Monday, January 31, 2011

ವಾವ್! ಸಿನ್ಹಾ
ಅಂತೂ, ಇಂತೂ ಬಿ.ಜೆ.ಪಿ ನಾಯಕರು ನಿದ್ದೆಯಿಂದ ಎದ್ದಿದ್ದಾರೆ. ಬಿ.ಜೆ.ಪಿ ಗೂ ಕಣ್ಣಿದೆ ಎಂಬ ವಿಚಾರ ಈಗ ಜನರಿಗೆ ಗೊತ್ತಾಗುತ್ತಿದೆ. ಶತ್ರುಘ್ನ ಸಿನ್ಹಾ ಅವರು ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದಿರುವುದು ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿದೆ.
ರಾಜ್ಯದಲ್ಲಿ ಹಗರಣಗಳ ಮೇಲೆ ಹಗರಣಗಳು ಬಯಲಾಗುತ್ತಿದ್ದರು, ಬಾಲ ಮುಚ್ಚಿಕೊಂಡು ಸುಮ್ಮನಿದ್ದ ಬಿ.ಜೆ.ಪಿ ಯ 'ಅಗ್ರ'ನಾಯಕರು  ಶತ್ರುಘ್ನ ಸಿನ್ಹಾ ಮೂಲಕ ಮಾತನಾಡುತ್ತ ಇದ್ದಾರೋ ಏನೋ? ಇಲ್ಲ ಬಿ.ಜೆ.ಪಿಯಲ್ಲಿದ್ದುಕೊಂಡು, ಸ್ವಚ್ಚ ರಾಜಕಾರಣ ಮಾಡಿ ಸತ್ತ ಯಾವುದೋ ಒಬ್ಬ ನಾಯಕನ ಆತ್ಮ ಸಿನ್ಹಾರ ಮೂಲಕ ಮಾತನಾಡುತ್ತಿದೆ ಇರಬೇಕು. ಇಲ್ಲವಾದರೆ ಸಿನ್ಹಾ ಅವರು 'ಯಡಿಯೂರಪ್ಪ ಎದುರಿಸುತ್ತಿರುವ ಆರೋಪಗಳ ಜೊತೆ ಆದರ್ಶ ಹಗರಣ,ಸಿಡಬ್ಲ್ಯೂಜಿ ಮತ್ತು 2ಜಿ ಹಗರಣವನ್ನು ತುಲನೆ ಮಾಡಲು ಸಾಧ್ಯವಿಲ್ಲ. ಆದರೆ, ಚಿಕ್ಕ ಕಳ್ಳರು ಮತ್ತು ದೊಡ್ಡ ಕಳ್ಳರು ಎಂಬ ಅರ್ಥದಲ್ಲಿ ಯಾರು ಮಾತನಾಡಬಾರದು. ಚಿಕ್ಕವನಿರಲಿ, ದೊಡ್ದವನಿರಲಿ ಕಳ್ಳ ಕಳ್ಳನೇ. ಯಡಿಯೂರಪ್ಪ ರಾಜೀನಾಮೆ ನೀಡಬೇಕು' ಎಂಬ ಮಾತುಗಳನ್ನು ಹೇಳಲು ಸಾಧ್ಯವಿರಲಿಲ್ಲ.
ಒಟ್ಟಿನಲ್ಲಿ ಯಡಿಯೂರಪ್ಪನವರು ಮಾಡಿದ್ದು ತಪ್ಪು ಎಂದು ಹೇಳಲು ಅಂಜುತ್ತಿದ್ದ ಬಿ.ಜೆ.ಪಿಯ ನಾಯಕರಿಗೆ ಶತ್ರುಘ್ನ ಸಿನ್ಹಾ ಅವರು ಮಾದರಿಯಾಗಿದ್ದಾರೆ, Hats off ಸಿನ್ಹಾ
ಏನೇ ಇರಲಿ ಬಿ.ಜೆ.ಪಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಂಡು, ರಾಜ್ಯಕ್ಕೆ ಅಂಟಿದ ಕಳಂಕವನ್ನು ದೂರ ಮಾಡಿದರೆ ಸಾಕು. ಈ ಪಕ್ಷಾತೀತವಾದ ಭ್ರಷ್ಟಾಚಾರಗಳಿಂದ ರಾಜ್ಯದ ಜನರಿಗೆ 'ನಾನು ಕನ್ನಡಿಗ' ಎಂದು ಹೆಮ್ಮೆಯಿಂದ ಹೇಳಲು ಸಾಧ್ಯವಿಲ್ಲದಂತಾಗಿದೆ.
ಹಾಗೇ ಸುಮ್ಮನೆ - ಸಿನ್ಹಾ ಅವರ ಹೇಳಿಕೆಯನ್ನು ಕೇಳಿದ ಉಮೇಶ, 'ಅಯ್ಯೋ ದೇವರೇ ನಮ್ಮ ಸಿನ್ಹಾ ಅವರು ಬಿ.ಜಿ.ಪಿ ಬಿಟ್ಟು ಕೈ ಪಕ್ಷದ 
ಹ್ಯಾಂಡ್-ಆಪರೇಶನ್ ಬಲೆಗೆ ಏನಾದರು ಬಿದ್ದರೋ' ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾನೆ.
                                                      -ಡಾ.ಶೆಟ್ಟಿ 
ನಾವೂ ಮಾಡಬೇಕು ಕಟಾವು 
ಮತ್ತೆ ಇದನ್ನೇ ಬರೆಯಲು ಮನಸ್ಸಿನ ಮೂಲೆಯಲ್ಲೆಲ್ಲೋ ಮೆತ್ತಗಿನ ನೋವು ಕಾಡುತ್ತದೆ. ಯಾಕಾದರೂ ಸದಾ ಈ ವಿಚಾರದ ಬಗ್ಗೆಯೇ ನಾವು ತಲೆಕೆಡಿಸಿಕೊಳ್ಳುತ್ತಿರಬೇಕು? ಅವರುಗಳು ಅವರಷ್ಟಕ್ಕೆ ಹಾರಾಡಿಕೊಂಡೋ ತೂರಾಡಿಕೊಂಡೋ  ಇರಲಿ ಎಂದು ಒಮ್ಮೊಮ್ಮೆ ಮಿಂಚಿನಂತೆ ಸಣ್ಣ ಆಲೋಚನೆ ಹೊಳೆದರೂ, ಮತ್ತೆ ಈ ಆಲೋಚನೆಗಳನೆಲ್ಲ ಬದಿಗಿಟ್ಟು, ಬರೆಯಲೇ ಬೇಕೆನಿಸುವಷ್ಟರಮಟ್ಟಿಗಿನ  ತುಡಿತ. ಕಾರಣ ಇಷ್ಟೇ; ಇದರ ಬಗ್ಗೆ ದ್ವನಿ ಎತ್ತದಿದ್ದರೆ ಎಲ್ಲಿ ನಾವು ಜವಾಬ್ದಾರಿಯಿಂದ ನುಣುಚಿಕೊಂಡು, ಪಲಾಯನ ಮಾಡಿದಂತೆ ಆಗುವುದೋ ಎಂಬ ಸಣ್ಣ ನಾಚಿಕೆ. ಈಗಂತೂ ಎಲ್ಲರಿಗೂ ಅರಿವಾಗಿರುತ್ತದೆ. ಯಾವ ವಿಚಾರದ ಬಗ್ಗೆ ಈತ ಬರೆಯಲು ಹೊರಟಿದ್ದಾನೆ ಎಂದು. 'ಮತ್ತದೇ ರಾಜಕೀಯ ಗುರು'.
ನಿನ್ನೆ ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ,  ಬಿ.ಜೆ.ಪಿ ಹಟಾವೋ-ಕರ್ನಾಟಕ ಬಚಾವೋ ಎಂಬ ಬ್ರಹತ್ ಕಾರ್ಯಕ್ರಮವನ್ನು ಸಿದ್ದರಾಮಯ್ಯನವರ ಮುಂದಾಳತ್ವದಲ್ಲಿ ಆಯೋಜಿಸಿತ್ತು.  ಅಲ್ಲಿ ನಾವು ಕೇಳಿದ್ದು ಕೇವಲ ಅಂಧಸಹಿತ-ಸಹಿಷ್ಣು ವಿಹೀನ ಅರಚಾಟ,ಬೈಗುಳ ಹಾಗೂ ಅದಕ್ಕೂ ಮೀರಿದ್ದು. 
ಬಿ.ಜೆ.ಪಿ ಸಾಚಾ ಪಕ್ಷ ಅಂತ ಇಲ್ಲಿ ಹೇಳುವುದು ನನ್ನ ಉದ್ದೇಶವೇ ಅಲ್ಲ. ಅದು ಅತ್ಯಂತ ನೀಚ ಪಕ್ಷ ಎಂದು ಅದೇ ಸ್ವಯಂ ಪ್ರೇರೇಪಿತವಾಗಿ ಜನತೆಗೆ ತೋರಿಸಿಯಾಗಿದೆ. ಅದಕ್ಕೆ ಜನತೆಯೇ ತಕ್ಕ ಪಾಠ ಕಲಿಸುತ್ತದೆ. ಯಾಕೆಂದರೆ ನಮ್ಮ ಜನ ಅಷ್ಟೊಂದು ದಡ್ಡರಲ್ಲ ಬಿಡಿ. ಆದರೆ ಕಾಂಗ್ರೆಸ್  ಪಕ್ಷದ ಹೋರಾಟದ ಪರಿ ನಿನ್ನೆ ನಿಜವಾಗಲೂ ಅರ್ಥಗರ್ಭಿತವಾಗಿರಲಿಲ್ಲ. ನಿಜವಾಗಿಯೂ ಕರ್ನಾಟಕ ರಾಜ್ಯದ ಬಗೆಗೆ ತುಂಬು ಹೃದಯದ ಪ್ರೀತಿ ಇದ್ದಿದ್ದರೆ, ಈ ಪೊಳ್ಳು ಹೋರಾಟವನ್ನು ಬಿಟ್ಟು ಅವರ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯದ ಒಳಿತಿಗೆ ಅದೇನೇನು ಮಾಡಬೇಕೋ ಅದನ್ನು ಮಾಡಬೇಕಿತ್ತು. ಆದರೆ ಅದರ ಹೊರತಾಗಿ ಪಕ್ಷ ಎಲ್ಲಾ ಮಾಡುತ್ತಿದೆ. ಹೇಗೆ ಅವಧಿಗೆ ಮುನ್ನ ರಾಜ್ಯದ ಚುಕ್ಕಾಣಿ ಹಿಡಿಯುವುದು ಎಂಬ ಏಕ ಮಾತ್ರ ಆಲೋಚನೆಯಲ್ಲಿ ನಿರತರಾಗಿದ್ದಾರೆ ಪಕ್ಷದ ಪರಿಚಾರಕರು.
ನಿನ್ನೆಯ ಇವರ ಪರಾಕ್ರಮ ಯಾವರೀತಿಯದ್ದಾಗಿತ್ತೆಂದರೆ, ಬಿ.ಜೆ.ಪಿ ಹಟಾವೋ-ಕರ್ನಾಟಕದ ಹಣ ಬಚಾವೋ-ನಾವೂ ಮಾಡ್ಬೇಕು ಕಟಾವು ಎಂಬಂತಿತ್ತು.
                                                               ಡಾ.ಶ್ರೇ   
ಮುದುಕನ ಅವಾಂತರ 
ವಿಶ್ವದ ಅರಬ್ ರಾಷ್ಟ್ರಗಳ ಪೈಕಿ ಸಾಕಷ್ಟು ಹೆಸರುಗಳಿಸಿರುವ ಈಜಿಪ್ಟ್ ನ  ಅದ್ಯಕ್ಷರಾದ 82 ವರ್ಷದ ಮುಬಾರಕ್ ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ತೀವ್ರವಾಗಿ ಪ್ರತಿಭಟನೆ ನಡೆಯುತ್ತಿದೆ.
ಮೂರು ದಶಕದಿಂದ ಅಧಿಕಾರದಲ್ಲಿದ್ದುಕೊಂಡು, ಪ್ರಜೆಗಳು ಕೈಮುಗಿದು ನಿಮ್ಮ ಅಧಿಕಾರ ಬೇಡ ಅಂದರೂ ಕುರ್ಚಿ ಬಿಟ್ಟು ಕದಲುತ್ತಿಲ್ಲ  ಈ ಮುದುಕ.
ಇವನ ವಿರುದ್ದ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 150ಕ್ಕೆ ಏರಿರುವುದು ವಿಷಾಧಕರ. ವಿಶ್ವದ ಎಲ್ಲಾ ಕಡೆಯಿಂದಲೂ ಇವನ ಪದಚ್ಯುತಿ ಗೆ ಒತ್ತಾಯಿಸುತ್ತಿದ್ದಾರೆ.  
ಸತ್ತವರ ಆತ್ಮ ಶಾಂತಿಗಾದರೂ ಈ ಮುದುಕ ಅಧಿಕಾರ ಹಸ್ತಾಂತರಿಸುವ ಅಗತ್ಯವಿದೆ.
                                                            - ಕೆ.ಪಿ.ಭಟ್ 

Sunday, January 30, 2011

ವಿದೇಶದಲ್ಲಿ ನೌಕರಿ ಬೇಕೇ?
ನಿಮಗೆ ವಿದೇಶದಲ್ಲಿ ನೌಕರಿ ಬೇಕೇ? ಕೇವಲ 80,000 ಕೊಡಿ ನಾವು ಮಾಡಿ ಕೊಡುತ್ತೇವೆ, ಎಂದು ಹೇಳುವ ಬ್ರೋಕರುಗಳು ನಮಗೆ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರನ್ನು ನಂಬಿ ನೀವು ಹಣ ಕೊಟ್ಟರೆ ಅಲ್ಲಿಗೆ ಮುಗಿಯಿತು, ನಿಮ್ಮ ತಲೆಗೆ 3 ನಾಮ ಗ್ಯಾರಂಟಿ.
ವೀಸಾ, ಪಾಸ್ ಪೋರ್ಟ್ ಎಂದು ನಿಮ್ಮಿಂದ ಸಾವಿರ-ಸಾವಿರ ತೆಗೆದುಕೊಂಡು ನಂತರ ವಂಚಿಸಿ ಮರೆಯಾಗುವ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಕೆಲವರು ಪಾಸ್ ಪೋರ್ಟ್, ವೀಸಾ ಮಾಡಿಕೊಡುತ್ತಾರೆ, ಆದರೆ ಆ ನೌಕರಿಯನ್ನು ನಂಬಿ ನೀವು ವಿಮಾನ ಹತ್ತಿ ಹೋದರೆ; ಒಂದೋ ಅಲ್ಲಿ   ಕಡಿಮೆ ಸಂಬಳಕ್ಕೆ ಗುಲಾಮರಂತೆ ದುಡಿಯಬೇಕಾಗುತ್ತದೆ, ಇಲ್ಲವೇ 1 ವರ್ಷಕ್ಕೆ ಆಗುವಂತಹ ವಿಸಿಟಿಂಗ್ ವೀಸಾದಿಂದಾಗಿ ಆ ದೇಶದಿಂದ ಸ್ವಲ್ಪ ಸಮಯದಲ್ಲೇ ಹೊರ ಬೀಳಬೇಕಾಗುತ್ತದೆ. 
ಇಂತಹ ವಂಚಕರನ್ನು ನಂಬಿ, ಮನೆಯವರ ಬಂಗಾರ ಮಾರಿ ಹಣ ಕೊಡುವ ವ್ಯಕ್ತಿಗಳು ಕೊನೆಗೆ ಬೆಪ್ಪು ತಕ್ಕಡಿಯಂತೆ ನಿಲ್ಲಬೇಕಾಗುತ್ತದೆ. ಆದುದರಿಂದ ಜನರೇ ಎಚ್ಚರವಾಗಿರಿ! ಇವರು ನಿಮ್ಮಲ್ಲಿಗೂ ಬರಬಹುದು.
ಹಾಗೇ ಸುಮ್ಮನೆ- ವಿದೇಶದಲ್ಲಿ ಉದ್ಯೋಗ ಎಂದರೆ ಸಾಕು ಉಮೇಶ ಬೆವರಿ ಹೋಗುತ್ತಾನೆ. ಯಾಕೆಂದರೆ ಹೀಗೆ ಒಬ್ಬ ಬ್ರೋಕರ್ ಉಮೇಶನನ್ನು ವಿದೇಶಕ್ಕೆ ಕಳುಹಿಸುತ್ತೇನೆ ಎಂದು ನಂಬಿಸಿ ಮುಂಬೈ ಏರ್ ಪೋರ್ಟ್ ನಲ್ಲೆ  ಬಿಟ್ಟನಂತೆ. ಉಮೇಶ ಅಲ್ಲಿಂದ  ಹೊರ ಬಂದು ಸ್ಲಂ ನೋಡುವಾಗ ಗೊತ್ತಾದದ್ದು  ತಾನು ಮೋಸ ಹೋದೆ ಎಂಬ ವಿಷಯ.
                                                                  -ಡಾ. ಶೆಟ್ಟಿ 
ಹೈಡ್ ಪಾರ್ಕ್
ಬ್ರಿಟನ್ ನ ಪ್ರಸಿದ್ಧ ಉದ್ಯಾನ ಗಳಲ್ಲಿ ಹೈಡ್ ಪಾರ್ಕ್ ಒಂದು. ಇಲ್ಲಿ  ವಸಂತ ಋತು ಅತ್ಯಂತ ಮನೋಹರವಾಗಿರುವುದರಿಂದ ಪ್ರೇಮಿಗಳು ಮೈಮರೆತು ಸ್ವರ್ಗ ಸುಖಕ್ಕೆ ಜಾರಿರುತ್ತಾರೆ. ಹೈಡ್ ಪಾರ್ಕ್ ನ SPEAKERS CORNER ಜಗತ್ತಿನ ಗಮನ ಸೆಳೆದಿದೆ.
ಇಲ್ಲಿ ವಾಕ್ ಸ್ವಾತಂತ್ರ್ಯ ಯಥೇಚ್ಛವಾಗಿ ಇರುವುದರಿಂದ ಯಾರು ಯಾರನ್ನು ಟೀಕಿಸಬಹುದು. ರೇಡಿಯೋ ಟಿ.ವಿ ಮಾಧ್ಯಮಗಳಲ್ಲಿ ಪ್ರಸ್ತಾಪಿಸದ ಸಮಾಜ ಬಾಹಿರ ಸಂಗತಿಗಳನ್ನು ಸಾರಿ ಸಾರಿ ಹೇಳಬಹುದು. ಬ್ರಿಟನಿನ ರಾಣಿಯನ್ನು ಟೀಕಿಸುತ್ತ ಭಾಷಣಕಾರರು  ಆಕೆಯ ಪದಚ್ಯುತಿಗೆ ಕರೆನೀಡುತ್ತಿದ್ದರಂತೆ   ಮತ್ತು  ವರ್ಣಬೇಧ ತೊಂದರೆ ಅನುಭವಿಸುವ ವರ್ಣೀಯರು ಹೈಡ್ ಪಾರ್ಕಿಗೆ  ಬಂದು ಬ್ರಿಟನಿನ ಈ ದುಷ್ಟ ಪ್ರವೃತ್ತಿಯನ್ನು ಖಂಡಿಸಿ ಬ್ರಿಟಿಷರ ಜನ್ಮ ಜಾಲಾಡುತ್ತಾರೆ.
ಇಲ್ಲಿ ಇಲ್ಲರಿಗೂ ವಾಕ್ ಸ್ವಾತಂತ್ರ್ಯ ಇರುವುದರಿಂದ, ಇಂಗ್ಲೀಷ್ ಹುಡುಗಿಯರು ಸಣ್ಣ ಡ್ರೆಸ್ ಗಳನ್ನು ಧರಿಸಿ ತಮ್ಮ ಬಿಳಿ ತೊಡೆಗಳನ್ನು ಎಷ್ಟು ತೋರಿಸಿ, ಮೈಮರೆತು ಆಹ್ವಾನಿಸಿದರೂ ಗಮನಕ್ಕೆ ಬರದಂತೆ ಇರುವ ಬ್ರಿಟಿಷ್ ಪುರುಷರನ್ನು ಷಂಡರೆಂದು ಆಫ್ರಿಕದ ಜನ ಹೇಳುತ್ತಿದ್ದರಂತೆ. ಇಷ್ಟೆಲ್ಲಾ ವಾಕ್ ಸ್ವಾತಂತ್ರ್ಯ ಇದ್ದರೂ ಇದು ಮನರಂಜನೆಗೆ ಮಾತ್ರ, ಇದನ್ನು ಯಾರೂ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.
ಇಂತಹ ಉದ್ಯಾನ ಭಾರತದಲ್ಲಿ ಇದ್ದರೆ ಅದೆಷ್ಟೋ ಸತ್ಯಗಳು ಬೆತ್ತಲಾಗುತ್ತಿದ್ದವು.
                                                    ಕೆ.ಪಿ.ಭಟ್                                   

