Saturday, January 29, 2011

ನ್ಯಾಯ?
ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವರದಿ ನಿನ್ನೆ ಶುಕ್ರವಾರ ಲೋಕಾರ್ಪಣೆ ಯಾಗಿದೆ. ನ್ಯಾ. ಬಿ.ಕೆ.ಸೋಮಶೇಖರ್ ನೇತ್ರತ್ವದ ವಿಚಾರಣಾ ಆಯೋಗವು, ಬಿ.ಜೆ.ಪಿ. ಹಾಗೂ ಹಿಂದೂ ಪರ ಸಂಘಟನೆಗಳು ದಾಳಿಯ 'ಕಾರ್ಯಕರ್ತ' ರಲ್ಲ ಎಂದು ವರದಿಯಲ್ಲಿ ಹೇಳಿದೆ.
ಈ ಆಯೋಗವು ಬಹಳ ಕೂಲಂಕುಶವಾಗಿ, ವಿಸ್ತ್ರತವಾಗಿ, ವಿನೂತನವಾಗಿ, ವಿಡಂಬನಾತ್ಮಕತೆಯ  ಗೋಜಿನ ಹೊರತಾಗಿ ಪೂರ್ತಿ ಸನ್ನಿವೇಶವನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಪರಿಪಕ್ವ ಹೀನತೆಯ ಹಂಗಿಗೆ ತಲೆಕೊಡದೆ ಅಧ್ಯಯನ(?) ನಡೆಸಿ ಜನತೆಯ ಎದುರಿಗೆ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಕರ್ನಾಟಕದ ಅತ್ಯಂತ ಮೂರ್ಖಶಿಖಾಮಣಿಗೂ ಅರಿವಾಗಿದೆ. ಎಲ್ಲೆಲ್ಲೂ ಆಯೋಗದ ಮೇಲೆ ಕೆಂಗಣ್ಣು ಬೀರುವ ಜನಗಳೇ ನಮ್ಮ ನಡುವೆ ತುಂಬಿರುವ ಈ ಸಂದರ್ಭದಲ್ಲೂ, ಆಯೋಗದ 'ಅಭೂತಪೂರ್ವ' ಸಾಧನೆ ಮೆಚ್ಚತಕ್ಕದ್ದು. ಯಾವುದೇ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗದೆ ಇಡೀ ಪ್ರಸಂಗವನ್ನು ಸೂಕ್ಷ್ಮವಾಗಿ ಗಮನಿಸಿ ಬಹಳ ಗಂಭೀರವಾಗಿ ಆಯೋಗ ವರದಿ ಸಲ್ಲಿಸಿದೆ. 
ಈ ವರದಿಯಿಂದ, ಜನತೆಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ನಂಬಿಕೆ 'ದುಪ್ಪಟ್ಟಾ'ಗಿದೆ. ಎಂದರೂ ತಪ್ಪಿಲ್ಲ. ಇಂತಹ ನ್ಯಾಯಾಂಗ ವ್ಯವಸ್ಥೆ ಎಲ್ಲೆಡೆ ಸಂಪೂರ್ಣವಾಗಿ ಹಾಸು ಹೊಕ್ಕಾದರೆ ಇಡೀ ದೇಶ ಭಧ್ರತೆಯ ಬುನಾದಿಯ ಅಂಚನ್ನು ತಲುಪಿ ಎಲ್ಲಾ ರಾಷ್ಟ್ರಗಳನ್ನು ಮೀರಿಸಿ, ಸುಸಂಪನ್ನ ಅದಕ್ಕೂ ಮೀರಿ ನ್ಯಾಯ ಸಂಪನ್ನ ದೇಶ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
                                                                      -ಡಾ.ಶ್ರೇ.

No comments:

Post a Comment