Friday, January 14, 2011

ಗಾನ್ ವಿತ್ ದ ವಿಂಡ್ ?
ಗಾನ್ ವಿತ್ ದ ವಿಂಡ್ 1936  ರಲ್ಲಿ ಮೊದಲು ಪ್ರಕಟವಾಗಿ ಸುಮಾರು ಮೂರು ಕೋಟಿ ಪ್ರತಿಗಳು ವಿತರಣೆಗೊಂಡಿರುವ ಕಾದಂಬರಿ.1939 ರಲ್ಲಿ  ಇದನ್ನು ಚಲನಚಿತ್ರವಾಗಿ ತೆಗೆಯಲಾಯಿತು. ಜನಪ್ರಿಯತೆ ಹಾಗೂ ವಿಶ್ವವಿಖ್ಯಾತಿಯ ದೃಷ್ಟಿಯಲ್ಲಿ  ಇದನ್ನು ಮೀರಿಸಿದ ಚಿತ್ರ ಈವರಗೆ ಕಂಡಿಲ್ಲ. 
ಜೀತ ಪದ್ದತಿಯನ್ನು ತೊಲಗಿಸುವ ಪಣತೊಟ್ಟ ಅಮೇರಿಕ ಅಧ್ಯಕ್ಷ ಅಬ್ರಹಂ ಲಿಂಕನ್ ರ ಪ್ರಯತ್ನಕ್ಕೆ ಎದುರಾಗಿ ಸಂಘಟಿತರಾಗಿ ಎದ್ದು ನಿಂತ, ಹೀಗೆ ಪ್ರೇಮ ಕಥೆ ಎಲ್ಲವನ್ನು ತನ್ನ ಮಡಿಲಲ್ಲಿ ಇರಿಸಿಕೊಂಡ ಎಲ್ಲರೂ ಓದಬೇಕಾಗಿರುವ ಮಹತ್ವದ ಕೃತಿ. 
ಸಮಾಜದಲ್ಲಿನ ಏಳುಬೀಳುಗಳನ್ನು ಕಣ್ಣು ಕಟ್ಟುವಂತೆ ತೋರಿಸಿದ ಬರಹಗಾರ್ತಿ, ಮಾರ್ಗರೆಟ್ ಮಿಷೆಲ್ ಅವರದ್ದು ಒಂದು ಸಾರ್ಥಕ ಬದುಕು ಎನ್ನಬಹುದು. 
ಗಾನ್ ವಿತ್ ದ ವಿಂಡ್ ನ ಚಲನಚಿತ್ರದ ಹೆಚ್ಚಿನ ಕಲಾವಿದರು, ನಿಜ ಜೀವನದಲ್ಲಿ ಒಬ್ಬರ ನಂತರ ಒಬ್ಬರಿಗೆ ದುರಂತಗಳು ಎದುರಾಗಿ ವಿಧಿ ವಶರಾದರು. ಈ ದುರಂತದ ಸರಮಾಲೆ ಈಗ ಇತಿಹಾಸ.ಚಲನಚಿತ್ರ ಕಲಾವಿದರ ದುರಂತ ಕಥೆ ಮತ್ತು ಈ ಕೃತಿಯ ಕಥೆಗಿರುವ ಸಂಬಂಧದ ಹುಡುಕಾಟದಲ್ಲಿ ನಾನಿದ್ದೇನೆ.
                      - ಕೆ.ಪಿ.ಭಟ್ 

No comments:

Post a Comment