Saturday, January 8, 2011

               ಎಲ್ಲಾ ಬಿಟ್ಟವರಿಗೆ ಯಾಕೀ ನಂಟು
ಒಬ್ಬ ಸ್ವಾಮೀಜಿಯ 80 ವರ್ಷದ ಹುಟ್ಟುಹಬ್ಬಕ್ಕೆ, ಕರ್ನಾಟಕದ ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು. ಇನ್ನೊಬ್ಬರನ್ನು ರಥದಮೇಲೆ ಕೂರಿಸಿ, ಊರಿಡೀ ಮೆರವಣಿಗೆ, ಇನ್ನೊಬ್ಬ ಸ್ವಾಮಿಗಂತೂ ಬಾಲಿವುಡ್ಡಿನ  ಪ್ರಸಿದ್ದ ನಟಿಯಿಂದಲೇ ಪಾದಪೂಜೆ. ಇದು ಪ್ರಸ್ತುತ ನಮ್ಮ ಸುತ್ತ ಇರುವ ಸ್ವಾಮಿಗಳು ಹುಟ್ಟುಹಬ್ಬ ಆಚರಿಸುವ ಪರಿ. ಸ್ವಾಮಿಗಳೆಂದರೆ ಎಲ್ಲಾ ಬಂಧನಗಳನ್ನು ಕಳಚಿಟ್ಟು, ಸಮಾಜದ ಉದ್ದಾರಕ್ಕಾಗಿ ಶ್ರಮಿಸುವವರು. ಆದರೆ ದಿನಕಳೆದಂತೆ ಸ್ವಾಮೀಜಿಗಳು ಶೋಕಿಮಾಡಲು ಆರಂಬಿಸಿದ್ದಾರೆ, ಖಡಕ್ ಇಸ್ತ್ರಿ ಹಾಕಿದ ಖಾವಿ ತೊಟ್ಟು, ಏರ್ ಕಂಡೀಶನ್ ಕಾರಿನಲ್ಲಿ ತಿರುಗುವ ಸ್ವಾಮೀಜಿಗಳು, ಊರು ಅಭಿವೃದ್ಧಿ ಮಾಡುತ್ತಾರೋ ಇಲ್ಲವೊ,ಆದರೆ ಚೆನ್ನಾಗಿ ತಿಂದುಂಡು ಹೊಟ್ಟೆ ಮಾತ್ರ ಬೆಳೆಸುತ್ತಾರೆ.
ಸ್ವಾಮಿಗಳೇ ದಲಿತರ  ಕಾಲೋನಿಗಳಿಗೆ ಹೋಗಿ ರಾಮಮಂತ್ರ ಜಪಿಸುದನ್ನು ಬಿಟ್ಟು, ದಲಿತರಿಗೆ ತಿನ್ನಲು, ಉಡಲು ವ್ಯವಸ್ಥೆ ಇದೆಯೆ ಎಂದು ವಿಚಾರಿಸಿ. ಮೂಲಸೌಕರ್ಯ ಕಲ್ಪಿಸಿದ ನಂತರ ವೈಷ್ಣವದೀಕ್ಷೆ ನೀಡಿ.
ನಿಮಗಿಂತ ಕ್ರಿಶ್ಚಿಯನ್ ಮಿಷನರಿಗಳೇ ವಾಸಿ, ಅವರು ಮೂಲಸೌಕರ್ಯ ಒದಗಿಸುತ್ತಾರೆ, ಆದರೆ ಮತಾಂತರ ಮಾಡುತ್ತಿರುವುದು ಮಾತ್ರ ಅವರು ಮಾಡುತ್ತಿರುವ ತಪ್ಪು.
ಹಿಂದೂ ಧರ್ಮದ ಸ್ವಾಮೀಜಿಗಳೇ ಭಗವದ್ಗೀತೆಯನ್ನು ಭೋದಿಸುವ ಮೊದಲು, ದಲಿತರಿಗೆ ತಿನ್ನಲು, ಉಣ್ಣಲು, ಅವರ ಮಕ್ಕಳಿಗೆ ಶಿಕ್ಷಣ ಒದಗಿಸಲು ವ್ಯವಸ್ಥೆ ಮಾಡಿ. ಈ ನಿಟ್ಟಿನಲ್ಲಿ ಸಿದ್ದಗಂಗ ಮಠದ ಶಿವಕುಮಾರ ಸ್ವಾಮಿಗಳು ಅಭಿನಂದಾನರ್ಹರು.
ಹಾಗೇ ಸುಮ್ಮನೆ - ಸ್ವಾಮಿಗಳ  ಐಶರಾಮಿ ಬದುಕನ್ನು ಕಂಡ ನಮ್ಮ ಉಮೇಶ, 2 ವರ್ಷ ತಪಸ್ಸು ಮಾಡುತ್ತೇನೆ ಎಂದು ಹಿಮಾಲಯಕ್ಕೆ ಹೊರಟು ನಿಂತಿದ್ದಾನಂತೆ, ಆದರೆ ಹಿಮಾಲಯದಲ್ಲಿ ಬಾರ್ ಇರುವುದೇ ಎಂದು ಕಂಡ- ಕಂಡವರಲ್ಲಿ ವಿಚಾರಿಸುತ್ತಿದ್ದಾನಂತೆ. 
                                                    ಡಾ. ಶೆಟ್ಟಿ 

3 comments:

  1. u hav really did a gud job...nyc:)

    ReplyDelete
  2. hey..it is not proper article....no need of mentionong "dalita"..indians are equal...there is no catagory..ofcourse pejavara shree also donating so many things..pl go and see once...

    ReplyDelete