Tuesday, January 18, 2011

ರಸ್ತೆ ಪುರಾಣ!!! 
ಇತ್ತೀಚಿಗೆ ಹಿಂದಿಯಲ್ಲಿ ತೆರೆ ಕಂಡ ಅಂಜಾನ-ಅಂಜಾನಿ ಚಿತ್ರದ ಪದ್ಯದ ದ್ರಶ್ಯ ಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ, ಅದರ ಪದ್ಯ ಒಂದರಲ್ಲಿ ನಾಯಕ ರಣಬೀರ್ ಮತ್ತು ನಾಯಕಿ ಪ್ರಿಯಾಂಕ , ಅಮೇರಿಕಾದ ತೀರಾ ಹಳ್ಳಿಯೊಂದರಲ್ಲಿ ಕಾರಿನಲ್ಲಿ ಹೋಗುವ ದೃಶ್ಯವಿದೆ; ಸುತ್ತ ಮುತ್ತ ಬರೇ ಬೆಟ್ಟ ಗುಡ್ಡಗಳೇ ತುಂಬಿರುವ ಆ ಹಳ್ಳಿಯ ರಸ್ತೆಯನ್ನು ಒಮ್ಮೆ ಸರಿಯಾಗಿ ಗಮನಿಸಿ, ಸತ್ಯ ಹೇಳುತ್ತೇನೆ ನಮ್ಮ ದೇಶದ ಮಹಾ ನಗರಗಳಲ್ಲೇ ಅಷ್ಟು ಚಂದದ ರಸ್ತೆ ಕಾಣುವುದಿಲ್ಲ. ನಮ್ಮ ದೇಶಕ್ಕೆ ಯಾಕೆ ಈ ದುರವಸ್ಥೆ ? ನಮ್ಮ ದೇಶದ ರಸ್ತೆಗಳು ಯಾಕೆ ಈ ರೀತಿ ಇದೆ? ನಮ್ಮ ರಸ್ತೆಗಳಲ್ಲಿ ಮನುಷ್ಯರು ಹೋಗುವ ಬದಲಾಗಿ ಹೆಣ ಸಾಗಿಸುವುದೇ ಉತ್ತಮ.
ಹಳ್ಳಿಗಳನ್ನು ಬಿಡಿ, ದೇಶದ,ರಾಜ್ಯದ ಪ್ರಮುಖ ನಗರಗಳನ್ನು ಸೇರಿಸುವ ಹೆದ್ದಾರಿಗಳೇ ತೂತು ಬಿದ್ದು ಹೋಗಿದೆ. ನಮ್ಮಲ್ಲಿ ರಸ್ತೆ ಮಾಡುವುದೇ ಕಷ್ಟದಲ್ಲಿ, ಹೇಗೋ ರಸ್ತೆಯೊಂದು ರೆಡಿಯಾಯಿತು ಎಂದಿಟ್ಟುಕೊಳ್ಳಿ ಆಗ ಶುರುವಾಗುತ್ತದೆ, ರಸ್ತೆಯನ್ನು ಅಗೆದು ಕೇಬಲ್ ಅಳವಡಿಸುವವರು, ಹೆಣ ಭಾರದ  ಲೋಡ್ ಗಳನ್ನು ಹೊತ್ತುಕೊಂಡು ಸಾಗುವ ಲಾರಿಗಳು ಒಟ್ಟಿನಲ್ಲಿ ಇಡೀ ರಸ್ತೆಯನ್ನು ಕುಲಗೆಡಿಸಿ ಬಿಡುತ್ತಾರೆ. ಇದರ ಜೊತೆಗೆ ಕಳಪೆ ಕಾಮಗಾರಿಗಳಲ್ಲಿ ಬೇಕಾ ಬಿಟ್ಟಿ ರಸ್ತೆ ನಿರ್ಮಿಸುತ್ತಾರೆ . ಇಂತಹ ರಸ್ತೆಗಳು ನಿರ್ಮಾಣವಾದ ಮರುದಿನದಿಂದಲೇ ಹಾವು ಪೊರೆ ಬಿಟ್ಟಂತೆ ತನ್ನ ಒಡಲಲ್ಲಿ ಇರುವ  ಡಾಂಬರು ಮತ್ತು ಜಲ್ಲಿಗಳನ್ನು ಹೊರಕಕ್ಕುತ್ತವೆ. ನಮ್ಮ ದೇಶದ ರಸ್ತೆಗಳು ಉದ್ಧಾರವಾಗಲು ಸಾಧ್ಯವಿಲ್ಲವೇ? 
ಹಾಗೇ ಸುಮ್ಮನೆ- ಭಾರತೀಯ ರಸ್ತೆಗಳ ಬಗ್ಗೆ ಉಮೆಶನಲ್ಲಿ ಕೇಳಿದಾಗ ಆತನ ಕಣ್ಣಲ್ಲಿ ನೀರು ಬಂತು. ಸರಿಯಾಗಿ ವಿಚಾರಿಸಿದಾಗ ತಿಳಿಯಿತು ಉಮೇಶನ ತಂದೆ ಇಂತದೆ ಕುಲಗೆಟ್ಟ ರಸ್ತೆಯೊಂದರಲ್ಲಿ ಪ್ರಯಾಣಿಸುತ್ತಿರುವಾಗ, ಕುಲುಕಾಡಿ ಕುಲುಕಾಡಿ ಕಿಡ್ನಿ ಹೊರ ಬಿದ್ದು ಸತ್ತದ್ದಂತೆ.
                                      ಡಾ.ಶೆಟ್ಟಿ 

No comments:

Post a Comment