Saturday, January 15, 2011

'ಅ' ಸಮತೋಲನದ ತಕ್ಕಡಿ

'ಅ' ಸಮತೋಲನದ ತಕ್ಕಡಿ 
'ಸಮಾಜ' ಮತ್ತು 'ನಾವು' ಎರಡು, ಒಂದೇ ನಾಣ್ಯದ ಎರಡು ಮುಖಗಳು. ಅದು ಯಾವತ್ತು ಜೊತೆಜೊತೆಯಾಗಿಯೇ ಇರುತ್ತದೆ. ನಮ್ಮ ಉದ್ಧಾರವೇ ಸಮಾಜದ ಉದ್ಧಾರ. ಸಮಾಜದ ಉದ್ಧಾರವೇ ನಮ್ಮ ಉದ್ಧಾರ. ಈ ಎರಡು ಕೊಂಡಿಯಲ್ಲಿ ಒಂದು ಕೊಂಡಿ ಕಳಚಿದರೂ ಅದರಿಂದ ನಮಗೂ ಮಾರಕ, ಸಮಾಜಕ್ಕೂ ಮಾರಕ.
ನಾವು ಕೇವಲ 'ನಾವು' ಉದ್ಧಾರ ಆಗಬೇಕೆಂಬ ಹಂಬಲದಲ್ಲಿ ತೀರಾ ಸ್ವಾರ್ಥಿಗಳಾಗಿ ಸಮಾಜವನ್ನು ಗಣನೆಗೇ ತೆಗೆದುಕೊಳ್ಳದೆ ಮುಂದುವರೆದರೆ ಸಮಾಜ; ನೈತಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ ಕುಸಿದು ಬಿಡುತ್ತದೆ. ಇದರ ಕುಸಿತದಿಂದ 'ನಾನು' ಇರುವ ತಕ್ಕಡಿ ಮೇಲೆ ಬರಬಹುದು. ಆದರೆ,ಇದರಿಂದ ನಾವು ಒಂದಲ್ಲ ಒಂದು ದಿನ ಅದೇ ತಕ್ಕಡಿಯಿಂದ ಜಾರಿ ದುರ್ನಾಥ ಸಮಾಜಕ್ಕೇ ಆಹುತಿಯಾಗಿ ಬಿಡುತ್ತೇವೆ. so ಇಲ್ಲಿ ಎಲ್ಲವು ಸಮತೋಲನದ ರೀತಿಯಲ್ಲೇ ಸಾಗಬೇಕು. ಎಲ್ಲಿಯೂ ಅಸಮತೋಲನೆಯ ಹೊಗೆ ಕೂಡಾ ಆಡಬಾರದು. ತುಸು ಅಸಮತೋಲನ ಕಂಡುಬಂದರೆ ಶಕ್ತಿಯುತ ಸಮಾಜದ ನಿರ್ಮಾಣ ಸಾಧ್ಯವೇ ಇಲ್ಲ.
ಇವತ್ತಿನ ದಿನ ನಮ್ಮ ಸಮಾಜ ಇದೇ ಅಸಮತೋಲನದಲ್ಲಿ ಬದುಕುತ್ತಿದೆ ಎಂದರೆ ಸುಳ್ಳಲ್ಲ. ಬಹಳ ಸೂಕ್ಷ್ಮವಾಗಿ ಸಮಾಜವನ್ನು ಗಮನಿಸಿ ನಾವು ಪರಮಾರ್ಶಿಸಿದರೆ, ಸಮಾಜದ ಅಡಿಪಾಯವಾಗಿರುವ ವ್ಯವಸ್ಥೆಗಳೇ ಅಲುಗಾಡುತ್ತಿದೆ. ಕಾರ್ಯಾಂಗ ಶಾಸಕಾಂಗವಂತು ತೀರಾ ಹದಗೆಟ್ಟು ಹೋಗಿದೆ. ಕೇವಲ ನ್ಯಾಯಾಂಗ ಮತ್ತು ಕುಂಟುತ್ತಿರುವ ಪತ್ರಿಕಾ೦ಗದಿಂದ,  ತುಸು ಸಾವರಿಸಿಕೊಂಡು ಸಮಾಜ ನಿಂತಿದೆ. ರಾಜಕೀಯ ಕಲ್ಮಶ, ಅರ್ಥ ವ್ಯವಸ್ಥೆಯ ದುರುಪಯೋಗ, ಇಲಾಖೆಗಳಿಗೆ ಹಿಡಿದ ಖಾಯಿಲೆ ಇವೆಲ್ಲವೋ  ಇದಕ್ಕೆ ಸಾಕ್ಷಿ.
ಇಂತಹ ಸಂದರ್ಭದಲ್ಲಿ, ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಸಿಹಿ ತಿನ್ನುತ್ತಲೋ, ಖಾರ ತಿನ್ನುತ್ತಲೋ ಅವರವರ ವ್ಯಾಪ್ತಿಯಲ್ಲಿಯೇ ವ್ಯವಸ್ಥೆಯನ್ನು  ದೂರಿಕೊಂಡು, ಬದಲಾವಣೆ ಬೇಕೆಂದುಕೊಂಡು, ಮತ್ತೆ ಗಾಂಧಿಯೋ, ಬೋಸೋ, ಬುದ್ಧನೋ, ಇನ್ಯಾರೋ ಅಂತಹ ಡೈನಮಿಕ್ ಹೀರೋಗಳು ಬೇಕು ಎನ್ನುತ್ತಾರೆ. ಇತ್ತ ಕಡೆ, ಅವರ ಮಗ ಸಮಾಜೋದ್ಧಾರದ ಕೆಲಸದಲ್ಲಿ ತೊಡಗಿದ್ದಾನೆ ಎಂದು ಗೊತ್ತಾದರೆ, ಒಳಗೆ ಕೂರಿಸಿ; ಮಗಾ, ನೀನು ಮೊದಲು ಉದ್ಧಾರ ಆಗು; ಮತ್ತೆ ಸಮಾಜವನ್ನು ಉದ್ಧಾರ ಮಾಡು ಎನ್ನುತ್ತಾರೆ.
ಕೊನೆಯದಾಗಿ ಒಂದು ಮಾತು, ನಾವೆಲ್ಲರೂ ಸಮಾಜದ ಉದ್ಧಾರಕ್ಕೆ ದುಡಿಯಲೇ ಬೇಕು. ಏನಿದು? ಎಲ್ಲರಂತೆಯೇ,ಇವರದೂ ಕೂಡಾ ವ್ಯವಸ್ಥೆಯನ್ನು ದೂರುವಂತಹ ಮತ್ತೊಂದು ಟೀಂ ಎನಿಸಬಹುದು. ಅಲ್ಲ.. ನಮ್ಮದು ವ್ಯವಸ್ಥೆಯ ವಿರುದ್ಧದ ಹೋರಾಟ ಅಲ್ಲ, ಹೊಸ ವ್ಯವಸ್ಥೆಯನ್ನು  ಕಟ್ಟುವತ್ತ  ಓಡಾಟ.  
                                                          -ಡಾ.ಶ್ರೇ                                                

No comments:

Post a Comment