Saturday, January 29, 2011

ನ್ಯಾಯ?
ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವರದಿ ನಿನ್ನೆ ಶುಕ್ರವಾರ ಲೋಕಾರ್ಪಣೆ ಯಾಗಿದೆ. ನ್ಯಾ. ಬಿ.ಕೆ.ಸೋಮಶೇಖರ್ ನೇತ್ರತ್ವದ ವಿಚಾರಣಾ ಆಯೋಗವು, ಬಿ.ಜೆ.ಪಿ. ಹಾಗೂ ಹಿಂದೂ ಪರ ಸಂಘಟನೆಗಳು ದಾಳಿಯ 'ಕಾರ್ಯಕರ್ತ' ರಲ್ಲ ಎಂದು ವರದಿಯಲ್ಲಿ ಹೇಳಿದೆ.
ಈ ಆಯೋಗವು ಬಹಳ ಕೂಲಂಕುಶವಾಗಿ, ವಿಸ್ತ್ರತವಾಗಿ, ವಿನೂತನವಾಗಿ, ವಿಡಂಬನಾತ್ಮಕತೆಯ  ಗೋಜಿನ ಹೊರತಾಗಿ ಪೂರ್ತಿ ಸನ್ನಿವೇಶವನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಪರಿಪಕ್ವ ಹೀನತೆಯ ಹಂಗಿಗೆ ತಲೆಕೊಡದೆ ಅಧ್ಯಯನ(?) ನಡೆಸಿ ಜನತೆಯ ಎದುರಿಗೆ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಕರ್ನಾಟಕದ ಅತ್ಯಂತ ಮೂರ್ಖಶಿಖಾಮಣಿಗೂ ಅರಿವಾಗಿದೆ. ಎಲ್ಲೆಲ್ಲೂ ಆಯೋಗದ ಮೇಲೆ ಕೆಂಗಣ್ಣು ಬೀರುವ ಜನಗಳೇ ನಮ್ಮ ನಡುವೆ ತುಂಬಿರುವ ಈ ಸಂದರ್ಭದಲ್ಲೂ, ಆಯೋಗದ 'ಅಭೂತಪೂರ್ವ' ಸಾಧನೆ ಮೆಚ್ಚತಕ್ಕದ್ದು. ಯಾವುದೇ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗದೆ ಇಡೀ ಪ್ರಸಂಗವನ್ನು ಸೂಕ್ಷ್ಮವಾಗಿ ಗಮನಿಸಿ ಬಹಳ ಗಂಭೀರವಾಗಿ ಆಯೋಗ ವರದಿ ಸಲ್ಲಿಸಿದೆ. 
ಈ ವರದಿಯಿಂದ, ಜನತೆಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ನಂಬಿಕೆ 'ದುಪ್ಪಟ್ಟಾ'ಗಿದೆ. ಎಂದರೂ ತಪ್ಪಿಲ್ಲ. ಇಂತಹ ನ್ಯಾಯಾಂಗ ವ್ಯವಸ್ಥೆ ಎಲ್ಲೆಡೆ ಸಂಪೂರ್ಣವಾಗಿ ಹಾಸು ಹೊಕ್ಕಾದರೆ ಇಡೀ ದೇಶ ಭಧ್ರತೆಯ ಬುನಾದಿಯ ಅಂಚನ್ನು ತಲುಪಿ ಎಲ್ಲಾ ರಾಷ್ಟ್ರಗಳನ್ನು ಮೀರಿಸಿ, ಸುಸಂಪನ್ನ ಅದಕ್ಕೂ ಮೀರಿ ನ್ಯಾಯ ಸಂಪನ್ನ ದೇಶ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
                                                                      -ಡಾ.ಶ್ರೇ.
ಆಚಾರವಿಲ್ಲದ ನಾಲಿಗೆ 
ಯಾರೇ ಒಬ್ಬ ಕಾನೂನು ಪದವಿ ಪಡೆದು ಅಥವಾ ಉನ್ನತ ಹುದ್ದೆಯಲ್ಲಿ ಇದ್ದವರು ಯಾವುದು ಹಿತ-ಅಹಿತ ಎಂದು ತಿಳಿಯುವ ಅಗತ್ಯವಿದೆ. ಕೊಳೆತ  ಆಲೋಚನೆಗಳನ್ನು ಮುಂದಿಟ್ಟುಕೊಂಡು ಮುಗ್ಧ ಮನಸ್ಸುಗಳ ಮೇಲೆ ತನ್ನ ಪ್ರಭಾವ ಬೀರಿದರೆ ಮನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
'ಗುಲಾಮಿ ಮಾನಸಿಕತೆಯಿಂದ  ಹೊರ ಬನ್ನಿ,ವಿಕ್ರತ ಮನಸ್ಸಿನ ವಿದೇಶಿಯರ  ಆಚರಣೆಗಳು ಬೇಡ.' ಎಂದು ವಿವೇಕೋತ್ಸವ 2011 ರ  ಸಂದರ್ಭದಲ್ಲಿ ರಾಜ್ಯ ವಕೀಲರ ಉಪಾಧ್ಯಕ್ಷ  ನ್ಯಾಯವಾದಿ ಪಿ.ಪಿ. ಹೆಗ್ದೆ ಹೇಳಿದ ಮಾತಿದು. 
ಸೀಮಿತ ಆಲೋಚನೆಗಳನ್ನು ಮಾಡಿ, ಬಾವಿಯಲ್ಲಿರುವ ಕಪ್ಪೆಯಂತೆ ವರ್ತಿಸುವ ಮತ್ತು ಭಾಷಣಗಳನ್ನು ಬಿಗಿಯುವ ಇವರುಗಳು, ಅದು ಯಾವ ರೀತಿಯ ರಾಷ್ಟ್ರಭಕ್ತಿ ತೋರಿಸುತ್ತಿದ್ದಾರೋ  ತಿಳಿಯುತ್ತಿಲ್ಲ. 
ಈ ಅಯ್ಯ ಬಾಯಿಪಾಠ ಮಾಡಿದ್ದು ಬ್ರಿಟಿಷರು ಜಾರಿಗೊಳಿಸಿದ ಕಾನೂನನ್ನು,ಧರಿಸಿದ್ದು ಕಪ್ಪು ಕೋಟನ್ನು; ಇಲ್ಲಿಯೂ ಮತ್ತೊಮ್ಮೆ ವ್ಯಕ್ತವಾಗುವುದು ಆತನ ಆಚಾರವಿಲ್ಲದ ನಾಲಿಗೆ.
ಇಂಗ್ಲಿಷರ ಬುದ್ದಿಯವರೇ ಇಂದಿಗೂ ದೇಶವನ್ನು ಆಳುತ್ತಿದ್ದಾರೆ ಎಂದು ಹೇಳುವ ಇವರುಗಳು, ಅದು ಯಾವುದೋ ಬೇರೆ ದೇಶ ಕಟ್ಟಲು ಹೊರಟಂತೆ  ಕಂಡುಬರುತ್ತಾರೆ. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಇವರುಗಳನ್ನು ನೆನಪು ಮಾಡುವ  ಸಂದರ್ಭದಲ್ಲಿ, ಅವರ ಹಾದಿಯಲ್ಲಿ ಸಾಗಿ, ಬದುಕಿನ ನಿಜ ಆರ್ಥ ತಿಳಿದವರಿಗೆ ಮಾತ್ರ ಇಂತಹ ಕಾರ್ಯಕ್ರಮದಲ್ಲಿ ಮಣೆಹಾಕಬೇಕು ಎಂಬುದು ನನ್ನ ವಿನಂತಿ.
                                  ಕೆ.ಪಿ.ಭಟ್                                         

Friday, January 28, 2011

ಖೈದಿಗಳಿಗೂ ಬಂತು ಸವಲತ್ತು 
ರಾಜ್ಯದ 4 ಕಡೆ ಬಯಲು ಬಂದಿಖಾನೆ ನಿರ್ಮಾಣ ಮಾಡಲಾಗುವುದು ಎಂದು ಬಂದಿಖಾನೆ ಸಚಿವ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಖೈದಿಗಳಿಗೆ ಸವಲತ್ತು ದೊರೆತಂತಾಗಿದೆ, ಹೇಗೆಂದರೆ ಈಗಾಗಲೇ ದೇವನಹಳ್ಳಿಯ ಬಳಿ ಇರುವ ಬಯಲು ಬಂದಿಖಾನೆಯಲ್ಲಿ, ಖೈದಿಗಳಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶವಿದೆ. ಇಲ್ಲಿ ಸ್ವತಂತ್ರವಾಗಿ ಇರಬಹುದು, ಇಂತಹ ಬಂದಿಖಾನೆಗಳು ಇತರ ಜೈಲುಗಳಿಗೆ ಮಾದರಿ. ಇವು ಇನ್ನಷ್ಟು ರಚನೆಯಾಗಬೇಕು, ಯಾಕೆಂದರೆ ಖೈದಿಗಳನ್ನು ಜೈಲಿನಲ್ಲಿ ಮೃಗಗಳಂತೆ ನಡೆಸಿಕೊಂಡರೆ; ಅವರು ಬದಲಾಗುವ ಸಾಧ್ಯತೆ ಕಡಿಮೆ.
ಜೈಲುಗಳು ಹೇಗಿರಬೇಕೆಂದರೆ, ಖೈದಿಯೊಬ್ಬ ತಪ್ಪು ಮಾಡಿ ಜೈಲು ಸೇರಿಕೊಂಡರೆ, ಅಲ್ಲಿ ಆತ ಸಂಪೂರ್ಣವಾಗಿ ಬದಲಾಗಬೇಕು. ಆತನಿಗೆ ಒಳಿತು-ಕೆಡುಕುಗಳು ಚೆನ್ನಾಗಿ ಅರ್ಥವಾಗಬೇಕು, ಶಿಕ್ಷೆಯನ್ನು ಮುಗಿಸಿಕೊಂಡು ಹೊರಬರುವಾಗ ಉತ್ತಮ ಪ್ರಜೆಯಾಗಿರಬೇಕು. 
ಬಯಲು ಬಂದಿಖಾನೆಗಳಿಂದ ಈ ಕೆಲಸ ಸಾಧ್ಯವಾಗುತ್ತದೆ, ಯಾಕೆಂದರೆ ಅಲ್ಲಿ ಖೈದಿಗಳಿಗೆ ಮನೆಯಂತಹ ವಾತಾವರಣ ಇರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಕೆಲಸ ಮೆಚ್ಚಬೇಕಾದದ್ದು. 
ಹಾಗೇ ಸುಮ್ಮನೆ- ಬಯಲು ಬಂದಿಖಾನೆ ಸವಲತ್ತಿನ ಬಗ್ಗೆ ಕೇಳಿದ ಉಮೇಶ, ತನ್ನ ಮನೆಗಿಂತ ಜೈಲೇ ಎಷ್ಟೋ ವಾಸಿ. ಮನೆಯಲ್ಲಿ ಹೆಂಡತಿಯ ಗುಲಾಮನಾಗಿ ಬದುಕುದಕ್ಕಿಂತ ಬಂದಿಖಾನೆಯಲ್ಲಿ ಸ್ವಾವಲಂಬಿಯಾಗಿರಬಹುದು ಅನ್ನುತ್ತಿದ್ದಾನೆ.
                                                                       -ಡಾ.ಶೆಟ್ಟಿ 
ಯಿಲ್ ಮಾಫಿಯ 
ಸೋನಾವಾನೆ, ಮಹಾರಾಷ್ಟ್ರ ಡಿ.ಸಿ, Oil ದಂಧೆಯ ಪರಿಣಾಮ ದಂಧೆಯ ಧುರೀಣರ ಕೋಪಕ್ಕೆ ಬಲಿಯಾಗಿದ್ದಾರೆ. 'ಪ್ರಾಮಾಣಿಕ ಪ್ರಯತ್ನದ ಫಲ'  ಎಂದು ಇದನ್ನು  ಬಣ್ಣಿಸಬಹುದು. 
ಈಗ ನಮ್ಮ ಕೇಂದ್ರ ಸರಕಾರಕ್ಕೆ ಈ ಸಾವು ಪಾಠವಂತೆ. ಅಲ್ಲಾ ಸ್ವಾಮಿ ಈ ಆಯಿಲ್ ದಂಧೆ ಬಗ್ಗೆ, ಇದು ಹೊಸ ಚಾಪ್ಟರ್ ಎಂದು ನುಡಿಯೋ ಸರಕಾರ, ಇತಿಹಾಸದ ಪುಟಗಳನ್ನು ತೆರೆದೇ ನೋಡಿಲ್ಲ ಅನಿಸುತ್ತೆ. ಅಥವಾ ತೆರೆಯಲು ಮನಸಿಲ್ಲವೋ ಗೊತ್ತಿಲ್ಲ. 1990 ರ ದಶಕದ ನಂತರದಿಂದಲೇ ಈ ದಂಧೆ ಆರಂಭವಾಗಿದೆ. ಸೀಮೆ ಎಣ್ಣೆಗೆ ಡೀಸೆಲ್  ಬೆರೆಸಿ ಕಲಬೆರಕೆ ಮಾಡಿ ಮಾರಾಟ ಮಾಡುವುದು ಆ ಜಮಾನದಿಂದಲೇ ಚಾಲ್ತಿಯಲ್ಲಿತ್ತು. ನಮ್ಮ ಹಲವಾರು ರೌಡಿ ಬಾಂಧವರು ಇದರ ಮುಂದಾಳತ್ವವನ್ನು ವಹಿಸಿದ್ದರು. ಅದೆಷ್ಟೋ ಕೊಲೆ ಹಾಗೂ ಇನ್ನಿತರ ಕ್ಷುಲ್ಲಕ ಕ್ರೈ೦ ಗಳು ಈ ದಂಧೆಯಲ್ಲಿ ನಡೆದಿರುವುದು ತೀರಾ ಮಾಮೂಲು ಸಂಗತಿ. ಇಷ್ಟೆಲ್ಲಾ ನಡೆದ ಮೇಲೂ ಸರಕಾರಕ್ಕೆ ಆಗ, ಏನು ಗೊತ್ತಿರಲ್ಲಿಲ್ಲವೋ? ಅಥವಾ ಹಾಗೇ ನಟನೆಯೋ ಗೊತ್ತಿಲ್ಲ. 
ಈಗಂತೂ ಕೇಂದ್ರಕ್ಕೆ ಎಚ್ಚರವಾಗಿದೆ. ತಡವಾದರೂ ಪರವಾಗಿಲ್ಲ ಎದ್ದಿದ್ದಾರಲ್ಲ ಅದೇ ಸಂತಸ. ರಾಜ್ಯಗಳಿಗೆ ವಾರ್ಷಿಕವಾಗಿ 95 ಲಕ್ಷ ಸೀಮೆ ಎಣ್ಣೆ ವಿತರಣೆಯಾದರೆ, ಅದರಲ್ಲಿ ಶೇ 40 ರಿಂದ 60%  ಕಲಬೆರೆಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ಎಷ್ಟರ ಮಟ್ಟಿಗೆ ಈ ದಂಧೆ ಹಾಸು ಹೊಕ್ಕಾಗಿದೆ ಎಂಬುವುದು ಇದರಲ್ಲಿ ನಮಗೆ ಅರಿವಾಗುತ್ತದೆ. 
ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿಯವರು ಈ ಸಂಗತಿಯಿಂದ ಬಹಳ ವಿಚಲಿತ ರಾದಂತೆ ಕಂಡು ಬಂದಿದೆ. ಈ ಮಾಫಿಯಾವನ್ನು ತಡೆದೆ ತೀರುತ್ತೇವೆ. ಇದನ್ನು ತಡೆಯಲು, ಅಭಿವೃದ್ದಿ ಪಡಿಸಿದ ಕೆಮಿಕಲ್ ಮಾರ್ಕರ್ ವ್ಯವಸ್ಥೆ ಜಾರಿಗೆ ತರುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
ಈ ಎಲ್ಲಾ ಬೆಳವಣಿಗೆಗಳು ಮುಂದೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಷ್ಟೇ.
                                              - ಡಾ.ಶ್ರೇ 
ಕ್ಯಾಂಪಸ್ ಕಿಲ್ಲರ್ಸ್ 
'ಗುಡು ಗುಡಿಯ ಸೇದಿ ನೋಡೋ' ಎಂಬ ಸಾಲಿಗೆ ಸರಿಯಾಗಿ ಕಾಲೇಜು ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆ ಮಾದಕ ದ್ರವ್ಯಗಳ ವ್ಯಸನಿಗಳಾಗಿ ಬಿಡುತ್ತಾರೆ. ಕಾಲೇಜಿನ ಪರಿಸರದಲ್ಲಿ ಸರಿಯಾದ ಆಯಾ ಕಟ್ಟಿನ ಜಾಗದಲ್ಲಿ ಕೆಲವು ಕಡೆ ಗೂಡಂಗಡಿಗಳಲ್ಲಿ, ಕೋಡ್ ವರ್ಡ್ ಗಳ ಮೂಲಕ ಮಾದಕ ವಸ್ತುಗಳನ್ನು ಪಡೆದುಕೊಳ್ಳುತಾರೆ. ಈ ದ್ರವ್ಯಗಳು ಮೂಲತಃ ಶ್ರೀಲಂಕಾ, ಮಲೇಶಿಯ, ಇರಾನ್ , ಆಫ್ಗಾನ್ ಕಡೆಯಿಂದ ಕಾಲೇಜಿನ ಬೀದಿ ಬೀದಿಗಳಿಗೆ ಹರಿದು ಬರುತ್ತದೆ. 
ಸಿಗರೇಟಿನ ತಂಬಾಕು ತೆಗೆದು ಗಾಂಜಾವನ್ನು ತುಂಬಿಸುವುದು ಅವರಿಗೆ ಕೆಲವು ಸೆಕೆಂಡ್ ಗಳ ಕೆಲಸ. ಎಲ್ಲರ ಕಣ್ಣೆದುರೇ ಕಣ್ಣು ಕಟ್ಟಿದಂತೆ ಈ ಕೆಲಸವೂ ನಡೆದು ಹೋಗುತ್ತದೆ. 
ಕೆಲವೊಮ್ಮೆ ನಗಲು ಶುರು ಹಚ್ಚಿದರೆ ನಗುತ್ತಲೇ, ಅಳಲು ಶುರು ಮಾಡಿದರೆ ಅಳುತ್ತಲೇ ಗಾಂಜಾ ನಶೆಯಲ್ಲಿರುವ ವಿದ್ಯಾರ್ಥಿಗಳು ತಮ್ಮದೇ ಲೋಕದಲ್ಲಿ ಇರುತ್ತಾರೆ. ಈ ರೀತಿ ಕಾಲೇಜು ದಿನಗಳು ಕಳೆಯುವುದೇ ಅವರಿಗೆ ತಿಳಿಯುವುದಿಲ್ಲ. ತಮ್ಮ ಭವಿಷ್ಯಕ್ಕೆ ತಾವೇ ಸಂಚಕಾರ ತಂದೊಡ್ಡುತ್ತಾರೆ.
                                                  -ಕೆ.ಪಿ. ಭಟ್ 

