Friday, January 28, 2011

ಯಿಲ್ ಮಾಫಿಯ 
ಸೋನಾವಾನೆ, ಮಹಾರಾಷ್ಟ್ರ ಡಿ.ಸಿ, Oil ದಂಧೆಯ ಪರಿಣಾಮ ದಂಧೆಯ ಧುರೀಣರ ಕೋಪಕ್ಕೆ ಬಲಿಯಾಗಿದ್ದಾರೆ. 'ಪ್ರಾಮಾಣಿಕ ಪ್ರಯತ್ನದ ಫಲ'  ಎಂದು ಇದನ್ನು  ಬಣ್ಣಿಸಬಹುದು. 
ಈಗ ನಮ್ಮ ಕೇಂದ್ರ ಸರಕಾರಕ್ಕೆ ಈ ಸಾವು ಪಾಠವಂತೆ. ಅಲ್ಲಾ ಸ್ವಾಮಿ ಈ ಆಯಿಲ್ ದಂಧೆ ಬಗ್ಗೆ, ಇದು ಹೊಸ ಚಾಪ್ಟರ್ ಎಂದು ನುಡಿಯೋ ಸರಕಾರ, ಇತಿಹಾಸದ ಪುಟಗಳನ್ನು ತೆರೆದೇ ನೋಡಿಲ್ಲ ಅನಿಸುತ್ತೆ. ಅಥವಾ ತೆರೆಯಲು ಮನಸಿಲ್ಲವೋ ಗೊತ್ತಿಲ್ಲ. 1990 ರ ದಶಕದ ನಂತರದಿಂದಲೇ ಈ ದಂಧೆ ಆರಂಭವಾಗಿದೆ. ಸೀಮೆ ಎಣ್ಣೆಗೆ ಡೀಸೆಲ್  ಬೆರೆಸಿ ಕಲಬೆರಕೆ ಮಾಡಿ ಮಾರಾಟ ಮಾಡುವುದು ಆ ಜಮಾನದಿಂದಲೇ ಚಾಲ್ತಿಯಲ್ಲಿತ್ತು. ನಮ್ಮ ಹಲವಾರು ರೌಡಿ ಬಾಂಧವರು ಇದರ ಮುಂದಾಳತ್ವವನ್ನು ವಹಿಸಿದ್ದರು. ಅದೆಷ್ಟೋ ಕೊಲೆ ಹಾಗೂ ಇನ್ನಿತರ ಕ್ಷುಲ್ಲಕ ಕ್ರೈ೦ ಗಳು ಈ ದಂಧೆಯಲ್ಲಿ ನಡೆದಿರುವುದು ತೀರಾ ಮಾಮೂಲು ಸಂಗತಿ. ಇಷ್ಟೆಲ್ಲಾ ನಡೆದ ಮೇಲೂ ಸರಕಾರಕ್ಕೆ ಆಗ, ಏನು ಗೊತ್ತಿರಲ್ಲಿಲ್ಲವೋ? ಅಥವಾ ಹಾಗೇ ನಟನೆಯೋ ಗೊತ್ತಿಲ್ಲ. 
ಈಗಂತೂ ಕೇಂದ್ರಕ್ಕೆ ಎಚ್ಚರವಾಗಿದೆ. ತಡವಾದರೂ ಪರವಾಗಿಲ್ಲ ಎದ್ದಿದ್ದಾರಲ್ಲ ಅದೇ ಸಂತಸ. ರಾಜ್ಯಗಳಿಗೆ ವಾರ್ಷಿಕವಾಗಿ 95 ಲಕ್ಷ ಸೀಮೆ ಎಣ್ಣೆ ವಿತರಣೆಯಾದರೆ, ಅದರಲ್ಲಿ ಶೇ 40 ರಿಂದ 60%  ಕಲಬೆರೆಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ಎಷ್ಟರ ಮಟ್ಟಿಗೆ ಈ ದಂಧೆ ಹಾಸು ಹೊಕ್ಕಾಗಿದೆ ಎಂಬುವುದು ಇದರಲ್ಲಿ ನಮಗೆ ಅರಿವಾಗುತ್ತದೆ. 
ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿಯವರು ಈ ಸಂಗತಿಯಿಂದ ಬಹಳ ವಿಚಲಿತ ರಾದಂತೆ ಕಂಡು ಬಂದಿದೆ. ಈ ಮಾಫಿಯಾವನ್ನು ತಡೆದೆ ತೀರುತ್ತೇವೆ. ಇದನ್ನು ತಡೆಯಲು, ಅಭಿವೃದ್ದಿ ಪಡಿಸಿದ ಕೆಮಿಕಲ್ ಮಾರ್ಕರ್ ವ್ಯವಸ್ಥೆ ಜಾರಿಗೆ ತರುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
ಈ ಎಲ್ಲಾ ಬೆಳವಣಿಗೆಗಳು ಮುಂದೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಷ್ಟೇ.
                                              - ಡಾ.ಶ್ರೇ 

No comments:

Post a Comment