Saturday, January 29, 2011

ಆಚಾರವಿಲ್ಲದ ನಾಲಿಗೆ 
ಯಾರೇ ಒಬ್ಬ ಕಾನೂನು ಪದವಿ ಪಡೆದು ಅಥವಾ ಉನ್ನತ ಹುದ್ದೆಯಲ್ಲಿ ಇದ್ದವರು ಯಾವುದು ಹಿತ-ಅಹಿತ ಎಂದು ತಿಳಿಯುವ ಅಗತ್ಯವಿದೆ. ಕೊಳೆತ  ಆಲೋಚನೆಗಳನ್ನು ಮುಂದಿಟ್ಟುಕೊಂಡು ಮುಗ್ಧ ಮನಸ್ಸುಗಳ ಮೇಲೆ ತನ್ನ ಪ್ರಭಾವ ಬೀರಿದರೆ ಮನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
'ಗುಲಾಮಿ ಮಾನಸಿಕತೆಯಿಂದ  ಹೊರ ಬನ್ನಿ,ವಿಕ್ರತ ಮನಸ್ಸಿನ ವಿದೇಶಿಯರ  ಆಚರಣೆಗಳು ಬೇಡ.' ಎಂದು ವಿವೇಕೋತ್ಸವ 2011 ರ  ಸಂದರ್ಭದಲ್ಲಿ ರಾಜ್ಯ ವಕೀಲರ ಉಪಾಧ್ಯಕ್ಷ  ನ್ಯಾಯವಾದಿ ಪಿ.ಪಿ. ಹೆಗ್ದೆ ಹೇಳಿದ ಮಾತಿದು. 
ಸೀಮಿತ ಆಲೋಚನೆಗಳನ್ನು ಮಾಡಿ, ಬಾವಿಯಲ್ಲಿರುವ ಕಪ್ಪೆಯಂತೆ ವರ್ತಿಸುವ ಮತ್ತು ಭಾಷಣಗಳನ್ನು ಬಿಗಿಯುವ ಇವರುಗಳು, ಅದು ಯಾವ ರೀತಿಯ ರಾಷ್ಟ್ರಭಕ್ತಿ ತೋರಿಸುತ್ತಿದ್ದಾರೋ  ತಿಳಿಯುತ್ತಿಲ್ಲ. 
ಈ ಅಯ್ಯ ಬಾಯಿಪಾಠ ಮಾಡಿದ್ದು ಬ್ರಿಟಿಷರು ಜಾರಿಗೊಳಿಸಿದ ಕಾನೂನನ್ನು,ಧರಿಸಿದ್ದು ಕಪ್ಪು ಕೋಟನ್ನು; ಇಲ್ಲಿಯೂ ಮತ್ತೊಮ್ಮೆ ವ್ಯಕ್ತವಾಗುವುದು ಆತನ ಆಚಾರವಿಲ್ಲದ ನಾಲಿಗೆ.
ಇಂಗ್ಲಿಷರ ಬುದ್ದಿಯವರೇ ಇಂದಿಗೂ ದೇಶವನ್ನು ಆಳುತ್ತಿದ್ದಾರೆ ಎಂದು ಹೇಳುವ ಇವರುಗಳು, ಅದು ಯಾವುದೋ ಬೇರೆ ದೇಶ ಕಟ್ಟಲು ಹೊರಟಂತೆ  ಕಂಡುಬರುತ್ತಾರೆ. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಇವರುಗಳನ್ನು ನೆನಪು ಮಾಡುವ  ಸಂದರ್ಭದಲ್ಲಿ, ಅವರ ಹಾದಿಯಲ್ಲಿ ಸಾಗಿ, ಬದುಕಿನ ನಿಜ ಆರ್ಥ ತಿಳಿದವರಿಗೆ ಮಾತ್ರ ಇಂತಹ ಕಾರ್ಯಕ್ರಮದಲ್ಲಿ ಮಣೆಹಾಕಬೇಕು ಎಂಬುದು ನನ್ನ ವಿನಂತಿ.
                                  ಕೆ.ಪಿ.ಭಟ್                                         

No comments:

Post a Comment