Thursday, January 27, 2011

ಅಳಿದ ಮಹಾನಗರಕ್ಕೆ ವಂದನೆ 
'ವಿಜಯನಗರ ಸಾಮ್ರಾಜ್ಯ' ಈ ಶಬ್ದ ಕೇಳಿದ ಕೂಡಲೇ ಪ್ರತಿ ಭಾರತೀಯನ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಸಾಹಿತ್ಯ, ವಾಸ್ತುಶಿಲ್ಪ, ಸಂಸ್ಕ್ರತಿಗಳಿಂದ ಶ್ರೀಮಂತವಾಗಿದ್ದ ಈ ಸಾಮ್ರಾಜ್ಯ ಆದಿಲ್ ಶಾಯಿಗಳ ಕುತಂತ್ರದ ದಾಳಿಯಿಂದಾಗಿ ಅವನತಿ ಹೊಂದಿತು.
ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ, ಆ ಕಾಲದಲ್ಲಿ ಪರ್ಷಿಯಾದ ರಾಜನ ಪರವಾಗಿ, ಪ್ರವಾಸಿಯಾಗಿ ಬಂದಿದ್ದ ಅಬ್ದುಲ್ ರಜಾಕ್ ಈ ಕೆಳಗಿನ ಮಾತುಗಳನ್ನು ಹೇಳುತ್ತಾನೆ 'ಈ ನಗರವು ಬಹಳ ವಿಶಾಲವಾಗಿ, ಜನರಿಂದ ಕಿಕ್ಕಿರಿದು ತುಂಬಿದೆ. ಇಲ್ಲಿಯ ರಾಜನು ಬಹಳ ಬಲಶಾಲಿ. ಅವನ ರಾಜ್ಯವು ಸಿಂಹಳ ದ್ವೀಪದಿಂದ ಗುಲ್ಬರ್ಗಾದ ವರೆಗೆ, ಬಂಗಾಳದಿಂದ ಮಲಬಾರ್ ವರೆಗೆ ಸಾವಿರ ಗಾವುದಗಳಿಗಿಂತಲೂ (ಒಂದು ಗಾವುದ ಸುಮಾರು 12 ಮೈಲಿ)ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಿದೆ. ಈ ರಾಜ್ಯದಲ್ಲಿ 300 ಬಂದರುಗಳಿವೆ. ಬೆಟ್ಟದಂತೆ ಬೆಳೆದಿರುವ ಸಾವಿರ ಆನೆಗಳು, 11 ಲಕ್ಷ ಸೈನಿಕರಿಂದ ಕೂಡಿದ ಬಲಿಷ್ಠವಾದ ಸೈನ್ಯವಿದೆ. ಇಡೀ ಹಿಂದುಸ್ತಾನದಲ್ಲಿ ಈ ರಾಜನನ್ನು ಮೀರಿಸಿದ ಬಲಶಾಲಿ ರಾಜ ಇನ್ನೊಬ್ಬನಿಲ್ಲ. ಏಳು ಸುತ್ತುಗೋಡೆಗಳ ನಡುವೆ ನಿರ್ಮಿಸಲಾದ ಈ ವಿಜಯನಗರ ಎಂತಹುದೆಂದರೆ ಇಡೀ ಭೂ ಪ್ರಪಂಚದಲ್ಲಿ ಇಂತಹದನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ' ನೆನಪಿಡಿ ಒಬ್ಬ ಮುಸ್ಲಿಂ ಬರೆದ ಸಾಲುಗಳಿವು, ಆತನಿಗೆ ಕೃಷ್ಣದೇವರಾಯನನ್ನು ಹೊಗಳಿ ಬರೆಯಬೇಕಾದ ಅಗತ್ಯವಿರಲಿಲ್ಲ, ಪೂರ್ವಗ್ರಹಪೀಡಿತವಲ್ಲದ ಈ ಸಾಲುಗಳನ್ನು ನಂಬಲೇ ಬೇಕು.ಹಲವು ವಿದೇಶಿಯರು ಮೆಚ್ಚಿ ಬರೆದಿರುವ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ್ದು ನಮ್ಮ ದೌರ್ಭಾಗ್ಯ.
ಮತಾಂಧ, ಕಾಮುಕ, ಅಹಂಕಾರಿ ಮೊಘಲ್ ದೊರೆ ಅಕ್ಬರ್ ನನ್ನು 'ದಿ ಗ್ರೇಟ್ ಅಕ್ಬರ್' ಎಂದು ಕರೆಯುವ ಸೋಗಲಾಡಿ ಇತಿಹಾಸಕಾರರು, ಕೃಷ್ಣದೇವರಾಯನ ಬಗ್ಗೆ ಬರೆದದ್ದು ಕಡಿಮೆ. ಅವರಿಗೆ ಕೃಷ್ಣದೇವರಾಯ ಗ್ರೇಟ್ ಅಲ್ಲ ಬದಲಾಗಿ ದಕ್ಷಿಣದ ಸಾಮಾನ್ಯ ದೊರೆ ಅಷ್ಟೆ!
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಶಬ್ದಗಳಿಗೆ ನಿಲುಕದ ವೈಭವವದು.
ನಾನು ಇದನ್ನೆಲ್ಲಾ ಯಾಕೆ ಹೇಳಿದೆ ಅಂದರೆ ಇಂದಿನಿಂದ ಹಂಪಿ ಉತ್ಸವ ನಡೆಯುತ್ತಿದೆ. ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಈಗಿನ ತಲೆಮಾರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಇದು ನಿಜವಾಗಿಯೂ ಶ್ಲಾಘನೀಯ ಪ್ರಯತ್ನ. ಹಂಪಿ ಉತ್ಸವ ಚೆನ್ನಾಗಿ ನಡೆದು, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವಂತಾಗಲಿ ಎಂಬುವುದು ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಹಾರೈಕೆಯಾಗಿದೆ.
                                                                               - ಡಾ.ಶೆಟ್ಟಿ   
ರೋಡೀ!
ನೀನು ನಿನ್ನ ಜೀವಮಾನದಲ್ಲೇ ಉದ್ದಾರ ಆಗಲ್ಲ. You foolish,  ನಿನ್ನ ಬಗ್ಗೆ ನೀನು ಏನು ತಿಳಿದು ಕೊಂಡಿದ್ದಿ? ಇದು ನಮ್ಮ ಶೋ, It has got its own great dignity. ನಮ್ಮ ಮೊದಲ ಆವೃತ್ತಿ ಯಲ್ಲಿ ಗೆಲುವು ಸಾಧಿಸಿದವರನ್ನು ಕಂಡಿದ್ದೀಯ? How were they? and how are you now?
ಬೋಳು ತಲೆಯ ಗೋಳು ವ್ಯಕ್ತಿತ್ವದ ಎರಡು ಆಸಾಮಿಗಳು ಒಂದೇ ತರಹದ ಧಿರಿಸನ್ನು ಧರಿಸಿ ಕುರ್ಚಿಯ ಮೇಲೆ ಕುಳಿತು ರೋಡೀ ಎಂಬ ರಿಯಾಲಿಟಿ ಶೋದಲ್ಲಿ ಬಾಯಿಗೆ ಬಂದಂತೆ ಬಡಬಡನೆ ಅರ್ಥ ಹೀನತೆಯ ಹಂಗಿನಲ್ಲಿ ಹ್ಯಾಂಗ್ ಆಗಿ ಬಡಬಡಿಸೋ ಇವರೇ, ರಘು ಮತ್ತು ರಾಜೀವ್ .
ಇನ್ನು ಇಲ್ಲಿಗೆ ಬರುವ ವ್ಯಕ್ತಿಗಳು, ಈ ಶೋ ನಲ್ಲಿ ಭಾಗವಹಿಸಿದರೆ ಅದೇನೋ ಸಾಧನೆ ಮಾಡಿದಂತೆ ಆಗುವುದೋ ಎಂಬ ಡಾ೦ಭಿಕ ನಂಬಿಕೆಯಲ್ಲಿ Numb ಆಗಿ ಮಾತಾಡೋ ಪರಿ ನೋಡಿದರೆ, ಇಂತಹ ಮೂರ್ಖರೂ ಇದ್ದಾರೋ? ಎಂಬ ಭಯ ಕೂಡಾ ಕಾಡುತ್ತದೆ. ಯಾರೋ  ಒಬ್ಬ ಮೊನ್ನೆ; I am born to become roadie, my blood is roadie  ಎಂದು ಹೇಳುವಾಗ ಅವನಲ್ಲಿ ಇದ್ದ ಹುಚ್ಚು ಉತ್ಸಾಹಕ್ಕೆ ಈ ಶೋ ಅದೇನು ಮಹಾ ಸಾಧನಾತ್ಮಕವಾದ ಕಾರ್ಯ ಮಾಡಿದೆ ಎಂದು ಯೋಚಿಸಿದಾಗ ತೀರಾ ಹಾಸ್ಯಾಸ್ಪದ ಎನಿಸಿಬಿಟ್ಟಿತು. 
ಇನ್ನೊಬ್ಬ, Before last year ಅಶುತೋಶ್ ರೋಡಿ ಯಾಗಿದ್ದಾನೆ. ಆತ ನಮ್ಮ ಮನೆಯ ಪಕ್ಕದವ. ಆ ಬೆಪ್ಪನೆ ರೋಡಿಯಾಗಬೇಕಾದರೆ ನಾನ್ಯಾಕೆ ಆಗಬಾರದು? ಎಂದು ನುಡಿದಾಗ, ಈ ಗೋಳು ವ್ಯಕ್ತಿಗಳು ಅಶುತೋಶ್ ಬಗ್ಗೆ ಭಾರಿ ದೊಡ್ಡ ಭಾಷಣ ಬಿಗಿದು, 'ಅಶು ಬಿಗ್ ಬಾಸ್ ವಿನ್ನರ್ .He has got his own potential.' ಎಂದಿದ್ದರು.ಅಲ್ಲಾ, ಈ ಬಿಗ್ ಬಾಸ್ ಶೋನಲ್ಲಿ  ಅದೇನು ಮಹಾ ಸಾಧನೆ ಇದೆ ರೀ? ಮತ್ತಿನ್ನು  ರೋಡೀಸ್ ನಲ್ಲಿ  ಅದೇನೋ ಮೀನು ಕಪ್ಪೆ ತಿಂದು ಭಾರವಾದ ವಸ್ತುಗಳನ್ನು ಎತ್ತಿ, ಬೈಕ್ ಓಡಿಸಿ ರೋಡಿ ಆಗುತ್ತಾರೆ. ಇದರಲ್ಲಿ ಏನಿದೆ ರೀ ಮಣ್ಣು? 
ಇಂತಹ ಸಣ್ಣ ಶೋ ಗಳಿಂದ ಬಹಳ ದೊಡ್ಡ Fame ಸಿಗುತ್ತದೆ ಎಂಬ ಮೂರ್ಖರುಗಳು ಇಲ್ಲಿಗೆ ಬಂದು ತಮ್ಮ ತನವನ್ನು ಕಳೆದು ಕೊಳ್ಳುವುದಲ್ಲದೆ Success  ಬಗೆಗಿನ ನಿಜವಾದ ಅರ್ಥವನ್ನು ಮರೆತೇ ಬಿಡುತ್ತಾರೆ. There is no short cut for success. If so, your success will be very short. 
ಇವುಗಳು, ಯುವಜನತೆಯ ಜ್ಞಾನ ವ್ಯಾಪ್ತಿಯನ್ನೇ ಸಂಕುಚಿತತೆಯತ್ತ ಕೊಂಡೊಯ್ದು ಜ್ಞಾನ ಷಂಡತೆಯ ಕಸಿಯನ್ನು ಕಟ್ಟುತ್ತದೆ. ಇನ್ನೂ, ಇಂತಹ ಶೋ ನ ಆಯೋಜಕರೋ? ಅವರುಗಳು ಮುಖವಾಡದ ಮಂಥನದಲ್ಲಿ ಮಣ್ಣನ್ನೇ ಹೊರ ತೆಗೆದು ಆ ಮಣ್ಣಲ್ಲೇ ಹೂತುಹೋಗುವ ಆಜನ್ಮ ಮೂರ್ಖರು.
                                                 -ಡಾ.ಶ್ರೇ 
ವೈ. ಎನ್. ಕೆ. ನೆನಪು 
ಅರವತ್ತರ ದಶಕದಲ್ಲಿ ಕನ್ನಡದ ಪತ್ರಿಕೋದ್ಯಮದ ಸ್ಪೂರ್ತಿ ಎಂದರೆ ವೈ.ಎನ್.ಕೆ. ಅವರು. ಇವರ ಬರಹದಲ್ಲಿ ವಿಶಿಷ್ಟ ಛಾಪನ್ನು ಕಾಣಬಹುದು. ತರುಣರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಇವರ ಲೇಖನಗಳು ಪತ್ರಿಕೋದ್ಯಮದಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ.
ಪ್ರಜಾವಾಣಿ ಪತ್ರಿಕೆಯ ಆಧಾರವಾಗಿದ್ದ ಇವರು, ಪದಗಳಲ್ಲಿ ಮೋಡಿ ಮಾಡುತ್ತಿದ್ದರು, ಇವರ ಬರವಣಿಗೆಗಳು ಜನರ ಮನಸ್ಸಿಗೆ ತಟ್ಟುತಿತ್ತು. ರವಿಬೆಳಗೆರೆ, ವಿಶ್ವೇಶ್ವರ ಭಟ್ ನಂತಹ ಪತ್ರಕರ್ತರಿಗೆ ಇವರೇ ಸ್ಪೂರ್ತಿ.
ತಾವು ಇರುವ ಊರನ್ನೇ ಸರಿಯಾಗಿ ಸುತ್ತದೆ, ಇನ್ಯಾವುದೋ ಊರಿನ ಬಗ್ಗೆ ವ್ಯಂಗ್ಯದ ಬರಹಗಳನ್ನು ಬರೆಯುವ ಈಗಿನ ಪತ್ರಕರ್ತರಿಗೆ ಇವರು ಮಾದರಿಯಾಗಬೇಕು. ಕಾರಣ ಪ್ರಪಂಚ ಪರ್ಯಟನೆ ಮಾಡಿದ ಕೆಲವೇ ಕೆಲವು ಕನ್ನಡ ಪತ್ರಕರ್ತರಲ್ಲಿ ವೈ.ಎನ್.ಕೆ ಒಬ್ಬರು.
ತಮಗೆ ದೊರೆತ ಒಂದೊಂದು ತುಣುಕನ್ನು ಸ್ವಾರಸ್ಯಕರವಾಗಿ ನಿರೂಪಿಸುವಲ್ಲಿ ಇವರದ್ದು ಎತ್ತಿದ ಕೈ.
                                                                                  ಕೆ.ಪಿ.ಭಟ್ 

