Saturday, January 8, 2011

ಹೊಸ 'ತೇಜಸ್ಸು' ಹೊಮ್ಮಲಿ 
ಪೂರ್ಣಚಂದ್ರ ತೇಜಸ್ವಿ ನೀವು ಮತ್ತೆ ಹುಟ್ಟಿ ಬರಬೇಕು. ಜಗತ್ತನ್ನು ವಿಸ್ಮಯ ಕಣ್ಣುಗಳಿಂದ ನೋಡುವ,ಛಾಯಾಗ್ರಹಣದಲ್ಲಿ ಕೈಚಳಕ ತೋರಿಸುವ ನೀವು, ಪಕ್ಷಿಯೊಂದು ಮೊಟ್ಟೆಯಿಡಲು ಗೂಡು ಕಟ್ಟಲು ಶುರುಹಚ್ಚಿದಾಗಲೇ, ಅದರ ಹಿಂದೆ ಬಿದ್ದು ಕಾಡು ಮೇಡು ಅಲೆಯುವ ನಿಮ್ಮ ಮನಸ್ಸು, ಚಿಂತನೆ ಇತರರಲ್ಲಿ ಯಾಕೆ ಬರುತ್ತಿಲ್ಲ?
ತೇಜಸ್ವಿಯವರ ಬರವಣಿಗೆಗಳು ಸಾಮಾನ್ಯ ಜನರಿಗೂ ತಲುಪುತ್ತಿತ್ತು. ಆದರೆ ಈಗ ಕುರುಚಲು ಗಡ್ಡಬಿಟ್ಟು, ಆಚಾರವಿಲ್ಲದ ವಿಚಾರಗಳನ್ನು ಗಡ್ದಕೆರೆದುಕೊಂಡು ವಿಚಾರ ಮಾಡುವ ಮೂರ್ತಿಗಳು, ಆಂಗ್ಲ ಸಾಹಿತ್ಯ ಓದಿ ಅಲ್ಲಿ ವಾಂತಿ ಮಾಡಲು ಜಾಗವಿಲ್ಲದೆ, ಸಂಸ್ಕೃತಿ ಮೊದಲಾದುವುಗಳ ಬಗ್ಗೆ ಬರೆದು, ಭಾಷಣ ಬಿಗಿಯುವ ಈಗಿನ, ಸ್ವಯಂಘೋಷಿತ ಸಾಹಿತಿಗಳು, ಸಾಹಿತ್ಯವನ್ನು ಕುಲಗೆಡಿಸುತ್ತಿದ್ದಾರೆ. 
ತೇಜಸ್ವಿ ಬರಹಗಳು ಅವರ ಮನಸ್ಸಿನ ಎಲ್ಲಾ ಆಗು ಹೋಗುಗಳನ್ನು ಬಿಂಬಿಸುತ್ತವೆ. ಒಮ್ಮೆ ಅವರ ಬರಹವನ್ನು ಹಿಡಿದು ಓದಲು ಕುಳಿತರೆ ಪೂರ್ತಿ ಓದಿದ ಬಳಿಕ ಮನಸ್ಸಿಗೆ ಸಮಾಧಾನ. ಪ್ರಕೃತಿಯೊಂದಿಗೆ ನಮ್ಮನ್ನು ಕೊಂಡುಹೋಗುವ ತೇಜಸ್ವಿ ಬರಹಗಳು ಇಂದು ಬಹುವಾಗಿ ಮೂಡಿ ಬರಲಿ, ಅಂತಹ ಬರಹಗಳು ಶಾಶ್ವತವಾಗಿ ಉಳಿಯುದರಲ್ಲಿ ಸಂಶಯವಿಲ್ಲ.
ಆಂಗ್ಲ ಸಾಹಿತ್ಯದ ಜ್ಞಾನ ಇದ್ದರೆ ಸಾಕು, ಅದನ್ನು ನಮ್ಮ ಸಂಸ್ಕ್ರತಿಯೊಂದಿಗೆ ವಿನಿಮಯ ಮಾಡುವ ಅಗತ್ಯವಿಲ್ಲ. ಮನಸ್ಸಿನ ತೀಟೆತೀರಿಸಲು, ಯಾರಿಗೂ ಅರ್ಥವಾಗದ ಕವಿತೆ, ಹನಿಗವನ ಬರೆದು, ಪತ್ರಿಕೆಯ ಜಾಗ ಹಾಳುಮಾಡುವ ಕ(ಪಿ)ವಿಗಳೇ, ಮೊದಲು ಅದನ್ನು ಬಿಟ್ಟು ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪುವಂತೆ ಮಾಡಿ.
                                                   ಕೆ. ಪಿ. ಭಟ್  

1 comment:

  1. putta...gadda keredukondu vichaara maadu va moortigalu...ha..ha...got...got..aaru heli sikki aapaga helte..nice one

    ReplyDelete