Wednesday, January 5, 2011

ಗುಜರಾತ್ ಗೂಂಡಾಗಳಿಗೆ ಬೀಳುತ್ತೆ ಗುನ್ನ

ಒಂದು ಸಣ್ಣ ಕ್ಲಿಕ್ಕ್, ಅಪರಾಧಿಯ ಸಂಪೂರ್ಣ ವಿವರ ಕಂಪ್ಯೂಟರ್ ಪರದೆಯ ಮೇಲೆ. ಎಲ್ಲಾ ಮಾಹಿತಿ ಕಲೆ ಹಾಕಿದ ಮೇಲೆ, ಗುಜರಾತ್ ಪೋಲಿಸರಿಗಂತೂ ಕರ್ನಾಟಕ ಸಿ.ಎಮ್. ಮೇಲಾಣೆ, ಅಪರಾಧಿಗಳನ್ನ ಹಿಡಿಯುವುದು ಕಷ್ಟವೇನಲ್ಲ.
ಇದು ಅಭಿವ್ರದ್ಧಿ ನಿರತ ಗುಜರಾತ್ ಸರಕಾರ ಪರಿಚಯಿಸುತ್ತಿರುವ ಹೊಸ ಯೋಜನೆ. ರಾಜ್ಯ ವಿಧಿ ವಿಜ್ಞಾನ ನಿರ್ದೇಶನಾಲಯ (ಡಿ.ಎಫ್.ಎಸ್) ಈ ಜವಾಬ್ದಾರಿಯನ್ನು ಎತ್ತಿಕೊಂಡಿದ್ದು, ಎಲ್ಲಾ ಆರಕ್ಷಕ ನಿಲಯಗಳಲ್ಲಿ ಆನ್ ಲೈನ್  ಮುಖಾಂತರ ಅಪರಾಧಿಗಳ ಮಾಹಿತಿ ಪಡೆಯುವ ಯೋಜನೆಯನ್ನು ಜಾರಿಗೆ ತರುತ್ತಿದೆ.
ಸದ್ಯ ಅಹಮದಾಬಾದ್ ನಗರದಲ್ಲಿ ತೆರೆಕಾಣಲಿದ್ದು ನಂತರ ಮುಂದಿನ ವರ್ಷಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೆ ಪಸರಿಸಲಿದೆ. ಅಭಿವೃದ್ದಿ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಮೋದಿ ನೇತೃತ್ವದ ಗುಜರಾತ್ ಸರಕಾರದ ಈ ಪ್ರಯತ್ನದಿಂದ ಗೂಂಡಗಳು ಪರಿತಪಿಸಿದರೆ, ಪೊಲೀಸರು ತುಸು ನಿಟ್ಟುಸಿರು ಬಿಡಬಹುದು. ಏನೇ ಆಗಲಿ, ಮೋದಿ ಮಾತ್ರ ಸದಾ ಏನಾದರು ಮೋಡಿ ಮಾಡುತ್ತಲೇ ಇರುತ್ತಾರೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ ಅಷ್ಟೇ.
                                                                 - ಡಾ. ಶ್ರೇ 

No comments:

Post a Comment