Wednesday, January 26, 2011

29 ವರ್ಷಕ್ಕೆ ಅಜ್ಜನಾದ ಭೂಪ!
ಲಂಡನ್ ನಲ್ಲಿ 29 ವರ್ಷದ ವ್ಯಕ್ತಿಯೊಬ್ಬ ತಾತನಾಗಿದ್ದಾನೆ. ಹೇಗಂತೀರ? ಆತನ 14 ವರ್ಷದ ಮಗಳು ಗರ್ಭಿಣಿಯಂತೆ! ಇದಕ್ಕೆ ಮೂಗಿನ ಮೇಲೆ ಬೆರಳು ಇಡಬೇಡಿ, ಇದಕ್ಕಿಂತ  ಆಶ್ಚರ್ಯದ ಸಂಗತಿ ಇನ್ನೊಂದಿದೆ,  ಆಕೆಯ ತಂದೆಗೂ 14 ವರ್ಷಕ್ಕೆ ಮದುವೆಯಾಗಿತ್ತು. ಗರ್ಭಿಣಿಯಾಗಿರುವ ಹುಡುಗಿ ತಪ್ಪೇನು ಮಾಡಿಲ್ಲ ಬಿಡಿ. ಆಕೆ ಅವಳ ತಂದೆಯನ್ನೇ ರೋಲ್ ಮಾಡೆಲ್ ಆಗಿ ಭಾವಿಸಿದಳೋ ಏನೋ ಪಾಪ!! ಆದರೆ ಆಕೆಯ ತಂದೆ 'ಛೇ ನಾನು ಹರೆಯದಲ್ಲಿ ಮಾಡಿದ ತಪ್ಪನ್ನೆ ತನ್ನ ಮಗಳು  ಕೂಡ ಮಾಡಿದಳು' ಅಂತ tension ಆಗಿದ್ದಾನಂತೆ.
ಇದೆಲ್ಲದಕ್ಕಿಂತ ಆಶ್ಚರ್ಯಕರ ವಿಚಾರ ಇನ್ನೊಂದಿದೆ. ಅದೆಂದರೆ, ಗರ್ಭಿಣಿಯಾಗಿರುವ  ಹುಡುಗಿ 'ತಾನು ಗರ್ಭಿಣಿ' ಅನ್ನೋ ವಿಷಯವನ್ನು facebook ನಲ್ಲಿ ಹಂಚಿಕೊಂಡದ್ದು! ಗರ್ಭ ಧರಿಸುವುದು ಮಹಾನ್ ಸಾಧನೆ ಎಂದು ತಿಳಿದು ಕೊಂಡಳೋ ಏನೋ ಈ ಮಹಾತಾಯಿ.
ಇದನ್ನು ಓದುವಾಗ ನಮಗೆ ವಿಶೇಷ ಅನಿಸಬಹುದು ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇದು ಸಾಮಾನ್ಯ, ಅಲ್ಲಿ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ. ಹೈಸ್ಕೂಲಿನ ಮಕ್ಕಳಿಗೆ ಮೀಟಿಂಗ್, ಡೇಟಿಂಗ್ ಕೊನೆಗೆ ಏನೇನೋ ಟಿಂಗ್ ಗಳು ಸಾಮಾನ್ಯ  ಆಗಿಬಿಟ್ಟಿದೆ. ಆದರೆ ವಿಪರ್ಯಾಸ ಅಂದರೆ ನಮ್ಮವರಿಗೆ ಈ ಸಂಸ್ಕೃತಿ ಆಕರ್ಷಣೀಯ, ಅನುಕರಣೀಯ ಅಂತ ಅನಿಸುತ್ತಿರುವುದು ಹಾಗೂ ನಮ್ಮ ಸಂಸ್ಕೃತಿಯ ಉತ್ತಮ ವಿಚಾರಗಳು, ನಮ್ಮ ಸಂಸ್ಕೃತಿಯ ಉದಾತ್ತತೆ ಮುಂತಾದ ವಿಚಾರಗಳ ಅರಿವು ಇಲ್ಲದಿರುವುದು.
ನಮ್ಮಲ್ಲೂ ಕೂಡ 29 ವರ್ಷದ ವ್ಯಕ್ತಿ ತಾತ, 14 ವರ್ಷದ ಹುಡುಗಿ ತಾಯಿ ಈ ತರದ ಘಟನೆಗಳು ಸಂಭವಿಸಬಾರದು ಎಂದಾದರೆ ಮೊದಲು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಇಲ್ಲವಾದರೆ ನಮ್ಮ ಪತ್ರಿಕೆಗಳು ಕೂಡ ಮೇಲೆ ಹೇಳಿದಂತ ಘಟನೆಗಳನ್ನು ವರದಿ ಮಾಡಬೇಕಾಗುತ್ತದೆ!
ಹಾಗೇ ಸುಮ್ಮನೆ- ಉಮೇಶ ಮದುವೆಯಾಗಬೇಕು ಎಂದು 5 ವರ್ಷದಿಂದ ಹುಡುಗಿ ಹುಡುಕ್ತಿದ್ದಾನಂತೆ, ಆದರೆ ಇವನ ಮುಸುಡಿ ನೋಡಿದವರು ಯಾರು ಕೂಡ ಹುಡುಗಿ ಕೊಡ್ತಿಲ್ಲವಂತೆ; ಇದರಿಂದ ಬೇಸತ್ತ ಉಮೇಶ 'ಛೇ ನಾನು ಫಾರಿನ್ ಅಲ್ಲಿ ಹುಟ್ಬೇಕಿತ್ತು, ಈ ಹೊತ್ತಿಗೆ ನನಗೆ ಮೊಮ್ಮಕ್ಕಳು ಆಗ್ತಾ ಇದ್ರು' ಅಂತ ಗೊಣಗ್ತಿದ್ದಾನಂತೆ!!
                                                    -  ಡಾ.ಶೆಟ್ಟಿ 
ಬೇನಾಮಿ ಮಾತು.....
ರೇಡಿಯೋದಲ್ಲಿ, 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡನ್ನು ಕೇಳುತ್ತಿರಬೇಕಾದರೆ ನನ್ನಲ್ಲಿ ಕನ್ನಡದ ಬಗ್ಗೆ ಮತ್ತಷ್ಟು ಪ್ರೀತಿಯನ್ನು ಹೆಚ್ಚಿಸುತ್ತಿತ್ತು. ಅದೇ ಸಂದರ್ಭ ಸಿ.ಎಂ. ಯಡಿಯೂರಪ್ಪ ನವರ ಆಚಾರವಿಲ್ಲದ ನೀಚ ನಾಲಿಗೆಯು ಬೇನಾಮಿ ಶಬ್ದಗಳನ್ನು ಕಕ್ಕುತ್ತಿತ್ತು.
ಬೆಂಗಳೂರು ಸುತ್ತ-ಮುತ್ತ ಬೇನಾಮಿ ಆಸ್ತಿ-ಪಾಸ್ತಿ ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಮತ್ತು ಇದರ ವಿವರ ನೀಡಿದವರಿಗೆ ಬಂಪರ್ ಬಹುಮಾನ ನೀಡಲಾಗುವುದೆಂದು ಖಾಸಗಿ ಹೋಟೆಲ್ ನ ಬಿ.ಜೆ.ಪಿ ಶಾಸಕಾಂಗ ಸಭೆಯಲ್ಲಿ ಹೇಳಿದ್ದರು. ಇಂತಹ ಹೇಳಿಕೆ  ಕೊಡಲು ಇವರಿಗೆ  ಯಾವ ನೈತಿಕತೆ ಇದೆ. 
ಕೊಚ್ಚೆಯಲ್ಲಿ ಬಿದ್ದಿರುವ ಯಡಿಯೂರಪ್ಪ ನವರಿಗೆ ಇನ್ನಾವುದೋ ಕೊಚ್ಚೆಯ ವಾಸನೆ ಬಡಿಯುತ್ತಿದೆ. ಕೆಸರಿಗೆ ಕಲ್ಲನ್ನು ಬಿಸಾಕಿದರೆ ಅದು ನಮಗೆ  ರಟ್ಟುತ್ತದೆ ಎನ್ನುವ ಪರಿಜ್ಞಾನ ಇವರಿಗಿಲ್ಲ.
ಒಟ್ಟಾರೆಯಾಗಿ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ಸರ್ಕಾರದ ಬೊಕ್ಕಸವನ್ನು ಹೆಚ್ಚಿಸಿಕೊಳ್ಳುವ ಮಾರ್ಗವಿದು.
                                                           - ಕೆ.ಪಿ. ಭಟ್         
ಇಂದು 62 ನೇ ಗಣರಾಜ್ಯೋತ್ಸವ. 1950 ರಿಂದ ಇವತ್ತಿನವರೆಗೆ ದೇಶ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ತಾಂತ್ರಿಕವಾಗಿ , ಇನ್ನೂ ಹಲವು ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ಅವತ್ತಿಂದ ಇವತ್ತಿನ ವರೆಗಿನ ಇತಿಹಾಸದಲ್ಲಿ ಜನತೆ ಹಲವು ಸಿಹಿ ಹಾಗೂ ಕಹಿ ಘಟನೆಗಳನ್ನು ದೇಶದಲ್ಲಿ ಕಂಡಿದ್ದಾರೆ. ಸಿಹಿ ನಮ್ಮ ಬೆಳವಣಿಗೆಯಾದರೆ ಕಹಿ ಬೆಳವಣಿಗೆಗೆ ಪೂರಕವಾದ ಪಾಠ. ಅದೆಷ್ಟೋ  ಬದಲಾವಣೆಗಳೊಂದಿಗೆ ಬದಲಾವಣೆಗೆ ಹೊರತಾಗಿ ನಿಂತಿರುವುದು ಎಂದರೆ ನಮ್ಮ ರಾಜಕಾರಣ. ಸದಾ ಕೊಳ್ಳೆ ಹೊಡೆಯೋ ರಾಜಕಾರಣಿಗಳು ಹಾಗೂ ಅವರನ್ನು ಉಗಿಯೋ ನಾವು.  
ನಮ್ಮ ಓದುಗರಿಗೆ 62 ನೇ ಗಣರಾಜ್ಯೋತ್ಸವದ ಶುಭಾಶಯಗಳು. ಮುಂದಾದರೂ ದೇಶದ ರಾಜಕಾರಣದಲ್ಲಿ ತ್ವರಿತ ಬದಲಾವಣೆ ಆಗಿ ದೇಶ ಅತ್ಯುಚ್ಚ ಸ್ಥಾನಕ್ಕೆ ಏರಲಿ ಎಂದು ಆಶಿಸೋಣ. 
ಭಾರತ್ ಮಾತಾ ಕೀ ಜೈ 

Tuesday, January 25, 2011


ಸಾಧಕನಿಗೆ ನಮನ
ಅಲಾಪಗಳ ಅರಸ, ತಾಳ ಜ್ಞಾನಿ, ರಾಗ ವಿಜ್ಞಾನಿ, ರಾಗ ತಾಳದ ನಡುವಿನ ಭಾವ ಸೂಕ್ಷ್ಮಿ. ೧೧ ರ ವಯಸ್ಸಿನಲ್ಲಿಯೇ ಸಂಗೀತದಿಂದ ಪ್ರೇರೇಪಿತರಾಗಿ ಹುಟ್ಟೂರು ರೋಣವನ್ನು ತ್ಯಜಿಸಿ ಸಂಗೀತಕ್ಕಾಗಿ ಪೂರ್ತಿ ಭಾರತ ದೇಶವನ್ನೇ ಅಲೆದು, ಪುಣೆಯನ್ನು ಸೇರಿ ಉಸ್ತಾದ್ ಹಫೀಜ್ ಆಲಿಖಾನ್ ಅವರ ಗಾನ ಗಾರುಡಿಯ ಗರಡಿಯಲ್ಲಿ ಪಳಗಿ, ಅಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಉನ್ನತ ಅಭ್ಯಾಸವನ್ನು ಗೈದು; ಸ್ವರ, ತಾಳ, ಲಯ, ಭಾವ, ಹಾಗೂ ಇದೆಲ್ಲವನ್ನು ಮೀರಿದ, ಅಂದರೆ ಇವೆಲ್ಲವನ್ನೂ ಒಂದೇ ಅಲೆಯಲ್ಲಿ ಸಮತೋಲನದಲ್ಲಿ ಇಡುವ ಅದೇನೋ ಅದ್ಭುತ ಶಕ್ತಿಯನ್ನು ತನ್ನೊಳಗಿಂದ ಹೊರತಂದು ೧೯೩೧ ರಿಂದ ಇಡೀ ದೇಶದ ಜನತೆಯನ್ನು ರಾಗ ಸಾಗರದಲ್ಲಿನ ಹಡಗಿನಲ್ಲಿ ನಲ್ಮೆಯ ನಾವಿಕನನ್ನಾಗಿಸಿದ್ದಾರೆ.
ಉಸಿರು ಬಿಗಿ ಹಿಡಿದು ಸಂಗೀತದಲ್ಲಿ ಸೇರಿ ಆಲಾಪದ ಅಲೆಯನ್ನು ಶ್ರೋತೃಗಳ ಹೃದಯ ರಂಗಕ್ಕೇ ತಾಕಿಸಿ ಅವರ ಹೆಸರನ್ನು ಸಮಸ್ತರ ಮನದಲ್ಲಿ ಅಜರಾಮರವಾಗುವಂತೆ ಮಾಡಿದ್ದಾರೆ ಪಂಡಿತ್ ಭೀಮ್ ಸೇನ್ ಜೋಶಿ.
ಅವರ ಧೀರ್ಘಕಾಲದ ಅಸ್ವಸ್ಥತೆಯಿಂದ ನಿನ್ನೆ ವಿಧಿವಶರಾದರು. ವ್ಯಕ್ತಿ ಈಗ ನಮ್ಮ ಮುಂದೆ ಬಿಟ್ಟು ಹೋಗಿರುವುದು ಅವರ ಅಮೋಘ ಸಾಧನೆ. 
ಇವರ ಬದುಕೇ ಒಂದು ಪ್ರಾಯೋಗಿಕ ಪಾಠ. ಸಾಧಕನ ಭೂ ಲೋಕ ರಹಿತತ್ವಕ್ಕೆ ಸಂತಾಪ ಸೂಚಿಸುತ್ತಾ, ಅವರ ಸಾಧನೆಯ ಗತಿಗೆ ನಮನ ಗೈಯುತ್ತಾ, ಇವರ ರವ್ವಷ್ಟು ಛಲ ನಮ್ಮಲ್ಲಿ ಬರಲಿ ಎಂಬುದೇ ಅಗಲಿದ ಸಾಧಕನಲ್ಲಿ ನಮ್ಮ ಪ್ರಾರ್ಥನೆ.
                                                -ಡಾ.ಶ್ರೇ.
Amazing  ಏಂಜಲ್
ಅಮೆಜಾನ್ ರಹಸ್ಯದ ಆಗರದಲ್ಲಿ, ಒಂದಾದ ಏಂಜಲ್  ಫಾಲ್ಸ್(ಜಲಪಾತ) ಹುಟ್ಟಿನಿಂದ ಹಿಡಿದು ಎಲ್ಲವೂ ಭಯಾನಕ. ಈ ಭಯಾನಕ ತಾಣವನ್ನು ಅನ್ವೇಷಣೆ ಮಾಡಿದವನು ಜಿಮ್ಮಿ ಏಂಜಲ್ಸ್.ಆದ್ದರಿಂದ ಇವನ ಹೆಸರನ್ನೇ ಅಲ್ಲಿಗೆ ಇಡಲಾಯಿತು.
ಈತನು  ಚಿಕ್ಕ ವಿಮಾನದಲ್ಲಿ ಸಹಸ್ರಾರು ಅಡಿ ಆಳಕ್ಕೆ ಧುಮುಕ್ಕುತ್ತಿರುವ ಜಲಪಾತದ ಬುಡದಿಂದ ಮೇಲಕ್ಕೆ ಏರುತ್ತ  ಒಂದು ನಂಬಲು ಅಸಾಧ್ಯವಾದ ತಾಣವನ್ನು ಜಗತ್ ಜಾಹೀರ ಗೊಳಿಸಿದನು.
ಜಲಪಾತದ ಭೀಕರ ಗರ್ಜನೆಗೆ ಈತನ ವಿಮಾನದ ಸದ್ದು ಅವನಿಗೇ ಕೇಳುತ್ತಿರಲಿಲ್ಲ.ಇದೊಂದು ಬೇರೆಯೇ ಲೋಕವೆಂಬಂತೆ ಗೋಚರವಾಗುತ್ತಿತು. ಇಲ್ಲಿಯ ಪ್ರಾಣಿ ಸಂಕುಲಗಳು ಇನ್ನೊಂದು ವಿಚಿತ್ರ. ನೋವನ್ನು ತಿಳಿಯುವ ಮೊದಲು ಸಾವು ಸಂಭವಿಸುವಂತೆ ಕಚ್ಚುವ ವಿಷಪೂರಿತ ಇರುವೆ,ಜೇಡ ಮತ್ತು ಹಾವುಗಳ ತಾಣ. 
ಇದರ ಸಂಶೋಧನೆಗೆಂದು ಜಿಮ್ಮಿ ಏಂಜಲ್ ತನ್ನ ವಿಮಾನವನ್ನು ಅಯಾನ್ ಟೆಪೋದಲ್ಲಿ ಇಳಿಸಿದ.ಆದರೆ ವಿಮಾನ ಪುನಃ ಮೇಲೇರಲು ಸಾಧ್ಯವಾಗದೆ ಶಾಶ್ವತವಾಗಿ ಬಂಧಿಯಾಯಿತು.. ಅದನ್ನು ನಂತರದ ದಿನಗಳಲ್ಲಿ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿದರು. 
ಸಾಹಸಿಗರು ಇರುವವರೆಗೆ ಹೊಸ ಹೊಸ ಸಾಹಸ ದೊಂದಿಗೆ ಅನ್ವೇಷಣೆ ಆಗುತ್ತಲೇ ಇರುತ್ತದೆ. ನಮಗೆ ಇವರೇ ಸ್ಪೂರ್ತಿ. ಇಂತಹ ವಿಸ್ಮಯ ಜಗತ್ತಿನ ಬಗ್ಗೆ ಓದಿ ತಿಳಿಯುವುದೇ ಒಂದು ರೀತಿಯ ರೋಮಾಂಚನ.
                                                                      ಕೆ.ಪಿ. ಭಟ್                            

