Wednesday, January 5, 2011

ಬ್ಲ್ಯಾಕ್ ಹೋಲ್
ಖೈದಿಯೊಬ್ಬನಿಗೆ ಕೊಡಬಹುದಾದ ಶಿಕ್ಷೆಯಲ್ಲಿ ಬ್ಲ್ಯಾಕ್ ಹೋಲ್  ಅಥವಾ ಏಕಾಂತವಾಸ ಎಂಬುವುದು ಗಲ್ಲುಶಿಕ್ಷೆಗಿಂತಲೂ ಕೆಟ್ಟದಾದದ್ದು. ಸ್ವತಂತ್ರಪೂರ್ವದಲ್ಲಿ ಈ ಶಿಕ್ಷೆಗೆ ಗುರಿಯಾದರೆ  ಆತನ ಬವಣೆ ಹೇಳತೀರದು, ಯೂರೋಪಿನ ಸುಸಂಸ್ಕೃತ ಸಮಾಜದಲ್ಲೂ ಈ ಶಿಕ್ಷೆ ಜಾರಿಯಲ್ಲಿತ್ತು.
ಗಯಾನ, ಲೊರೆನ್ಸ್, ಅಂಡಮಾನ್ ಮುಂತಾದ ದ್ವೀಪದಲ್ಲಿರುವ ಸೆರೆಮನೆಗಳು ಒಂದು ಬಾರಿ ಖೈದಿಯೊಬ್ಬನನ್ನು ಈ ಶಿಕ್ಷೆಗೆ ತಳ್ಳಿದರೆ ಆತನ ಪಾಡು ಕೇಳುವವರಿಲ್ಲ. ಆಹಾರದ ಕೊರತೆ, ಕೆಲವೊಮ್ಮೆ ಉಪವಾಸ, ಸಾಗರದ ಹಿನ್ನೀರಿನ ಪ್ರವೇಶ ಅದರ ಜೊತೆಗೆ ಹೆಗ್ಗಣ, ಏಡಿ ಒಟ್ಟಿನಲ್ಲಿ ಆತನ ನರಕಯಾತನೆ ನಮ್ಮ ಶತ್ರುವಿಗೂ ಬೇಡ.
ಹೆಚ್ಚಿನ ಸಂಧರ್ಭ ಖೈದಿಯು ಆತ್ಮಹತ್ಯೆಗೆ ಶರಣಾಗುತಿದ್ದ, ಶಿಕ್ಷೆ ಮುಗಿಸಿ ಹೊರಬರುವ ಸಂಧರ್ಭ ಕಡಿಮೆ. ಬಂದರೂ, ಆತ ಮಾನಸಿಕ ಅಸ್ವಸ್ಥನಾಗಿರುತಿದ್ದ.
ಈ ಶಿಕ್ಷೆಯ ಅನಿವಾರ್ಯತೆ ಈಗಿನ  ಭ್ರಷ್ಟ ರಾಜಕಾರಣಿಗಳಿಗೆ, ಅಟ್ಟಹಾಸ ಮೆರೆಯುವ ಭೂಗತಪಾತಕಿಗಳಿಗೆ ಅಗತ್ಯವಿದೆ.
                                                                                                               -ಕೆ.ಪಿ. ಭಟ್ 

2 comments:

  1. ya...i heard that punishment..and experienced by some freedom fighters of our country and read in some books...

    ReplyDelete
  2. keep visiting friend, and give me your valueable feedback

    ReplyDelete