Wednesday, January 19, 2011

'ಪವರ್' ಪಾವತಿ 
ಸದಾ  ಗಿಜಿಗುಡುತ್ತಿರುವ, ನೂಕಿ ನೂಕಿ ನಾನೊಬ್ಬನೇ ಎಲ್ಲರಿಗಿಂತ ಜಾಕಿ ಎಂದು ತನ್ನನ್ನೇ ತಾನು ಅಂದುಕೊಂಡು ಎಲ್ಲರನ್ನೂ ಹಿಂದಿಕ್ಕಿ ಎಲ್ಲೆಲ್ಲೋ ನುಸುಳಿ ಸರಧಿಯ ಒಳಸುಳಿಯನ್ನು ಅರ್ಥೈಸಿ, ಕಷ್ಟ ಪಟ್ಟು ಮೊದಲನೆಯವನಾಗಿ ನಿಲ್ಲುವ, ಕಾದು ಕಾದು ಸಾಕಾಗಿ ಬೇಸತ್ತು ಬೆವರಿಳಿಸಿ ಬಸವಳಿದು ರೋಸಿ ಹೋಗಿ ಕೆಲಸ ಸಾಧಿಸದೆ ಮನೆಗೆ ಮುನ್ನುಗ್ಗುವ ದೃಶ್ಯಗಳು ಕರೆಂಟ್ ಬಿಲ್ ಪಾವತಿಯ ಸಮಯದಲ್ಲಿ ಮಾಮೂಲು. ಇದರೊಂದಿಗೆ ವ್ಯವಸ್ಥೆಯನ್ನು ದೂರುವುದು ಅದಕ್ಕಿಂತ ಮಾಮೂಲು.
ಆದರೆ ಈಗ, ಇಂತಹ ಸಮಸ್ಯೆಗೆ ಉತ್ತರವೆಂಬಂತೆ ಮೆಸ್ಕಾಂ ಹೊಸ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದ್ದಾರೆ. 24/7 ವಿದ್ಯುತ್ ಬಿಲ್ ಪಾವತಿಯ ಪರಿವಿಡಿಯನ್ನು ಹೊರಡಿಸಿದ್ದಾರೆ. ಏನೀ ಟೈಮ್ ಪೇಮೆಂಟ್ ಸೌಲಭ್ಯವನ್ನು ಸಂಸ್ಥೆ; ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಚಿಕ್ಕಮಗಳೂರು, ಕಡೂರು  ಕ್ಷೇತ್ರಗಳಲ್ಲಿ ಜಾರಿಗೊಳಿಸಿದೆ.
ಏನೀ ಟೈಮ್ ಹೋಗಿ ಹಣ ಡ್ರಾ ಮಾಡುವಂತೆ, ಈಗ ಹಣ ಪಾವತಿ ಮಾಡಬಹುದು. ಕರೆಂಟ್ ಬಿಲ್ ಮೊತ್ತವನ್ನು Round figure ಮಾಡಿ ಕಂಪ್ಯೂಟರೀಕೃತ ಯಂತ್ರದ ಮೂಲಕ ಬಿಲ್ ಪಾವತಿ ಮಾಡಿದರೆ ಖೇಲ್ ಖತಂ. ಇಷ್ಟು ದಿನ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರಿಗೆ ಇದೊಂದು   ಸಂತಸದ ಸುದ್ದಿ. 
ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಮೆಸ್ಕಾಂ ಹಾಗೂ ಇದರ ಆಡಳಿತ ನಿರ್ದೇಶಕ ಎಸ್. ಸುಮಂತ್ ಅವರಿಗೂ Hats off...
                                                                -ಡಾ.ಶ್ರೇ. 

No comments:

Post a Comment