Monday, January 24, 2011

ತ್ರಿವರ್ಣ ಧ್ವಜ ಹಾರಿಸಬಾರದಂತೆ!
ಗಣರಾಜೋತ್ಸವ ದ ದಿನ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಬಾರದಂತೆ! ಈ ಮಾತನ್ನು ಯಾವುದೋ ಉಗ್ರಗಾಮಿ ಸಂಘಟನೆಗಳು ಹೇಳಿದ್ದಲ್ಲ, ಕಾಶ್ಮೀರದ ಮುಖ್ಯಮಂತ್ರಿ ಉಮರ್ ಮತ್ತು ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದು.
ಕಾಶ್ಮೀರದಲ್ಲಿ ಧ್ವಜಾರೋಹಣ  ಮಾಡಿದರೆ ಶಾಂತಿ ಕದಡುತ್ತದೆ, ದೇಶದಲ್ಲಿ ಒಡಕು ಉಂಟಾಗುತ್ತದೆ ಎಂದು ಹೇಳಿರುವ ಪ್ರಧಾನಿ ಅವರ ಮಾತು ನಿಜಕ್ಕೂ ನಾಚಿಗೇಡಿನ ಸಂಗತಿ.
ಪ್ರಧಾನಿಯಾಗಿ,ದೇಶದ  ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ಧ್ವಜ ಹಾರಿಸಬಾರದು ಎನ್ನುವ ಇವರು ಯಾವ ರೀತಿ ದೇಶದ ಹಿತ ಕಾಯುತ್ತಾರೆ? ಕೆಲವೇ ಕೆಲವು ಪ್ರತ್ಯೇಕತಾವಾದಿಗಳ ಹಿತಾಸಕ್ತಿಗಾಗಿ, ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಕಾಶ್ಮೀರ ದೇಶದ ಭಾಗವಲ್ಲವೇ? ಸ್ವತಂತ್ರ ಭಾರತದಲ್ಲಿ  ಧ್ವಜ ಹಾರಿಸುವ ಹಕ್ಕು ಎಲ್ಲರಿಗೂ ಇದೆ, ಅದರಲ್ಲೂ ರಾಜಕಾರಣ ಮಾಡುತ್ತಿರುವ ಉಮರ್, ಮನಮೋಹನ್ ಸಿಂಗ್ ಅವರು ಯಾವ ಸೀಮೆಯ ಜನನಾಯಕರು? 
ಅಷ್ಟರಲ್ಲೂ ಕಾಶ್ಮೀರದಲ್ಲಿ ಧ್ವಜ ಹಾರಿಸಿದರೆ, ದೇಶದಲ್ಲಿ ಒಡಕು ಉಂಟಾಗುತ್ತದೆ ಅನ್ನುತ್ತಾರಲ್ಲವೆ, ಅದು ಹೇಗೆ? ದೇಶದ ಮುಸಲ್ಮಾನರು ಅಷ್ಟು ಕೂಡಾ ಮೂಢರೇ? ಪ್ರತ್ಯೇಕತಾವಾದಿಗಳನ್ನು ನಿಯಂತ್ರಿಸಲಾಗದ ಹೇಡಿಗಳು ಇವರು ದೇಶದ ಹಿತ ಕಾಪಾಡುತ್ತಾರಂತೆ!
ಕಾಶ್ಮೀರದ ಲಾಲ್ ಚೌಕದಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವಾಗ ಕಣ್ಣು ಮುಚ್ಚಿಕೊಂಡು ಕೂತ ಇವರಿಗೆ, ತ್ರಿವರ್ಣ ಧ್ವಜ ಹಾರಿಸುತ್ತೇವೆ ಎನ್ನುವಾಗ ದೇಶದಲ್ಲಿ ಒಡಕು ಉಂಟಾಗುತ್ತದೆ ಎಂಬ ಭೀತಿಯೇ?
ಯಾರದೋ ಹಿತ ಕಾಯಲು, ಜವಾಬ್ದಾರಿಯಿಂದ ನುಣುಚಿಕೊಳ್ಳಲು, ದೇಶದ ಹಿತವನ್ನು ಬಲಿ ಕೊಡುವುದು  ತೀರಾ ಬಾಲಿಷವಾದದ್ದು. ಕಾಶ್ಮೀರದಲ್ಲಿ  ತ್ರಿವರ್ಣ ಧ್ವಜ ಹಾರದಿದ್ದರೆ ಪ್ರತ್ಯೇಕತಾವಾದಿಗಳು  ಇನ್ನಷ್ಟು ಬಲಿಷ್ಠರಾಗುವುದರಲ್ಲಿ ಸಂಶಯವಿಲ್ಲ.
ಹಾಗೇ ಸುಮ್ಮನೆ - ಕಾಶ್ಮೀರದಲ್ಲಿ ಧ್ವಜ ಹಾರಿಸಬಾರದು ಎಂದು ಹೇಳಿದ ಪ್ರಧಾನಿಯವರ ಮಾತು ಕೇಳಿದ ಉಮೇಶನಿಗೆ ಈಗ ಮನಮೋಹನ್ ಸಿಂಗ್ ಅವರು ಕೋವಿ ಹಿಡಿದ ಮುಲ್ಲಾಉಮರ್ ನಂತೆ ಕಾಣಿಸುತಿದ್ದಾರಂತೆ..
                                                                -ಡಾ.ಶೆಟ್ಟಿ 
ಚಿನ್ನದ ಹುಚ್ಚು 
ಈ ಶತಮಾನದ ಪೂರ್ವಾರ್ಧದಲ್ಲಿ ಮನುಷ್ಯನ  ಚಿನ್ನದ ಆಸೆಯಿಂದ ಹಲವು ಅನ್ವೇಷಣೆಗಳು ಆದವು. ಎಲ್ ಡೋರಾಡೊ ಭ್ರಾಂತಿಗೊಳಗಾಗಿ ಅಮೆಜಾನ್ ಕಾಡುಗಳಲ್ಲಿ ಸತ್ತವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಸ್ವರ್ಣ ನಗರಿ ಎಂದು ಕರೆಯಲ್ಪಡುವ ಎಲ್  ಡೋರಾಡೊ ದ ಪತ್ತೆಗಾಗಿ ಸಾಹಸ ಹೊರಟವರ ಸಂಖ್ಯೆ ಹೇಳ ತೀರದು.
ಚಿನ್ನದ ಆಸೆಗಾಗಿ ಅದೆಷ್ಟೋ ಸಾಹಸಿಗರು ಕಾಡುಗಳನ್ನು ಸುತ್ತಿ, ಸರೋವರಗಳಲ್ಲೂ ಅನ್ವೇಷಣೆ ಮಾಡಿದರು, ಇದರಿಂದ ಎದೆಗಳ ಮೇಲೆ ವಿಷ ಪೂರಿತ ಬಾಣಗಳು ಗುರಿ ಇಟ್ಟಿದ್ದರು ಇವರು ಲೆಕ್ಕಿಸಲಿಲ್ಲ. ದಂತ ಕಥೆಗಳಿಂದ ಕೂಡಿ ಹೋದ ಈ ಸಾಹಸ ಅನ್ವೇಷಕರ ಬಗ್ಗೆ ಅರಿಯುವುದೇ ಒಂದು ರೀತಿಯ ರೋಮಾಂಚನ.
ನಿಧಿಯ ಹುಡುಕಾಟಕ್ಕಾಗಿ ಕೆಲವು ಕಡೆಗಳಲ್ಲಿ ಭೂಮಿಯನ್ನು ಅಗೆಯುವುದನ್ನು ನಾವು ಈಗಲೂ ಕಾಣಬಹುದು. ನಿಧಿಯ ಆಸೆಗಾಗಿ ಮೂಢನಂಬಿಕೆ ಗಳಿಂದ ಪ್ರೇರಿತರಾದವರು, ಪ್ರಾಣಿ ಹಿಂಸೆಯೊಂದಿಗೆ ನರ ಬಲಿಯನ್ನು ಮಾಡುತ್ತಿರುತ್ತಾರೆ. ಇದಕ್ಕೆ ಇತ್ತೀಚೆಗೆ ನಡೆದ  ವಾಮಾಚಾರದ ಕರಿನೆರಳೆ ಸಾಕ್ಷಿ. 
ಸರೋವರದ ತಳಗಳಲ್ಲಿ, ಅಮೆಜಾನ್ ಕಾಡುಗಳ ನಡುವೆ ಚಿನ್ನದ ಗಟ್ಟಿಗಳು ಸಿಕ್ಕಿದ್ದು ಹೌದು, ಇರುವುದು ಹೌದು.. 
1935 ರಲ್ಲಿ ಜಿಮ್ಮಿ ಏಂಜೆಲ್ಸ್ ತನ್ನ ಹೆಸರು ಅಮರವಾಗಲು ಮಾಡಿದ ಸಂಶೋಧನೆಗೆ  ಈ ಚಿನ್ನದ ಹುಚ್ಚೇ ಮೂಲ ಕಾರಣ!
                                                                 ಕೆ.ಪಿ.ಭಟ್ 
ಗನ್ ಮ್ಯಾನ್ ಗಳೇ ಇಲ್ಲವಂತೆ!
ಸಿರಾಜಿನ್  ಬಾಷಾ, ಕೆ.ಎನ್.ಬಾಲರಾಜ್ ಅವರ ದಿಟ್ಟ ನಡೆಗೆ ಕೆಲವರ  ವಕ್ರ ದೃಷ್ಟಿ ನೆಟ್ಟಿದೆ. 
ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ಪ್ರಕರಣದ ವಿರುದ್ದ ದಾವೆ ಹೂಡಲು ಅನುಮತಿ ಕೊಡಿ ಎಂದು ಮನವಿ ಸಲ್ಲಿಸಿದ ನಂತರದಿಂದ ಇವರಿಗೆ ಕಾಲ್ ಭಾದೆ ಪ್ರಾರಂಭವಾಗಿತ್ತಂತೆ. ಯಾರ ಕರೆ, ಎಲ್ಲಿಂದವೆಂಬುದು ಜನತೆಗೆ ಗೊತಿಲ್ಲವಾದರೂ, ಆ ಕರೆ ಯಾರದ್ದೋ ಘನ ವ್ಯಕ್ತಿಯ ಪರಮಾಪ್ತರದ್ದು ಎಂಬ ಸಂಶಯ ಕೆಲವು ರಾಜಕೀಯ ಬೆಳವಣಿಗೆಗಳಿಂದ ಅರಿವಾಗುತ್ತದೆ.
ತಮಗೆ ಬೆದರಿಕೆ ಇದೆಯೆಂದು, ಜನವರಿ 6 ರಂದೇ ಸೆಕ್ಯುರಿಟಿಗಾಗಿ ರಾಜಭವನಕ್ಕೆ ಮನವಿ ಸಲ್ಲಿಸಿದ ಲಾಯರ್ ದ್ವಯರಿಗೆ ಯಾವುದೇ ಭಧ್ರತಾ ವ್ಯವಸ್ಥೆ ದೊರೆತಿಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇದಕ್ಕೂ ಮೀರಿ ಈರ್ವರೂ ಗ್ರಹ ಇಲಾಖೆಯ ಪ್ರಧಾನ  ಕಾರ್ಯದರ್ಶಿಯಿಂದ ತೊಡಗಿ ರಾಜ್ಯ ಪೋಲಿಸ್ ಮಹಾ ನಿರ್ದೇಶಕ, ನಗರ ಪೋಲಿಸ್ ಆಯುಕ್ತ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರವರಗೆ ಎಲ್ಲರಿಗೂ ಪತ್ರ ಬರೆದ ಮೇಲೂ ಇವರಿಗೆ ಒಂದಿಷ್ಟೂ ಕನಿಕರ ತೋರದೆ ಇರುವುದನ್ನು ಕಂಡರೆ ವಿಭಾಗಗಳ ಬೇಜಾವಾಬ್ದಾರಿ  ಹಿಂದಿರುವ ಸೇಡಿನ ಯುದ್ದ ಎದ್ದು ಕಾಣುತ್ತದೆ. 
ಎಂತೆಂಥಾ ಮೂರೂ ಕಾಸಿಗೆ ಯೋಗ್ಯತೆ ಇಲ್ಲದ ಅಯೋಗ್ಯರಿಗೆ ಕೇಳಿದ ತಕ್ಷಣ ಸೆಕ್ಯೂರಿಟಿ ಸೌಲಭ್ಯ ಒದಗಿಸಿ ಪ್ರಜಾಪ್ರಭುತ್ವ ಎಂದು ಬೀಗುವ ಸರಕಾರ ಈಗ ಯಾವ ಪುರುಷಾರ್ಥ ಕೆಲಸದಲ್ಲಿ ತೊಡಗಿದೆ?  ಪಾಪ ಇದರ ಬಗ್ಗೆ ಆಲೋಚನೆಮಾಡಲೂ ಸಮಯವಿಲ್ಲದಷ್ಟರ ಮಟ್ಟಿಗೆ ಬ್ಯುಸಿ ಅನುಸುತ್ತೆ ನಮ್ಮ ಸರಕಾರ. ಅಥವಾ ನಮ್ಮ  ಗನ್ ಮ್ಯಾನ್ ಗಳು  ಖಾಲಿಯಾಗಿದ್ದರೋ? ಒಂದೂ ಅರ್ಥವಾಗೋಲ್ಲ(!)
                                                 -ಡಾ. ಶ್ರೇ 

