Friday, January 14, 2011

ಬಡವರಿಗೆ ಮೂರು ರೂಗೆ ಅಕ್ಕಿ 
ಬಡವರಿಗೆ ಪ್ರತಿ ಕೆ.ಜಿ ಅಕ್ಕಿಯನ್ನು ಮೂರು ರೂ ಮತ್ತು ಗೋಧಿಯನ್ನು ಎರಡು ರೂ ಗೆ ವಿತರಿಸುವಂತೆ ರಾಷ್ಟ್ರೀಯ ಆಹಾರ ಭಧ್ರತಾ ಸಮಿತಿ ಶಿಫಾರಸು ಮಾಡಿದೆ. ಇದೊಂದು ಉತ್ತಮ ಯೋಜನೆ, ದಿನ ಕಳೆದಂತೆ ದಿನಬಳಕೆ ವಸ್ತುಗಳ  ಬೆಲೆ ಗಗನಕ್ಕೆ ಏರುತ್ತಿರುವುದರಿಂದ, ಕೇಂದ್ರ ಸರಕಾರದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ದೇಶದ ಬಡವರು ನೆಮ್ಮದಿಯಿಂದ ಉಸಿರಾಡುವಂತೆ ಆಗುತ್ತದೆ.
ಯಾಕೆಂದರೆ, ಈ ಯೋಜನೆಯಿಂದಾಗಿ ಬಡವರಿಗೆ 25 ಕೆ.ಜಿ  ಅಕ್ಕಿ ಯಾ ಗೋಧಿ ಮೂರು ರೂ ಪ್ರತಿ ಕೆ.ಜಿಗೆ ದೊರೆಯುತ್ತದೆ. ಈ ಯೋಜನೆಯು ಸದ್ಯ ಬಡವರಿಗೆ ಮಾತ್ರ ಮೀಸಲಾಗಿರುವುದರಿಂದ, ಸಾಮಾನ್ಯ ಜನರಿಗೆ ಈ ಯೋಜನೆಯಿಂದ ಪ್ರಯೋಜನ ದೊರೆಯಲಾರದು.
ಆದುದರಿಂದ ಈ ಯೋಜನೆಯನ್ನು ಬಡವರ ಜೊತೆಗೆ ಮಧ್ಯಮ ವರ್ಗದವರಿಗೂ ವಿಸ್ತರಿಸಬೇಕಾದ ಅಗತ್ಯವಿದೆ. ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಸರಕಾರ ಕೇವಲ ಬಡವರನ್ನು ಮಾತ್ರ ಗುರಿಯಾಗಿಸುತ್ತದೆ, ಬಡವರಿಗೆ ರೇಶನ್ ಕಾರ್ಡಿನಲ್ಲಿ ಅಕ್ಕಿ ಗೋಧಿ ಮಿತದರದಲ್ಲಿ ದೊರೆಯುತ್ತಿದೆ, ಆದರೆ ಮಧ್ಯಮವರ್ಗದ ಜನತೆಗೆ ರೇಷನ್ ಕಾರ್ಡ್ ಇದ್ದು ಇಲ್ಲದಂತಿರುತ್ತದೆ. ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನತೆ ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. 
ಮೂರೂ ರೂಪಾಯಿ ಗೆ ಅಕ್ಕಿ ಒಂದು ಉತ್ತಮ ಯೋಜನೆ, ಆದರೆ ಅದನ್ನು ಮಧ್ಯಮವರ್ಗದವರಿಗೂ ಅದನ್ನು ವಿಸ್ತರಿಸಬೇಕು.
ಹಾಗೇ ಸುಮ್ಮನೆ - ಬಡವರಿಗೆ ಮೂರೂ ರೂಪಾಯಿ ಗೆ ಅಕ್ಕಿ ವಿತರಿಸಲಾಗುವುದು ಎಂಬುದನ್ನು ಕೇಳಿದ ಉಮೇಶ, ಎಣ್ಣೆ ಮತ್ತು ಸಿಗರೇಟುಗಳನ್ನು ಕೂಡ ಮಿತದರದಲ್ಲಿ ಒದಗಿಸಬೇಕು ಎನ್ನುತ್ತಿದ್ದಾನೆ. ಯಾಕೆಂದರೆ ದಿನದಿಂದ ದಿನಕ್ಕೆ ಇದರ ಬೆಲೆ ಏರುತ್ತಿದ್ದರೂ ಮುಷ್ಕರ ಮಾಡುವವರು ಯಾರು ಇಲ್ಲ ಎಂಬ ಅಳಲು ಈತನದು. 
                                                  ಡಾ. ಶೆಟ್ಟಿ 

No comments:

Post a Comment