Tuesday, January 18, 2011

ಯೋಗ್ಯ ಆಯ್ಕೆ 
ವಿಶ್ವಕಪ್  ಕ್ರಿಕೆಟ್ ಗೆ ಭಾರತೀಯ ತಂಡ ಪ್ರಕಟವಾಗಿದೆ. ಯಾವತ್ತೂ ಆಯ್ಕೆಯ ವಿಚಾರದಲ್ಲಿ ಸದಾ ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿದ್ದ ಆಯ್ಕೆ ಸಮಿತಿ ಹಾಗೂ ಸಮಿತಿಯ ಅಧ್ಯಕ್ಷರಿಗೆ ಇದೊಂದು ಬಹುದೊಡ್ಡ ಸವಾಲೇ ಆಗಿತ್ತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಒಂದು ಉತ್ತಮ ತಂಡವನ್ನೇ ಪ್ರಕಟಮಾಡಿದ್ದಾರೆ ಶ್ರೀಕಾಂತ್ ಅವರು.
ಯಾವ ಕೋನದಿಂದ ತಂಡವನ್ನು ನೋಡಿದರೂ ಸಮತೋಲನ ಸರಿಯಾಗಿಯೇ ಕಾಣಿಸುತ್ತದೆ. ಸಚಿನ್, ಸೆಹ್ವಾಗ್ , ತಂಡದ ಅಡಿಪಾಯವಾದರೆ, ಧೋನಿ, ಯುವಿ, ಕೊಯ್ಲಿ, ರೈನಾ, ಆಧಾರ ಸ್ಥಂಭಗಳಾಗಿದ್ದಾರೆ. ಇವರ ನಡುವೆ ಕಾಣುವ ಜಹೀರ್, ಆಶಿಶ್, ಹರ್ಬಜನ್ ಸಿಂಗ್, ಯೂಸಫ್, 'ಲೆಗ್ ಸ್ಪಿನ್ನರ್' ಚಾವ್ಲ, ಅಶ್ವಿನ್, ಮುನಾಫ್ ತಲೆಕಟ್ಟಿನಂತೆ ಕಂಗೊಳಿಸಿದರೆ, ಮತ್ತೆ ಎದ್ದು ಕಾಣುವ ಯುವಿ ಹಾಗೂ ಯೂಸಫ್ ಎರಡೂ ವಿಭಾಗದಲ್ಲಿ ನಿಂತು Balanced all rounder ಎನಿಸಿದ್ದಾರೆ. 
ಬೌಲಿಂಗ್, ಬ್ಯಾಟಿಂಗ್ ಹಾಗೂ ಆಲ್ ರೌಂಡರ್ ವಿಭಾಗದಲ್ಲಿ ಅದಕ್ಕೆ ಸರಿಹೊಂದುವಂತಹ ಆಟಗಾರರನ್ನೇ ಆಯ್ಕೆ ಮಾಡಿರುವುದು ಆಯ್ಕೆದಾರರ ಪೂರ್ವನಿಯೋಜಿತ  ಆಲೋಚನೆಗಳಿಗೆ ಎತ್ತಿ ಹಿಡಿದ ಕನ್ನಡಿ. 
ಈ ಆಯ್ಕೆಗಳಲ್ಲಿ ಯಾವುದೇ ವೈಫಲ್ಯಗಳಿಲ್ಲ. ಆದರೆ ನಮ್ಮ ಕೆಲವು ಮಾಧ್ಯಮ ಮಿತ್ರರು ಕರ್ನಾಟಕ ತಂಡದ ಮಾನ ದಂಡವಾಗಿದೆ ಎನ್ನುವ ರೀತಿಯಲ್ಲಿ ಸುದ್ದಿಯನ್ನು ಬಿಂಬಿಸಿರುವುದು ನಿಜವಾಗಿಯೂ ವಿಷಾದನೀಯ. ನಾವು ದೇಶದ ಬಗೆಗಿನ ಆಲೋಚನೆಯಲ್ಲಿ ತೊಡಗಿರುವಾಗ ನಮ್ಮ ವ್ಯಾಪ್ತಿಯನ್ನು ನಾವು ಅರಿತು ಮುನ್ನಡೆಯ ಬೇಕು. ಒಂದೊಮ್ಮೆ ಈ ವಿಚಾರದಲ್ಲೂ ಭಾರೀ ಲಾಭಿಯೋ ಮೋಸವೋ ಆದರೆ  ಧ್ವನಿ ಎತ್ತುವುದು ಸಮಂಜಸ. ಅದು ಬಿಟ್ಟು ಅಗತ್ಯವೇ ಇಲ್ಲದ ಕಡೆ ಅನಗತ್ಯವಾಗಿ ಮಾತನಾಡಿದರೆ ಮಾಧ್ಯಮದ ಮರ್ಯಾದೆಗೆ ಕುಂದು ಎಂದಷ್ಟೇ ಹೇಳಬಹುದು. ಇದೆಲ್ಲದರ ಹೊರತಾಗಿ... ಹೊಸ ತಂಡಕ್ಕೆ 'ಬೆಸ್ಟ್ ಆಫ್ ಲಕ್' 
                                                             ಡಾ.ಶ್ರೇ 

1 comment:

  1. i think no need of leg spinner chawla..becoz after 2008 he did not play one one-day match also..i think it's better to select one wicket keeper/batsman..because who knows the way of time...?

    ReplyDelete