Sunday, January 23, 2011

Facebook ಮಹಿಮೆ!!
ನನಗೆ ಕವಿಯೊಬ್ಬನ ಮಾತುಗಳು  ನೆನಪಾಗುತ್ತಿದೆ, ' ಹರಿಯುತ್ತಿರುವ  ನೀರಿನಲ್ಲಿ, ತೇಲುತ್ತಿರುವ ಮರದ ತುಂಡುಗಳಂತೆ ನಮ್ಮ ಬದುಕು. ಒಂದು ಕ್ಷಣ ಒಟ್ಟಿಗೆ ಇರುತ್ತೇವೆ, ನಂತರ ಬೇರೆ ಬೇರೆ. ಆದರೆ ನದಿ ಮಾತ್ರ ನಿರಂತರವಾಗಿ ಹರಿಯುತ್ತಲೇ ಇರುತ್ತದೆ'. ಈ ಮಾತು ಪ್ರಸ್ತುತ ಕಾಲಘಟ್ಟದಲ್ಲಿ ಅಪ್ರಸ್ತುತ ಎಂಬುವುದು ನನ್ನ ಅನಿಸಿಕೆ. ಯಾಕೆಂದರೆ ನಾವು L.K.G ಯಲ್ಲಿ ಕಳಕೊಂಡ ನಮ್ಮ ದೋಸ್ತ್ ಅನ್ನು, ಹೈಸ್ಕೂಲಿನಲ್ಲಿ ಅರಳಿದ, ನಂತರ ಮರೆತೇ ಬಿಟ್ಟ ಮೊದಲ ಪ್ರೇಮವನ್ನು, ಕಾಲದ ಆಟದಿಂದ ದೂರ ದೂರ ಆದ ನಮ್ಮ ಗೆಳೆಯರನ್ನು ಮರಳಿ ಪಡೆಯಬಹುದು. ಹೇಗೆ ಅಂತೀರ? ಅದೇ ರೀ facebook ಎಂಬ social networking site ಮೂಲಕ. ಇದರ ಆಕರ್ಷಣೆಗೆ ಬೀಳದ ಯುವಜನರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು, ಹೆಚ್ಚಿನ ಯುವಜನರು ಈ ಮಾಯೆಯ ಸದಸ್ಯರೇ ಆಗಿದ್ದಾರೆ, ' ಲೋ facebook ಅಲ್ಲಿ ಚಾಟ್ ಮಾಡಿಕೊಂಡು ಕೂತರೆ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ' ಇದು ನನ್ನ ಗೆಳೆಯನೊಬ್ಬನ ಮಾತು, ಹೌದು ಇದೊಂದು ರೀತಿ ಮಾಯಾಲೋಕ, ಎಷ್ಟೋ ವಿಷಯಗಳನ್ನು ನಮ್ಮ ಗೆಳೆಯರ ಜೊತೆ ಹಂಚಿ ಕೊಳ್ಳಬಹುದು, ಹೊಸ ಗೆಳೆಯರನ್ನು ಸಂಪಾದಿಸಿಕೊಳ್ಳಬಹುದು, ಯಾರದೋ profile ಗೆ ಮೂಗು  ತೋರಿಸಿ, comment ಮಾಡಬಹುದು. ಒಟ್ಟಿನಲ್ಲಿ ಇದರಲ್ಲಿ ಏನುಂಟು ಏನಿಲ್ಲ ಹೇಳಿ?
ದಿನಕಳೆದಂತೆ ಪ್ರಸಿದ್ದವಾಗುತ್ತಿರುವ  facebook ಯುವಜನರನ್ನು ತನ್ನತ್ತ ಸೆಳೆಯುತ್ತಿದೆ, ಇದರಿಂದಾಗಿ ಒಳಿತು ಇದೆ, ಕೆಡುಕು ಇದೆ. ಅಮೇರಿಕಾದಂಥಹ ದೇಶಗಳಲ್ಲಿ ಡೈವೋರ್ಸ್ ಪ್ರಮಾಣ ಹೆಚ್ಚಲು ಇದು ಕೂಡ ಒಂದು ರೀತಿ ಕಾರಣವಂತೆ, ಇದು ಭಾರತದ ಕಡೆಗೆ ತಿರುಗದಿದ್ದರೆ ಸಾಕು. ಇತರ  social networking site ಗಳಾದ ಆರ್ಕುಟ್, ಮೈಸ್ಪೇಸ್ ಗಳನ್ನು ಮೀರಿಸಿ ವಾಯುವೇಗದಲ್ಲಿ ಬೆಳೆಯುತ್ತಿರುವ facebook ನಲ್ಲಿ ಚೈನಾ, ಭಾರತ ಬಿಟ್ಟರೆ ಹೆಚ್ಚಿನ population ಇರುವುದಂತೂ ಸತ್ಯ.
ಹಾಗೇ ಸುಮ್ಮನೆ - ಉಮೇಶ ಆಸ್ಪತ್ರೆಯಲ್ಲಿ ಇದ್ದಾನಂತೆ, ಯಾಕೆ ಗೊತ್ತೇ? ಆತನ ಮನೆಯ ಕೆಲಸದ ಹೆಂಗಸು 'ಧಣಿ ನಿಮಗೆ  facebook ನಲ್ಲಿ request ಕಳಿಸಿದ್ದೇನೆ, accept ಮಾಡಿ'  ಎಂದಳಂತೆ. ಇದನ್ನು ಕೇಳಿದ ಉಮೇಶ ಶಾಕ್ ಆಗಿ ಹೋಗಿದ್ದಾನಂತೆ.
                                                                     ಡಾ. ಶೆಟ್ಟಿ 
ಗ್ರಂಥಾಲಯಗಳು ಬದಲಾಗಬೇಕು..
Job ಗಾಗಿ ಓದಬೇಡಿ, ಹಣ ಸಂಪಾದಿಸಲು ಅಲ್ಲ, ಜ್ಞಾನಕಿಂತ  ಮಿಗಿಲಾಗಿಯು ಸಮಾಜದ ಪರಿಸ್ಥಿತಿ  ಹೇಗಿದೆ ಎಂದು ಅರ್ಥ ಮಾಡಿಕೊಳ್ಳಲು ಈ ಓದು. ಇದಕೆಲ್ಲಾ ಗ್ರಂಥಾಲಯ ಪೂರಕವಾಗಿರಬೇಕು.
ಶಾಲಾ, ಕಾಲೇಜು ಮತ್ತು ಯಾವುದೇ ಗ್ರಂಥಾಲಯಗಳಾಗಿರಬಹುದು ರಜೆ ಎಂಬುವುದು ಇಲ್ಲದೆ ಎಲ್ಲಾ ಅವಧಿಗಳಲ್ಲೂ ಓದುವಿಕೆಗೆ ಅವಕಾಶ ಕಲ್ಪಿಸುವಂತಿರಬೇಕು. ಕಾಲೇಜು ದಿನಗಳು ಕಳೆದು ರಜೆ ಬಂದರೆ ಸಾಕು, ಗ್ರಂಥಾಲಯದ ಕಾರ್ಡುಗಳನ್ನು ಹಿಂತೆಗೆದುಕೊಂಡು ಓದುವಿಕೆಗೆ ಅಡ್ಡಿ ಪಡಿಸುವುದು ಸರಿಯಲ್ಲ. ಆ ದಿನಗಳಲ್ಲೂ ಓದಲು ಸಹಾಯವಾಗುವ ರೀತಿಯಲ್ಲಿ ಪುಸ್ತಕಗಳ ರಾಶಿಯನ್ನು ಹೊತ್ತು ಒಯ್ಯುವಂತೆ ಇರಬೇಕು.
ಪಾಶ್ಚಿಮಾತ್ಯರಲ್ಲಿ ರಜಾ ದಿನಗಳಲ್ಲೂ ರಾಶಿ- ರಾಶಿ ಪುಸ್ತಕಗಳನ್ನು ಮನೆಗೆ ಕೊಂಡೊಯ್ದು, ಓದುವಂತ  ವ್ಯವಸ್ಥೆ ಇದೆ. ಗ್ರಂಥಾಲಯ ತಮ್ಮಲ್ಲಿರುವ ಪುಸ್ತಕಗಳ ತೋರ್ಪಡಿಕೆಗೆ ಇರುವುದು ಅಲ್ಲ ಎಂಬುದರ ಮನವರಿಕೆ ಅಗತ್ಯ. 
active reading ನ ಮೂಲಕ ಭವಿಷ್ಯವನ್ನು ನಿರ್ಣಯಿಸಿಕೊಳ್ಳಲು ಸಾಧ್ಯ. 'nothing is permanent, except change' ಎನ್ನುವುದರ ಮೂಲಕ ಏನಾದರು ಸಾಧಿಸಬೇಕು.
                                          ಕೆ.ಪಿ. ಭಟ್ 

Saturday, January 22, 2011

ಯಾವುದು ವೇಶ್ಯಾವಾಟಿಕೆ ?
ವೇಶ್ಯೆಯರು ಎಂದು ಯಾರನ್ನು ಕರೆಯಬಹುದು?  ಸಮಾಜದ ಕ್ರೂರ ಕಣ್ಣುಗಳಿಗೆ ಬಲಿಯಾಗಿ, ಒತ್ತಾಯ ಪೂರ್ವಕವಾಗಿ ವೇಶ್ಯಾವಾಟಿಕೆಗೆ ಇಳಿದು ಜೀವನದ ನಕ್ಷತ್ರ ಎಲ್ಲಿಯೂ ಮಿನುಗದೆ, ಹೊಟ್ಟೆ- ಬಟ್ಟೆಗಾಗಿ ರೆಡ್ ಲೈಟ್  ಏರಿಯಾಗಳಲ್ಲಿ ಜಿನುಗಲು ಶುರು ಹಚ್ಚುತ್ತಾರೆ. ಇವರು ವೇಶ್ಯೆಯರೇ?
ನನ್ನ ಪ್ರಕಾರ ಇಂತಹ ಮಹಿಳೆಯರು ವೇಶ್ಯೆಯರಲ್ಲ! ಕಾರಣ, ಕೆಲವು ಸಿರಿವಂತ ಮಹಿಳೆಯರು, ಸಿನಿಮಾ ನಟಿಯರು, ಇಂಜಿನಿಯರ್, ಡಾಕ್ಟರ್ ಗಳ ಪತ್ನಿಯರು ನದಿ ನೀರಿನಂತೆ ತಮ್ಮ ಮನಸ್ಸನ್ನು ಕೊಚ್ಚೆಯಲ್ಲಿ ಹರಿಬಿಟ್ಟು ಮಾಡುವುದೇನು? ಪ್ರಮುಖ ಪಟ್ಟಣದ ಪಂಚತಾರ ಹೋಟೆಲ್ ಗಳಲ್ಲಿ ಲಕ್ಷ ಲಕ್ಷ ಗಳಿಗಾಗಿ, ಅದೆಷ್ಟೋ ಸಾರಿ ಸೀರೆ ಬಿಚ್ಚಿ ಉಟ್ಟಿದ್ದಾರೆ ಎಂದು ಅವರಿಗೇ ನೆನಪಿರುವುದಿಲ್ಲ. ಸೀತೆಗೂ ಮಿಗಿಲಾದ ಪತಿವ್ರತೆ ಎಂದು ತೋರುವ ಇವರುಗಳು ಹತ್ತದ ಎವರೆಸ್ಟ್ ಗಳಿಲ್ಲ ಈಜದ ಸಮುದ್ರ ಗಳಿಲ್ಲ.
ಇವರೇ ನಿಜವಾದ ವೇಶ್ಯೆಯರು. ಪ್ರೀತಿಯೆಂಬ ಮುಖವಾಡ ಧರಿಸಿ ಮಾಡುವುದೇನು? ಭಾವನೆಗಳನ್ನು ಕಾಲಲ್ಲಿ ತುಳಿದು ಮಂಚದಲ್ಲಿ ಮಲಗುವವರು ಇರುವವರೆಗೆ, ಕೊಲೆ, ಡೈವರ್ಸ್ ಗಳು ನಡೆಯುತ್ತಲೇ ಇರುತ್ತವೆ.
ಇನ್ನಾದರೂ ರೆಡ್ ಲೈಟ್ ಏರಿಯಾದ ಮಹಿಳೆಯರನ್ನು ವೇಶ್ಯೆಯರು ಎಂದು ಕರೆಯುವುದು ಬಿಟ್ಟುಬಿಡಿ!!
                                                                  ಕೆ.ಪಿ.ಭಟ್          
ಬಂದೋ ರಕ್ಷತಿ ರಕ್ಷಿತಃ ?
ಬೆಳ್ಳಂಬೆಳಗ್ಗೆ  ಕಾದು ಕಾದು ಹೆಣವಾದ ಜನಗಳು, ಅಂಗಡಿ ಮುಂಗಟ್ಟುಗಳನ್ನು ತೆರೆಯಬೇಕೋ ಬೇಡವೋ ಎಂಬ ಗೊಂದಲ, ಕಾಸು ಸಿಗುತ್ತೋ ಇಲ್ಲವೊ ಎಂಬ ಲೇಬರ್ಸ್ ಕ್ಲಾಸ್ ತಲ್ಲಣ, ಶಾಲಾ ಮಕ್ಕಳ ಖುಷಿ, ಕಾಲೇಜು ವಿದ್ಯಾರ್ಥಿಗಳ ತರ್ಕದ ಮಾತುಗಳು, ಎಲ್ಲವನ್ನೂ ಮುಚ್ಚಿ ಎಂಬ ಕೂಗುಗಳು, 'ಶನಿ'ವಾರದ ಬಂದ್ ಗೆ ಸಾಕ್ಷಿಯಾದ 'ವಸ್ತುಗಳು'.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾನ್ಯ ರಾಜ್ಯಪಾಲರ ನಡುವಿನ ತಾರಕ್ಕಕ್ಕೇರಿದ ಸಂಘರ್ಷ ನಿನ್ನೆ ರಾತ್ರಿ ಕೊನೆಯ ಹಂತ ತಲುಪಿ, ರಾಜ್ಯಪಾಲರು ಕೊನೆಗೂ ಕಾನೂನಾತ್ಮಕ ಮತ್ತು  ಸಂವಿಧಾನಾತ್ಮಕ  ಚೌಕಟ್ಟಿನಲ್ಲಿಯೇ; ವಕೀಲರಾದ ಸಿರಾಜಿನ್ ಬಾಷಾ, ಬಾಲರಾಜ್ ಅವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿ ವಿರುದ್ದ ಕಾನೂನು ಕ್ರಮಕ್ಕೆ ತಥಾಸ್ತು ಎಂದಿದ್ದಾರೆ. ಈ ವಿಚಾರ ಹೊರಬೀಳುತ್ತಲೇ ಚುರುಕಾದ ಪಕ್ಷ'ವರ್ತಿ' ಗಳು ಅಲ್ಲಲ್ಲಿ ಪ್ರತಿಭಟನೆಯನ್ನು ಆರಂಭಿಸಿದರು. ಅದು ಗಲಭೆಯಾಗಿಯೂ ಪರಿವರ್ತನೆಗೊಂಡಿರುವುದು ಇನ್ನೊದು ವಿಚಾರ. ಯಾರದೋ ಸ್ವಾರ್ಥಕ್ಕೆ ಇವರ ಹೋರಾಟ ಬಹಳ ತೀವ್ರವಾಗಿಯೇ ಇತ್ತು. 
ಸಂಪುಟದಲ್ಲಿ ಬಂದ್ ಮಾಡುತ್ತೇವೆ ಎಂದು ಬೊಬ್ಬೆ ಹೊಡೆದ ಯಡಿಯೂರಪ್ಪರವರು ಶನಿವಾರ ಅದನ್ನು ಮಾಡಿಸಿಯೇ ತೀರಿದರು.ತಮಗೆ ರಾಜ್ಯ ಪಾಲರಿಂದ ಆದ ಅವಮಾನವನ್ನು, 'ಇದು ಮತದಾರರಿಗೆ ಮಾಡಿದ ಅವಮಾನ' ಎಂದು ವ್ಯಾಖ್ಯಾನಿಸಿ ನಮ್ಮನ್ನೂ ಅವರ 'ಪುಣ್ಯ'ದಲ್ಲಿ ಪಾಲುದಾರರನ್ನಾಗಿಸಿದ್ದಾರೆ. ತೊಂದರೆ ಇಲ್ಲ ಬಿಡಿ. ಹಾಗೇ ರಾಜ್ಯಪಾಲರು ರಾಜ್ಯದ 'ಹಿತಾ'ಸಕ್ತಿಯಿಂದ 'ಕಾನೂನಾ'(?)ತ್ಮಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಯಾರು ಸರಿ ಯಾರು 'ತಪ್ಪು' ಎಂಬ ವಿಮರ್ಶೆಯೇ ಬೇಡ.
ಆದರೆ ಇವರ ನಾಯಿ ಬೆಕ್ಕು ಕಚ್ಚಾಟದಲ್ಲಿ ಇವತ್ತು ತೊಂದರೆ ಅನುಭವಿಸಿದ್ದು ಮಾತ್ರ ರಾಜ್ಯದ ಅಮಾಯಕ ಮತದಾರರು ಹಾಗೂ 'ಮತದಾರೇತರರು'. ತಾವು ತಮ್ಮ ಕುರ್ಚಿ ಉಳಿಸಿಕೊಳ್ಳಲು, ತಮಗೆ ಬಲ ಇದೆ ಎಂದು ತೋರಿಸುವ 'ಹುಚ್ಚು' ಸಾಹಸದೊಂದಿಗೆ 'ಕಾರ್ಯ''ಕರ್ತ' ರನ್ನು ಬಳಸಿಕೊಂಡು ಬಂದ್ 'ಆಚರಣೆ' ಮಾಡಿಯೇ ಬಿಟ್ಟರು. ನಾಯಕರೆ ದಯವಿಟ್ಟು ಇಲ್ಲಿ ಕೇಳಿ 'ನಿಮ್ಮನ್ನು ಅಲ್ಲಿ ಕೂರಿಸಿರುವುದು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿಕೊಡಲು'. ಸದಾ ಕನಸು(!) ಕಾಣುತ್ತಿರುವ ನಿಮಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತೆ ಹೇಳಿ...
                                                            - ಡಾ.ಶ್ರೇ 
ಹೈಟೆಕ್ ವೇಶ್ಯಾವಾಟಿಕೆಯ ಸುತ್ತ
ಮೊನ್ನೆ ತೆಲುಗು ನಟಿಯೊಬ್ಬಳು, ಬೆಂಗಳೂರಿನ ಪ್ರತಿಷ್ಟಿತ ಹೋಟೆಲೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗ ಸಿಕ್ಕಿ ಬಿದ್ದಿದ್ದಾಳೆ. ಇದರಿಂದಾಗಿ ಚಿತ್ರರಂಗ ಮತ್ತು ವೇಶ್ಯಾವಾಟಿಕೆ ಗೆ ಇರುವ ಅವಿನಾಭಾವ ಸಂಬಂಧ ಬಯಲಾಗಿದೆ.
ನಟಿಯೊಂದಿಗೆ ಸಿಕ್ಕಿ ಬಿದ್ದ ಪಿಂಪ್, ಸುರಕ್ಷಿತ್ ನ ಬಳಿ ಇನ್ನೂ ಹಲವು ನಟಿಯರ contact ಇರುವ ಅಂಶವನ್ನು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ ಹಲವಾರು ಕನ್ನಡದ ನಟಿಯರು ಮತ್ತು ಸಹನಟಿಯರು ಕೂಡ ಇದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಈ ಘಟನೆಯಿಂದಾಗಿ ಚಿತ್ರರಂಗದ ಮರ್ಯಾದೆ ಗೆ ಮಸಿ ಬಿದ್ದಿದೆ, ಜನಗಳು ಕೂಡ ಇನ್ನು ನಟಿಯರನ್ನು ಸಂಶಯದ ಕಣ್ಣುಗಳಿಂದ ನೋಡುವುದರಲ್ಲಿ ಅನುಮಾನವಿಲ್ಲ. ಇಂತಹ ಕೆಲ ವ್ಯಕ್ತಿಗಳು ಮಾಡುವ ಕೆಲಸದಿಂದ ಇಡೀ film industry ಬೆತ್ತಲಾಗುತ್ತಿದೆ. 
ಹಿಂದಿ ಚಿತ್ರರಂಗದ ಕಥೆ ಏನೋ ಗೊತ್ತಿಲ್ಲ , ಆದರೆ ದಕ್ಷಿಣದ ಚಿತ್ರರಂಗಕ್ಕೆ ವೇಶ್ಯಾವಾಟಿಕೆ ಯ ಕರಿನೆರಳು ಆವರಿಸುತ್ತಿದೆ, ಈ ಘಟನೆಗಿಂತ ಮೊದಲೇ ಹಲವು ನಟಿಯರು ಇದೇ ಕೇಸಿನಲ್ಲಿ ಸಿಕ್ಕಿ ಬಿದ್ದಿರುವುದು ಚಿತ್ರರಂಗ ಕೆಟ್ಟು ಹೋದದಕ್ಕೆ ಉದಾಹರಣೆ. 
ಕೆಲವು ನಟಿಯರು ಚೆನ್ನಾಗಿ ನಟಿಸುತ್ತಾರೋ ಇಲ್ಲವೋ , ಆದರೆ ಡಿಮ್ ಲೈಟ್ ನ ಅಡಿಯಲ್ಲಿ ರಿಂಗ- ರಿಂಗ ಚೆನ್ನಾಗಿ ಆಡುತ್ತಾರೆ ಎನ್ನುವುದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ.
ಹಾಗೇ ಸುಮ್ಮನೆ - ತನ್ನ ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ನಟಿಯೊಬ್ಬಳು, ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದದ್ದನ್ನು ನೋಡಿದ ಉಮೇಶ ದೇವದಾಸ್ ಆಗಿದ್ದಾನಂತೆ. ಸಿಕ್ಕ ಸಿಕ್ಕ ಕೆಂಪು ಬೋರ್ಡಿನ ಅಂಗಡಿಯನ್ನು ಹೊಕ್ಕು, 'ಸಾರಾಯಿ ಶೀಶೆಯಲ್ಲಿ ನನ್ನ ದೇವಿ ಕಾಣುವಳು' ಎಂದು ಹಾಡುತ್ತಿದ್ದಾನಂತೆ.
                                                                                    ಡಾ.ಶೆಟ್ಟಿ 

