Friday, January 7, 2011

 ಕೋ(ಟಿ)ತಿಯಾಟ
ಕರ್ನಾಟಕದಲ್ಲಿ ಕೊಳೆತು ನಾರುತ್ತಿರುವ ರಾಜಕೀಯ, ಕೋಟಿ ವ್ಯವಹಾರದಲ್ಲಿ ಕೋತಿಯಾಟವನ್ನು ಮಾಡಿದ ರಾಜಕಾರಣಿಗಳನ್ನು ಪ್ರತಿಯೊಬ್ಬರೂ ಖಂಡಿಸಿ ಬರೆದಿದ್ದಾರೆ. ಆದರೆ ಮತದಾರ ತನ್ನ ಮೂರ್ಖತನವನ್ನು ತೋರಿಸಿದ್ದಾನೆ, ಈ ಜಂಜಾಟದ ನಡುವೆಯೂ ಒಂದು ಪಕ್ಷದವರು ಮತ್ತೊಂದು ಪಕ್ಷದವರನ್ನು ಖರೀದಿಸಿ ರಾಜಕಾರಣವನ್ನು ಸಂತೆ ವ್ಯಾಪಾರಕ್ಕಿಂತಲೂ ಕೆಟ್ಟದಾಗಿ ಮಾಡಿದ್ದಾರೆ. ಆದರೆ ಎಲ್ಲರೂ ಆಪರೇಶನ್ ಕಮಲ ಎಂದು ಗುರಿಮಾಡುತ್ತಿರುವುದು ವಿಪರ್ಯಾಸ. ಆದರೆ ಇನ್ನುಳಿದ ಪಕ್ಷಗಳು ಈ ಕೆಲಸಮಾಡಿಲ್ಲವೇ?
ಹಿಂದೆ ಗೋಧ್ರಾದಲ್ಲಿ ಹಿಂಸಾಚಾರ ನಡೆದಾಗ, ಅದನ್ನು ಮೋದಿಯ ತಲೆಗೆ ಕಟ್ಟುವ ಪ್ರಯತ್ನ ಮಾಡಲಾಯಿತು. ಆದರೆ ಗುಜರಾತಿನ ಅಭಿವೃದ್ದಿಪ್ರಿಯ ಕ್ರಿಶ್ಚಿಯನ್ ಮತ್ತು ಮುಸ್ಲಿಮರು ನಂತರ ಬಂದ ಚುನಾವಣೆಯಲ್ಲಿ ಮೋದಿಯನ್ನು ಫುಲ್ ಮೆಜಾರಿಟಿಯಲ್ಲಿ ಆಯ್ಕೆ ಮಾಡಿದರು. ಕರ್ನಾಟಕ ರಾಜಕಾರಣದಲ್ಲಿ ಈಗ ಜಾತಿಯುಗ ಮುಗಿದು ಕೋತಿಯುಗ ಆರಂಭವಾಗಿದೆ. ಜನತೆ ಈ ಸತ್ಯವನ್ನು ಅರ್ಥಮಾಡಿಕೊಂಡು ಸರಿಯಾಗಿ ಮತನೀಡಿ, ಸಭ್ಯರನ್ನು ಆರಿಸಬೇಕು.
                                                        ಪ್ರೊ. ಮಲ್ಲಿ 

No comments:

Post a Comment