Sunday, January 9, 2011

ಬಾಲಿವುಡ್ ಹೀರೋ.
ಹೌದು. ಈತ ಹೀಗೆಯೇ,ಮಿಂಚಿನಂತೆ ಒಮ್ಮೊಮ್ಮೆ ಮಾತ್ರ ಕಂಡು ಮರೆಯಾಗುವ, ಸದಾ ತನ್ನನ್ನು ತಾನು ಕೆಲಸದಲ್ಲಿಯೇ ತೊಡಗಿಸಿಕೊಳ್ಳುವ, ಯಾವುದೇ ಪ್ರಶಸ್ತಿಗಳ ಸಮಾರಂಭಕ್ಕೆ ಸುಳಿದಾಡದೆ ಇರುವ, ತನ್ನತನವನ್ನು ಬಿಟ್ಟು ಕೊಡದ ಏಕೈಕ ವ್ಯಕ್ತಿ, the hero 'Mr AMEER KHAN '
ಸಿನೆಮಾ ಕ್ಷೇತ್ರದಲ್ಲಿ ಒಂದಷ್ಟರ ಮಟ್ಟಿಗೆ ನೆಲೆಯೂರಿದ ನಂತರದ  ಈತನ ದಿನಗಳೆಲ್ಲ ಇತಿಹಾಸ. ಲಗಾನ್ ನಿಂದ - 3 ಈಡಿಯಟ್ಸ್ ವರೆಗೆ ತಾನು ಏನು ಎಂಬುವುದನ್ನು ಇಡಿ ಜನತೆಗೆ ಮತ್ತು ಸಿನೆಮಾ ಮಂದಿಗೆ ಸಂಪೂರ್ಣವಾಗಿ ತೋರಿಸಿಕೊಟ್ಟಿದ್ದಾನೆ. ಎಲ್ಲಿ ನೋಡಿದರೂ ಕೇವಲ ಕಮರ್ಷಿಯಲ್ ಟ್ರ್ಯಾಕ್ನಲ್ಲೆ ಸಾಗುತಿದ್ದ ಇಂಡಸ್ಟ್ರಿಯಲ್ಲಿ, ತನ್ನದೇ ಆದ ಹೊಸ ಲೋಕವನ್ನು ಸೃಷ್ಟಿಸಿ ಅದು ಪ್ರತಿಯೊಬ್ಬರನ್ನು ತಲುಪುವಂತೆ ಮಾಡಿದ.
ಒಂದಷ್ಟರ ಮಟ್ಟಿಗೆ ಒಂದೇ ಟ್ರ್ಯಾಕ್ ನಲ್ಲಿ ಇದ್ದಿದ್ದ, ಸಿನೆಮಾ ಮೇಕಿಂಗ್ ನಲ್ಲಿ drastic change ಆದಾಗ, ಅದನ್ನು ಜನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಆದರೆ ಈತ ಈ ಸಾಧ್ಯತೆಗಳನ್ನೇ ಮೀರಿ ಸಿನೆಮಾ ಇಂಡಸ್ಟ್ರಿಯನ್ನೇ ಸವಾರಿ ಮಾಡಿದ್ದಾನೆ.
ಯಾರೇ ಖಾನ್ ಗಳು ಇರಲಿ, ಬಚ್ಚನ್ ಗಳು ಇರಲಿ, ಇನ್ಯಾರೋ ವರ್ಮ ಇರಲಿ, ಮತ್ಯಾರೋ ಬನ್ಸಾಲಿ ಇರಲಿ, ಆಮೀರ್ ಸಿನೆಮಾಗಳ ಮುಂದೆ ಅವರ ಸಿನೆಮಾಗಳು ನಿಲ್ಲುವುದಿಲ್ಲ. ಹಾಗಂತ ಇವರುಗಳು ಒಳ್ಳೆ ನಟರು, ನಿರ್ದೇಶಕರು ಅಲ್ಲ ಎಂದು ಹೇಳುವುದು ಇದರ ಉದ್ದೇಶ ಅಲ್ಲ. ಇನ್ನೂ ಕೂಡ ಮುಂದಕ್ಕೆ ಇಂತಹ ಉತ್ತಮ ಸಿನೆಮಾಗಳನ್ನು ನೀಡಬೇಕು ಎಂಬುದೇ ಜನರ ಆಶಯ. 
                                     ಡಾ. ಶ್ರೇ  

1 comment:

  1. yeah.... u r correct..:-) everyone need to learn from him.. his main plus point is dedication..:-)

    ReplyDelete