Friday, January 21, 2011

ದೇಶದ ಇತಿಹಾಸ ಬದಲಾಗಬೇಕಿದೆ 
ದೇಶವೊಂದರ ಪ್ರಜೆಗಳನ್ನು ರೂಪಿಸುವಲ್ಲಿ ಆ ದೇಶದ ಚರಿತ್ರೆ ಮುಖ್ಯ ಪಾತ್ರ ವಹಿಸುತ್ತದೆ, ನಮಗೆ ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಬೇಕಾದರೆ ನಮ್ಮ ದೇಶದ ಚರಿತ್ರೆ ಚೆನ್ನಾಗಿರಬೇಕು. ಆದರೆ ವಿಪರ್ಯಾಸ ಎಂದರೆ ನಮ್ಮಲ್ಲಿರುವ ಇತಿಹಾಸದ ಪುಸ್ತಕಗಳು ಇದ್ದದ್ದನ್ನು ಇದ್ದ ಹಾಗೆ ಹೇಳದೆ ಸುಳ್ಳಿನ ಕಂತೆಗಳನ್ನೇ ತೆರೆದಿಡುತ್ತಿವೆ. 
ಇಂಗ್ಲೀಷರು ತಮ್ಮ ಸ್ವರ್ಥಕೋಸ್ಕರ , ಕ್ರಿಶ್ಚಿಯನ್ ಧರ್ಮದ ಪ್ರಚಾರಕೋಸ್ಕರ ನಮ್ಮ ದೇಶದ ಚರಿತ್ರೆಯನ್ನು ತಿದ್ದಿ ತಮಗೆ ಬೇಕಾದಂತೆ ಬದಲಾಯಿಸಿದ್ದರು. ಆದರೆ ಆಶ್ಚರ್ಯ ಎಂದರೆ ಸ್ವಾತಂತ್ರ ಬಂದ ನಂತರವೂ ನಮ್ಮ ಕಾಂಗ್ರೆಸ್ ಸರಕಾರ,  ತಮ್ಮನ್ನು ತಾವು ಮಹಾನ್  ಎಂದು ಕರೆಸಿಕೊಳ್ಳುವ ನಾಯಕರು, ಬ್ರಿಟಿಷರು ಬರೆದ ಚರಿತ್ರೆಯನ್ನೇ ಮುಂದುವರಿಸಿಕೊಂಡು ಹೋದದ್ದು!
ಇದರ ಪರಿಣಾಮ ನಾವು ಓದಿದ ಚರಿತ್ರೆಯ ಪುಸ್ತಕಗಳಲ್ಲಿ ಔರಂಗಜೇಬ್, ಬಾಬರ್ ಮೊದಲಾದ ಕ್ರೂರಿ, ಹಿಂದೂ ವಿರೋಧಿ ರಾಜರನ್ನು ಕೂಡ ನಾವು ಸರ್ವಧರ್ಮಸಹಿಷ್ಣು ಗಳು ಎಂದೇ ಓದಿಕೊಂಡಿದ್ದೇವೆ,ಇವರು ಮಾಡಿದ ಅನ್ಯಾಯ, ಅನಾಚಾರಗಳು, ಹಿಂದೂ ಜನರ ಮಾರಣಹೋಮ, ಅಮಾಯಕ ಹಿಂದೂ ಹೆಂಗಳೆಯರ ಮಾನ ಹರಣಕ್ಕೆ ಲೆಕ್ಕವಿದೆಯೇ? 
ಇಂಥಹ ಸುಳ್ಳುಗಳನ್ನು ಓದಿದ ನೇರ ಪರಿಣಾಮ, ನಮ್ಮ ವಿಧ್ಯಾರ್ಥಿಗಳ ಮೇಲೆ ಆಗುತ್ತಿದೆ, ದೇಶದ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಯುವಜನರು, ತಮ್ಮ ಮೂಗಿನ ನೇರಕ್ಕೆ ದೇಶದ ಚರಿತ್ರೆಯನ್ನು ನೋಡುತ್ತಿದ್ದಾರೆ. ಇದರಿಂದಾಗಿ ಯುವಜನರಿಗೆ ನಮ್ಮ ದೇಶದ ಚರಿತ್ರೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆಯಿದೆ. 
ಇನ್ನು ಕೂಡ ನಮ್ಮ ಚರಿತ್ರೆಯನ್ನು ಸರಿಯಾಗಿ ತಿಳಿಸುವ ಪ್ರಯತ್ನ ನಡೆಯುತ್ತಿಲ್ಲ, ಮೊನ್ನೆ ತಾನೇ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಕಟಗೊಂಡ ಇತಿಹಾಸದ ಪುಸ್ತಕದಲ್ಲಿ ಚೈನಾ ಯುದ್ಧದ ಬಗ್ಗೆ ಪ್ರಸ್ಥಾವನೆಯಿಲ್ಲ, ಕಾರಣವೆಂದರೆ ಚೈನಾ ಯುದ್ಧದ ಸೋಲಿಗೆ ನೇರ ಕಾರಣ ನೆಹರು ಎಂಬ ಸತ್ಯವನ್ನು ಅಡಗಿಸಿಡಬೇಕಲ್ಲವೇ!
ಸುಳ್ಳು ಸುಳ್ಳು ಚರಿತ್ರೆಯನ್ನು ಓದಿ, ತಿಮ್ಮನನ್ನು ಬೊಮ್ಮ ಮಾಡಿ, ಅದನ್ನು ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಅಧ್ಯಯನಕ್ಕೆ  ನೀಡಿದ ಪರಿಣಾಮದಿಂದ, ಇಂದಿನ ವಿದ್ಯಾರ್ಥಿಗಳು 'ರಾಜರಾಮ್ ಮೋಹನ್ ರಾಯ್ ಅವರು ದೇಶದಲ್ಲಿ ಇಂಗ್ಲೀಶ್ ಶಿಕ್ಷಣ ಪದ್ದತಿ ಜಾರಿಗೆ ತರಬೇಕೆಂದು ಕ್ರಿಶ್ಚಿಯನ್ ಮಿಷನರಿಗಳಿಂದ ಲಂಚ ತೆಗೆದುಕೊಂಡಿದ್ದಾರೆ' ಎಂಬ ಒಣಚರ್ಚೆ ಯನ್ನು ಮಾಡುತ್ತಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸಗಳು, ಸಾಮಾಜಿಕ ಬದಲಾವಣೆ ಇವರಿಗೆ ಎಲ್ಲಿಂದ ತಿಳಿಯಬೇಕು? ಮೆಕಾಲೆಯ ಇಂಗ್ಲೀಶ್ ಶಿಕ್ಷಣದಿಂದ ಎಲ್ಲವೂ ಬದಲಾಯಿತು, ದೇಶದ ಇತಿಹಾಸ ಕೂಡ, ಏನಂತೀರಿ?
                                                            -ಡಾ. ಶೆಟ್ಟಿ     

ಮಲೆ ಮಾರಿ   
ಹೌದು, ಇದು ತೀರಾ ಮನಸ್ಸಿಗೆ ನೋವು ತರುವಂತಹ ಸಂಗತಿ. ಮೊನ್ನೆ ಶಬರಿಮಲೆಯಲ್ಲಿ ಕಾಲ್ತುಳಿತಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ಏನು ಎತ್ತ ಹೇಗೆ ಎಂಬುವುದು ಈಗ ಅನಿಶ್ಚಿತ ಎನಿಸಿದರೂ ಕೆಲವು ಮಾಹಿತಿಗಳು ಲಭ್ಯವಾಗಿರುವುದಂತೂ ಸತ್ಯ. ಚಾಲಕರ ಗಲಭೆ ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ಬಿಂಬಿಸಲಾಗಿದೆ. 
ಇದೆಲ್ಲದರ ಹೊರತಾಗಿಯೂ ಸರಕಾರದ ವೈಫಲ್ಯ ಎದ್ದು ಕಾಣುತ್ತದೆ. ಕೇವಲ ಸಣ್ಣ ಸರಿಗೆಯನ್ನು ರಸ್ತೆಯ ಬದಿಗೆ ಅಳವಡಿಸಿ ಬಹಳ Conjusted  ಆಗಿ ಮಾಡಿ  1400 ವಾಹನಗಳಿಗೆ ಪಾಸ್ ಕೊಟ್ಟಿರುವುದು ವ್ಯವಸ್ಥೆಯ ಲೋಪ ದೋಷಕ್ಕೆ ಎತ್ತಿ ಹಿಡಿದ ಕನ್ನಡಿ.ಅದೆಷ್ಟೋ ಲಕ್ಷಾಂತರ ಜನ ಮಕರ ಸಂಕ್ರಮಣಕ್ಕೆ ಶಬರಿ ಮಲೆಗೆ ಭೇಟಿ ಕೊಡುತ್ತಾರೆ.'ಭಕ್ತಿಯ ಪರಾಕಾಷ್ಠೆಯ ಭಾವನೆಯೊಂದಿಗೆ'. ಇಂತಹ ಸಂದರ್ಭದಲ್ಲಿ ಅಚಾತುರ್ಯಗಳು ಆಗುವುದು ಸಂಭವನೀಯ.ಕಾರಣ, ಇದಕ್ಕೂ  ಮೊದಲು ಅಲ್ಲಿ ಇದೇ ತರಹದ ತಪ್ಪುಗಳು ನಡೆದಿವೆ.
ಇಂತಹ ಸಂಭವನೀಯ ಅವಘಡಗಳನ್ನು ತಪ್ಪಿಸಲು ಸರಕಾರ ಮತ್ತು ದೇವಾಲಯ ಮಂಡಳಿ ಪೂರ್ವನೀಯೋಜಿತವಾಗಿ  ಸಮಸ್ಯೆಯನ್ನು ಸೂಕ್ಷ್ಮೋಗಂಭೀರವಾಗಿ ಪರಿಗಣಿಸಿ ಎಲ್ಲಾ ರೀತಿಯ ಅನಾನುಕೂಲವನ್ನು ತಡೆದು ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕಿತ್ತು. ಆದರೆ ಅದೇನೇನೋ ಗಾಂಭೀರ್ಯ ಕೆಲಸಗಳಿತ್ತೆಂದು ಈ ವಿಚಾರವನ್ನು ಬದಿಗಿಟ್ಟರೋ  ಗೊತ್ತಿಲ್ಲ. ಇರಲಿ ಬಿಡಿ.
ಈಗ ಹೈ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಉತ್ತಮ ಬೆಳವಣಿಗೆಯೇ ಸರಿ. ಇದಕ್ಕೂ ಮೀರಿ ಮಕರ ಜ್ಯೋತಿಯ ಬಗ್ಗೆಯೂ ತನಿಖೆಯಾಗಬೇಕೆಂಬ ಧ್ವನಿ ಹೈ ಕೋರ್ಟ್ ನಿಂದ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂಬುವುದು ನ್ಯಾಯಾಂಗ ವ್ಯವಸ್ಥೆಗೆ ನ್ಯಾಯಯುತವಾಗಿ ಮತ್ತು ಮೌಲ್ಯಯುತವಾಗಿ ತಿಳಿದಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ನ್ಯಾಯಾಂಗ  ಬೆಳವಣಿಗೆಯಿಂದ ಜನಕ್ಕೆ ಹಾಗೂ ಭಕ್ತಾದಿಗಳಿಗೆ ಉಪಕಾರವಾದರೆ ಸರ್ವರಿಗೂ ಒಳಿತು ಎಂದಷ್ಟೇ ಹೇಳಬಹುದು. 
                                -ಡಾ.ಶ್ರೇ 
ಫ್ಲೈ ಯಿಂಗ್ ಸಾಸರ್ 
ಫ್ಲೈ ಯಿಂಗ್ ಸಾಸರ್  ರಹಸ್ಯವು, ಬಯಲಾಗದ ಕುತೂಹಲಕ್ಕೆ ಕಾರಣವಾಗುವ ವೈಜ್ಞಾನಿಕ ಸಂಗತಿಯಾಗಿದೆ. ಇದು ಎರಡನೇ ಮಹಾಯುದ್ದದ ಕಾಲಕ್ಕೆ ಜನರ ಬಾಯಿ ಮಾತಾದ ನಿಗೂಢ ಸತ್ಯ. 
ಯಂತ್ರದ ಶಬ್ದವಿಲ್ಲದೆ. ಆಕಾಶದಲ್ಲಿ ಅತೀ ವೇಗವಾಗಿ ಚಲಿಸುವ ಮತ್ತು ನಿಲ್ಲುವ,  ಹಠತ್ತಾಗಿ ದಿಕ್ಕು ಬದಲಿಸುವ, ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಒಂದು ಆಕಾಶ ಕಾಯ. ಇದರ ಬಗ್ಗೆ ನಿಖರವಾಗಿ ಮಾಹಿತಿಯನ್ನು ನೀಡಲು ಹಚ್ಚಿನ ದೇಶದ ವಾಯು ಸೇನೆಯು ನಿರಾಕರಿಸಿತ್ತು.ಕಾರಣ ಜನರಲ್ಲಿ ಇದರ ಬಗ್ಗೆ ಆತಂಕ ಮೂಡಬಹುದು ಎಂಬುವುದಾಗಿತ್ತು.
ಇದರ ಬಗ್ಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ ವಿಜ್ಞಾನಿಗಳಿಗೂ ಮಾಹಿತಿಯು ನೀಡುವುದೆಂದರೆ ಅದು ಜನರಲ್ಲಿ ಭ್ರಮೆಯಂತೆ ಗೋಚರವಾಗುತ್ತಿತ್ತು. ರೇಡಾರ್ ಪರಿಧಿಯ ಮೂಲಕ ವೀಕ್ಷಿಸಬಹುದಾದ ಇಂತಹ ರಹಸ್ಯಗಳು ಇನ್ನೂ ನಿಗೂಢವಾಗಿ  ಉಳಿದಿದೆ. ಇದರ ವರ್ತನೆ ಗಮನಿಸಿದಾಗ ಬುದ್ದಿವಂತಿಕೆಯ ಅದರ ಚಲನ-ವಲನ ಹಾಗೂ ಇದು ಎಲ್ಲಿಂದ ಬರುತ್ತದೆ, ಮತ್ತು ವೈಜ್ಞಾನಿಕವಾಗಿ ಬಹಳ ಮುಂದುವರಿದ ತಂತ್ರಜ್ಞಾನದಂತೆ ವ್ಯಕ್ತವಾಗುತ್ತದೆ. ಅಮೆರಿಕದಂತ ದೇಶಗಳಿಗೂ ಒಂದು ಸವಾಲು ಎಂಬುವುದು ಗಮನಾರ್ಹ 
ಭ್ರಮಾ ಲೋಕದಲ್ಲಿ ಹೆಚ್ಚಿನವರು ಇರುವುದರಿಂದ ಫ್ಲೈ ಯಿಂಗ್ ಸಾಸರ್ ಕುತೂಹಲಕ್ಕೆ ಎಡೆಮಾಡಿ ಕೊಡುತ್ತಲೇ ಇತ್ತು. ಇದನ್ನು ಬೇಧಿಸಲು ಹೋದವರನ್ನು ಅಪಹಾಸ್ಯ ಮಾಡಿದವರೇ ಹೆಚ್ಚು. ಬ್ಲೂ ಬುಕ್ ಸಂಶೋಧನೆಯ ದಾಖಲೆಗಳಲ್ಲಿ ಇದರ ಉಲ್ಲೇಖವಿದೆ.
                                                        -ಕೆ.ಪಿ.ಭಟ್.



