ ಇಂತಹ ಕೆಟ್ಟ ಕೋಮು ಗಲಭೆಗಳು ನಡೆಯಲು ಸಾಧ್ಯವೇ ಇಲ್ಲ. ಇಂತಹ ಗಲಭೆಗಳು ದೇಶದ ಭ್ರಾತ್ರ್ತ್ವವನ್ನು  ಒಡೆಯುತ್ತದೆ. ಅದು ನಮಗೆ ಬೇಕೆ? 
ನನ್ನ ಒಬ್ಬ ಆತ್ಮೀಯ ಗೆಳೆಯ ಟೀ ಹೀರುತ್ತಾ ಒಮ್ಮೆ ಹೀಗೆ ಒಸರಿದ್ದ- ಮಗ, ನಮ್ಮ ದೇಶವನ್ನು ಇನ್ನು ಮುಂದಕ್ಕೆ ಧರ್ಮದ ಹೆಸರಲ್ಲಿ ಒಂದುಗೂಡಿಸಲು ಸಾಧ್ಯವೇ ಇಲ್ಲ ,ಬದಲಾಗಿ  ದೇಶ ಭಕ್ತಿಯ ಆಧಾರದಲ್ಲಿ ಮಾತ್ರ ಸಾಧ್ಯ . ಅದೆಷ್ಟು ತೂಕದ ಚಿಂತನೆ ! ದಯಮಾಡಿ ಅರ್ಥಯಿಸಿಕೊಳ್ಳಿ.
                                                                                - ಡಾ.ಶ್ರೇ 

No comments:

Post a Comment