Friday, January 21, 2011

ದೇಶದ ಇತಿಹಾಸ ಬದಲಾಗಬೇಕಿದೆ 
ದೇಶವೊಂದರ ಪ್ರಜೆಗಳನ್ನು ರೂಪಿಸುವಲ್ಲಿ ಆ ದೇಶದ ಚರಿತ್ರೆ ಮುಖ್ಯ ಪಾತ್ರ ವಹಿಸುತ್ತದೆ, ನಮಗೆ ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಬೇಕಾದರೆ ನಮ್ಮ ದೇಶದ ಚರಿತ್ರೆ ಚೆನ್ನಾಗಿರಬೇಕು. ಆದರೆ ವಿಪರ್ಯಾಸ ಎಂದರೆ ನಮ್ಮಲ್ಲಿರುವ ಇತಿಹಾಸದ ಪುಸ್ತಕಗಳು ಇದ್ದದ್ದನ್ನು ಇದ್ದ ಹಾಗೆ ಹೇಳದೆ ಸುಳ್ಳಿನ ಕಂತೆಗಳನ್ನೇ ತೆರೆದಿಡುತ್ತಿವೆ. 
ಇಂಗ್ಲೀಷರು ತಮ್ಮ ಸ್ವರ್ಥಕೋಸ್ಕರ , ಕ್ರಿಶ್ಚಿಯನ್ ಧರ್ಮದ ಪ್ರಚಾರಕೋಸ್ಕರ ನಮ್ಮ ದೇಶದ ಚರಿತ್ರೆಯನ್ನು ತಿದ್ದಿ ತಮಗೆ ಬೇಕಾದಂತೆ ಬದಲಾಯಿಸಿದ್ದರು. ಆದರೆ ಆಶ್ಚರ್ಯ ಎಂದರೆ ಸ್ವಾತಂತ್ರ ಬಂದ ನಂತರವೂ ನಮ್ಮ ಕಾಂಗ್ರೆಸ್ ಸರಕಾರ,  ತಮ್ಮನ್ನು ತಾವು ಮಹಾನ್  ಎಂದು ಕರೆಸಿಕೊಳ್ಳುವ ನಾಯಕರು, ಬ್ರಿಟಿಷರು ಬರೆದ ಚರಿತ್ರೆಯನ್ನೇ ಮುಂದುವರಿಸಿಕೊಂಡು ಹೋದದ್ದು!
ಇದರ ಪರಿಣಾಮ ನಾವು ಓದಿದ ಚರಿತ್ರೆಯ ಪುಸ್ತಕಗಳಲ್ಲಿ ಔರಂಗಜೇಬ್, ಬಾಬರ್ ಮೊದಲಾದ ಕ್ರೂರಿ, ಹಿಂದೂ ವಿರೋಧಿ ರಾಜರನ್ನು ಕೂಡ ನಾವು ಸರ್ವಧರ್ಮಸಹಿಷ್ಣು ಗಳು ಎಂದೇ ಓದಿಕೊಂಡಿದ್ದೇವೆ,ಇವರು ಮಾಡಿದ ಅನ್ಯಾಯ, ಅನಾಚಾರಗಳು, ಹಿಂದೂ ಜನರ ಮಾರಣಹೋಮ, ಅಮಾಯಕ ಹಿಂದೂ ಹೆಂಗಳೆಯರ ಮಾನ ಹರಣಕ್ಕೆ ಲೆಕ್ಕವಿದೆಯೇ? 
ಇಂಥಹ ಸುಳ್ಳುಗಳನ್ನು ಓದಿದ ನೇರ ಪರಿಣಾಮ, ನಮ್ಮ ವಿಧ್ಯಾರ್ಥಿಗಳ ಮೇಲೆ ಆಗುತ್ತಿದೆ, ದೇಶದ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಯುವಜನರು, ತಮ್ಮ ಮೂಗಿನ ನೇರಕ್ಕೆ ದೇಶದ ಚರಿತ್ರೆಯನ್ನು ನೋಡುತ್ತಿದ್ದಾರೆ. ಇದರಿಂದಾಗಿ ಯುವಜನರಿಗೆ ನಮ್ಮ ದೇಶದ ಚರಿತ್ರೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆಯಿದೆ. 
ಇನ್ನು ಕೂಡ ನಮ್ಮ ಚರಿತ್ರೆಯನ್ನು ಸರಿಯಾಗಿ ತಿಳಿಸುವ ಪ್ರಯತ್ನ ನಡೆಯುತ್ತಿಲ್ಲ, ಮೊನ್ನೆ ತಾನೇ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಕಟಗೊಂಡ ಇತಿಹಾಸದ ಪುಸ್ತಕದಲ್ಲಿ ಚೈನಾ ಯುದ್ಧದ ಬಗ್ಗೆ ಪ್ರಸ್ಥಾವನೆಯಿಲ್ಲ, ಕಾರಣವೆಂದರೆ ಚೈನಾ ಯುದ್ಧದ ಸೋಲಿಗೆ ನೇರ ಕಾರಣ ನೆಹರು ಎಂಬ ಸತ್ಯವನ್ನು ಅಡಗಿಸಿಡಬೇಕಲ್ಲವೇ!
ಸುಳ್ಳು ಸುಳ್ಳು ಚರಿತ್ರೆಯನ್ನು ಓದಿ, ತಿಮ್ಮನನ್ನು ಬೊಮ್ಮ ಮಾಡಿ, ಅದನ್ನು ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಅಧ್ಯಯನಕ್ಕೆ  ನೀಡಿದ ಪರಿಣಾಮದಿಂದ, ಇಂದಿನ ವಿದ್ಯಾರ್ಥಿಗಳು 'ರಾಜರಾಮ್ ಮೋಹನ್ ರಾಯ್ ಅವರು ದೇಶದಲ್ಲಿ ಇಂಗ್ಲೀಶ್ ಶಿಕ್ಷಣ ಪದ್ದತಿ ಜಾರಿಗೆ ತರಬೇಕೆಂದು ಕ್ರಿಶ್ಚಿಯನ್ ಮಿಷನರಿಗಳಿಂದ ಲಂಚ ತೆಗೆದುಕೊಂಡಿದ್ದಾರೆ' ಎಂಬ ಒಣಚರ್ಚೆ ಯನ್ನು ಮಾಡುತ್ತಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸಗಳು, ಸಾಮಾಜಿಕ ಬದಲಾವಣೆ ಇವರಿಗೆ ಎಲ್ಲಿಂದ ತಿಳಿಯಬೇಕು? ಮೆಕಾಲೆಯ ಇಂಗ್ಲೀಶ್ ಶಿಕ್ಷಣದಿಂದ ಎಲ್ಲವೂ ಬದಲಾಯಿತು, ದೇಶದ ಇತಿಹಾಸ ಕೂಡ, ಏನಂತೀರಿ?
                                                            -ಡಾ. ಶೆಟ್ಟಿ     

No comments:

Post a Comment