Thursday, January 20, 2011

ಪ್ರಭಾವ/ಪರಭಾವ 
ಪ್ರತಿಯೊಬ್ಬನ ಬೆಳವಣಿಗೆಯಲ್ಲಿ ಆತ ನಂಬಿಕೊಂಡು ಬಂದಿರುವ ತತ್ವಗಳಿಗಿಂತಲೂ; ಕೆಲವು ವ್ಯಕ್ತಿಗಳ ಮಾತು,ಕ್ರಿಯೆ ಅಥವಾ ಜೀವನ ಶೈಲಿಯು ಪ್ರಭಾವ ಬೀರುತ್ತದೆ.ಅಂತಹ ಪ್ರಭಾವ ಶಾಲಿ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ತಮ್ಮದೇ ಆದ ಛಾಪು ಬೀರಿ ಇಮೇಜ್ ಪಡೆದುಕೊಂಡಿರುತ್ತಾರೆ. ಇವರ ವಂಶಸ್ತರ ಪೈಕಿ ಯಾವಾನಾದರೊಬ್ಬ ತನ್ನದೇ ಇಮೇಜ್ ಗಳಿಸುವ ಹಪಹಪಿಯಲ್ಲಿ ಹೊರಗಿಳಿದರೆ, ಜನರು ಆತನನ್ನು ಮೂಲವ್ಯಕ್ತಿಯ ಇಮೇಜ್ ಗೆ ಹೋಲಿಕೆ ಮಾಡಲು ತಕ್ಕಡಿಯಲ್ಲಿ ಕೂರಿಸಿ ತೂಕ ನೋಡ ತೊಡಗುತ್ತಾರೆ. ಇಲ್ಲೇ ಆಗುವುದು ಎಡವಟ್ಟು!!
ಇವನೊಬ್ಬ ಉತ್ತಮ ಕುಟುಂಬದಲ್ಲಿ ಜನಿಸಿ ಬೆಳೆದು ಬಂದ, ಜನರ ನಡುವೆ Genius ಎನಿಸಿಕೊಂಡವ. ಈತನ ಮಾತು, ಜ್ಞಾನ, ಕನಸು(?) , ಕಲ್ಪನೆ, ಸಾಮಾಜಿಕ ಚಿಂತನೆ ಯಾವ ಪರಿಯಿತ್ತೆಂದರೆ, ಮುಂದೆ ಒಬ್ಬ ಮಹಾತ್ಮನಾಗುವ ಎಲ್ಲಾ ಮೌಲ್ಯಭರಿತ ಅಂಶಗಳಿಂದ ತುಂಬಿ ತುಳುಕುವಂತಿತ್ತು. ಈತನ ತತ್ವ ಸಿದ್ದಾಂತಗಳಿಗೆ  ಕಿವಿಕೊಟ್ಟವರೆಲ್ಲ ಕೊನೆಗೆ ತಲೆಯನ್ನೇ ಕೊಟ್ಟು ಬರುವಂತಹ ಪರಿಸ್ಥಿತಿಗೆ ಬಂದು ಸಿಲುಕಿದ್ದು ಬೇರೆ ವಿಷಯ! ಅಂತೂ, ಈತ ಸಾಮಾನ್ಯ ದ್ರಡತೆಯ  ಮನಸ್ಸಿನೊಂದಿಗೆ ತನ್ನ ಬಳಿ ಬಂದವರನ್ನು ಕುಣಿಸುವುದರಲ್ಲಿ ಕರಗತನಾಗಿದ್ದ.
ಈತನ ಬಗ್ಗೆ Introduction ಕೊಟ್ಟು ಓದುಗರ ಮೂಡ್ ಹಾಳು ಮಾಡುವ ಉದ್ದೇಶ ನನಗಿಲ್ಲ. ಆದರೆ ಈತನ ವಿಲಕ್ಷಣ ಬುದ್ದಿಯ ಬಗ್ಗೆ ಹೇಳದಿರಲು ಕಷ್ಟವಾಗುತ್ತಿದೆ. ನಿಮ್ಮಲ್ಲಿ ಯಾವುದಾದರು ಉತ್ತಮ ಆಲೋಚನೆ, ಯೋಜನೆಗಳಿದ್ದರೆ ಈತ ತನ್ನ ಜ್ಞಾನಭಂಡಾರದ ಹಿಡಿದ ಮಾತುಗಳಿಂದ ನಿಮ್ಮ ಯೋಜನೆಗಳನ್ನು ಮೇಲೆತ್ತಿಟ್ಟು, ಕೆಳಗೆ ಬೀಳಿಸಿ, ಮೆಟ್ಟಿ, ಗುಂಡಿ ತೋಡಿ, ಮಣ್ಣು ಮುಚ್ಚಿ, ಕಲ್ಲೊಂದನ್ನು ಇಟ್ಟು  ಅದರ ಮೇಲೆ 'Desperate'  ಎಂದು ಬರೆಸಿಬಿಡುತ್ತನೆ. ನೀವು ಅದ್ಯಾವ ಹುರುಪು ಹುಮ್ಮಸ್ಸಿನಿಂದ ನಿಮ್ಮ ಕೆಲಸ ಸಾಧಿಸಲೆಂದು ಅವನ ಬಳಿ ಹೋಗಿದ್ದಿರೋ, ಆ ಕೆಲಸವೇ ನಿಮ್ಮ ಮೂರ್ಖತನದ ಪ್ರತೀಕವೆಂಬಂತೆ ಗೋಚರವಾಗುತ್ತದೆ. ಅಂತಹ, ಕಲೆ ಅವನಲ್ಲಿದೆ.   
ನಾವು ಯಾವುದೇ creative ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಬೇಕೆಂದರೆ ಅದರಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುನ್ನುಗ್ಗಿದರೆ ನಮ್ಮ ವಿಜಯ ನಿಶ್ಚಿತ. ಆದರೆ ಆ ಸಮಯದಲ್ಲಿ ನಮ್ಮ ಒಡನಾಟ ಯಾರೊಂದಿಗಿದೆಯೆಂದು ನಾವೊಮ್ಮೆ ಅವಲೋಕನ ಮಾಡಿಕೊಳ್ಳದೆ ಹೋದರೆ ಇಂತಹ Fake ಬುದ್ದಿಜೀವಿಗಳ ಮುಷ್ಠಿಯೊಳಗೆ ಸಿಲುಕಿ ಒದ್ದಾಡಬೇಕಾಗುತ್ತದೆ. ಇವರು ನಮ್ಮನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡಿ, ನಮ್ಮ ಕನಸುಗಳನ್ನು ಹೀರಿ, ಭವಿಷ್ಯವೊಂದು ಕತ್ತಲೆಂದು ತೋರಿಸುತ್ತಾರೆ. 
ಇಂತವರ Management ನಲ್ಲಿ ಪಳಗಿ ಉತ್ತಮ ಅಡಿಆಳುಗಳಾಗಿ ತಮ್ಮದೇ ಒಂದು Fake ಸಮಾಜದಲ್ಲಿ ತಮ್ಮನ್ನು ತಾವೇ ದುರೀಣರು ಎಂದೆನಿಸಿಕೊಂಡು ಬದುಕುವವರೂ ಇದ್ದಾರೆ. ಇವರೆಲ್ಲಾ ಕೂಪ ಮಂಡೂಕಗಳಿಗಿಂತ ಒಂದು ಲೆವೆಲ್ ಕಡಿಮೆ.ನಿತ್ಯಾನಂದ ಭಕ್ತರಂತೆ ಇವರೆಲ್ಲಾ Brain wash ಮಾಡಿಸಿಕೊಂಡ ಶುದ್ದ, ಶುಚಿ,'Ste-riled' ಮನಸ್ಕರು.ಇವರ ಆಲೋಚನೆಗಳಲ್ಲಿ ಯಾವುದೇ ವೈಶಿಷ್ಟ್ಯತೆ ಒಳಗೊಂಡಿರುವುದಿಲ್ಲ. ಇವರಿಗೆ ಕನಸಿನ ಕೂಸು ಹುಟ್ಟಿಸುವಷ್ಟು Thinking sperms ಇಲ್ಲವೇ ಇಲ್ಲ. ಯಾಕೆಂದರೆ, ಇವರ ಮನಸ್ಸು sterile-ಲಿಂಗರಹಿತ.ಇಂತವರ ಒಂದು ಗುಂಪಿಗೆ ನಾಯಕನಾಗಿ ಉಳಿಯಲು ಏಕೈಕ ರಣಧೀರನಾಗಿ ಈ ನಮ್ಮ So called ಜ್ಞಾನಿಯಾಗಿರುತ್ತಾನೆ. ತನ್ನ ವಿಕೃತ, ವಿಕಲ್ಪ, ವಿವೇಚನಾ ರಹಿತ ಒಳ ಮನದ ಒಣ ತೀಟೆಯನ್ನು ತೀರಿಸಲು, ತನ್ನದೇ ವಿಶೇಷ(?) ವಿಚಾರವಂತಿಕೆ ವಿವಿಧ ಆಯಾಮಗಳನ್ನೊಳಗೊಂಡ ಪ್ರಯೋಗಗಳಲ್ಲಿ ತೊಡಗುತ್ತಾನೆ.ರೇಸ್ ಕುದುರೆ ಹಾಗೇ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಇವನ ಶಿಷ್ಯ೦ದಿರೆಲ್ಲ ,ಹೆಜ್ಜೆ ಹೆಜ್ಜೆಗೂ ತಾವೇ ಗೆಲ್ಲುತ್ತಿದೀವೆ ಎಂಬ ಭ್ರಮೆಯಲ್ಲಿ ಮುಂದಿನ ಗುರಿಯಕಡೆ ಸಾಗುತ್ತಿರುತ್ತಾರೆ. ಆದರೆ, ಆ ಗುರಿಯು ಮೀನಿಗೆ ಹಾಕಿದ ಗಾಳವೆಂದು ತಿಳಿಯುವಷ್ಟು ಕೆಪಾಸಿಟಿ, ಮೆದುಳು ತೊಳೆಸಿ ಬಂದವರಿಗೇನು ಗೊತ್ತು? ಈತನ ವಾಶಿಂಗ್ ಪ್ರೋಸೆಸ್ಸ್ ಕೂಡಾ ಲೇಟೆಸ್ಟ್ ಆಗಿರುತ್ತದೆ.  Ariel, Tide ನಂತಿರುವ ಮಾತು ನಿಮ್ಮ ನೆಲದ ಕ್ರಿಮಿ ಕೀಟವನ್ನು ಸಂಪೂರ್ಣ ನಾಶಮಾಡಬಲ್ಲ Phenoyl, Lizol ಗಳಂತ ಸಿದ್ದಾಂತ, ಎಲ್ಲವೂ ನಿಮ್ಮನ್ನು ಸ್ವಚ್ಚಂದಗೊಳಿಸುವ Psycho-chemical process.  ಈ Chemistry ಯಲ್ಲಿ ಸಾಯುತ್ತಿರುವುದು ವೈರಸ್ಗಳಲ್ಲ, ನಿಮ್ಮ ಕನಸುಗಳು ಎಂದು ತಿಳಿಯುವ ಮುಂಚೆಯೇ ನೀವು ಹೊರಬಂದರೆ ನೀವು ಬದುಕಿದಿರಿ. ಅನುಭವಿಸಿ ಬಂದರೆ ನೀವು ಗೆದ್ದಿದೀರಿ. ಅಲ್ಲೇ, ಸ್ವಾಮಿ ಭಕ್ತರಾಗಿ ಉಳಿದರೆ, ಜೈ ನಿತ್ಯಾನಂದಜೀಕಿ 
                                                      -ಅತಿಥಿ 
ಸಿಮ್ ಬದಲಾದರೂ ನಂಬರ್ ಬದಲಾಗಲ್ಲ
ನನಗೊಬ್ಬ ಗೆಳೆಯನಿದ್ದಾನೆ, 4 ದಿನಕ್ಕೊಮ್ಮೆ ಆತನ ಮೊಬೈಲ್  ನಂಬರ್ ಬದಲಾಗುತ್ತಲೇ ಇರುತ್ತದೆ. ಒಂದು ದಿನ Airtel ಸ್ವಲ್ಪ ಸಮಯ ಕಳೆದರೆ vodafone ಹೀಗೆ ಈತ ಎಲ್ಲಾ ಕಂಪೆನಿಗಳ ಸಿಮ್ ಕಾರ್ಡ್ ಬಳಸಿದ್ದಾನೆ.ಯಾಕಯ್ಯಾ ಆಗಾಗ ನಂಬರ್ ಬದಲಾಯಿಸುತ್ತಿ? ಎಂದರೆ ಆತ ಹೇಳುತ್ತಿದ್ದ ಉತ್ತರ 'ಈ ಮೊಬೈಲ್ ಕಂಪೆನಿಗಳು ದಿನಕ್ಕೊಂದು Offer ಕೊಡುತ್ತಿವೆ, ಯಾವ ಸಿಮ್ ಬಳಸಬೇಕೆಂದು ಗೊತಾಗುತ್ತಿಲ್ಲ ಅದಕ್ಕೆ ಆಗಾಗ ಚೇಂಜ್ ಮಾಡುತ್ತೇನೆ' ಎಂದ.
ಇನ್ನೂ ಮುಂದೆ ಇಂತಹ ಬಹು ಸಿಮ್ ಪ್ರಿಯರಿಗೆ ಆಗಾಗ ಸಿಮ್ ಬದಲಾಯಿಸುವ ಅಗತ್ಯವಿಲ್ಲ, ಯಾಕೆಂದರೆ ಇವತ್ತಿನಿಂದ ದೇಶದಲ್ಲಿ mobile number portability (M.N.P) ಜಾರಿಗೆ ಬರುತ್ತಿದೆ. ಅಂದರೆ ಇನ್ನುಮುಂದೆ ನಾವು ಈಗ ಬಳಸುತ್ತಿರುವ ಸಿಮ್ ಕಾರ್ಡಿನ Offer ಚೆನ್ನಾಗಿಲ್ಲದಿದ್ದರೆ ಹೊಸ ಸಿಮ್ ಕಾರ್ಡ್ ಕೊಂಡುಕೊಂಡರೂ ಹಳೆ ನಂಬರ್ ಅನ್ನು ಉಳಿಸಿಕೊಳ್ಳಬಹುದು. ಅದಕ್ಕಾಗಿ ನಾವು ಕೇವಲ 19 ರೂಪಾಯಿ  ಪಾವತಿಸಿದರೆ ಸಾಕು.
ಇವತ್ತಿನಿಂದ 'Hai, my number has been changed plz save my new number' ಎಂಬ ಮೆಸೇಜ್ ಗಳು ಬರುವುದು ಕಡಿಮೆಯಾಗಬಹುದು. ಕೆಲವರು ಕೇವಲ ತಮ್ಮ ಹಿಂದಿನ ನಂಬರ್ ಅನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಲ್ ಚಾರ್ಜ್ 2 ರೂ ಆದರೂ ಅದೇ ಕಂಪೆನಿಯ ಸಿಮ್ ಅನ್ನು ಬಳಸುತ್ತಿರುತ್ತಾರೆ. ಆದರೆ ಇನ್ನೂ ಮುಂದೆ ಇಂತವರು ಕಷ್ಟ ಪಡುವ ಅವಶ್ಯಕತೆ ಇಲ್ಲ.ಕೇವಲ 19 ರೂ ಹಳೆ ಸಿಮ್ಮಿಗೆ ಬಾಯ್ ಬಾಯ್.
ಹಾಗೇ ಸುಮ್ಮನೆ-  mobile number portability ಯಿಂದ  ನಮ್ಮ ಉಮೇಶ ತುಂಬಾ ಖುಷಿಯಾಗಿದ್ದಾನೆ. ಯಾಕೆಂದರೆ ತಾನು ಈಗ ಬಳಸುತ್ತಿರುವ ಸಿಮ್ಮಿನಲ್ಲಿ ರಾತ್ರಿ 9 ಗಂಟೆಗೆ ಯಾರಿಗಾದರೂ ಫೋನ್ ಮಾಡಬೇಕು ಎಂದರೆ, 7 ಗಂಟೆಗೆ ಒತ್ತಲು ಶುರು ಮಾಡಬೇಕಂತೆ. 9 ಗಂಟೆಯಾದಾಗ ಹೇಗೋ ಫೋನ್ ಕನೆಕ್ಟ್ ಆಗುತ್ತಂತೆ.
                                                     -ಡಾ.ಶೆಟ್ಟಿ
ಚಲಂ ಮತ್ತು ಸ್ತ್ರೀ
ಚಲಂ, ಆಂಧ್ರ  ಮೂಲದ ಒಬ್ಬ ಅತ್ಯುತ್ತಮ ಬರಹಗಾರ. ಈತನ ಮೇಲೆ ವಿವಾದಗಳ ಸುರಿಮಳೆಯೇ ಇದೆ. ಸದಾ ನೆನಪಲ್ಲಿ ಉಳಿಯುವಂತಹ ರಸಿಕ ವ್ಯಕ್ತಿತ್ವ ಇವರದ್ದು.
ಹೆಣ್ಣಿನ ಬಗ್ಗೆ ಇವರದ್ದೇ ಆದ ಧೋರಣೆಗಳು ಇವೆ. ಸ್ವತಂತ್ರಪೂರ್ವ ಕಾಲದಲ್ಲೇ living- together  ಬಗ್ಗೆ ಮಾತನಾಡಿ, ಎಲ್ಲರ ಕಣ್ಣು ಕೆಂಪಾಗುವಂತೆ ಮಾಡಿ ಬಹಿಷ್ಕಾರಕ್ಕೆ ಒಳಗಾಗಿದ್ದವರು. ಇವರ ಸಂತೋಷ ಎಲ್ಲವೂ ಕೇವಲ ಒಂದು ಹೆಣ್ಣಿಗೆ ಸೀಮಿತವಾಗಿರದೆ, ಹಲವರನ್ನು ಪ್ರೇಮಿಸಿ ಕಾಮಿಸಿದಂತಹ ರಸಿಕ. 
ಪ್ರೇಮ ಪತ್ರಗಳು ಬರೆದದ್ದು ಸಾವಿರಾರು, ಗಿಡಮರಗಳ ನಡುವೆ ಸುತ್ತಿ, ಹುಲ್ಲುಗಾವಲು ಗುಡಿಸಲುಗಳಲ್ಲಿ ಸ್ವಚ್ಛಂದವಾಗಿ  ಭೋಗಿಸಿ ಹೊಸ ಸಂಸ್ಕೃತಿಯ ಬೆಳವಣಿಗೆಗೆ ಸಾಕ್ಷಿಯಾದರು. 
ಪಾಶ್ಚಿಮಾತ್ಯರಲ್ಲಿ ಮೊದಲು ಕಂಡು ಬಂದ living- together ಸಂಸ್ಕೃತಿ ಗೆ, ಇತ್ತೀಚಿನ ದಿನಗಳಲ್ಲಿ ನಮ್ಮಲ್ಲೂ ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡಿದೆ. ಇದನ್ನು ಸರಿ-ತಪ್ಪು ವಿಚಾರಿಸಲು ಹೋದರೆ ಒಂದು ಅಧ್ಯಾಯವೇ ಆಗಬಹುದು! ಚಲಂ, ಅವರ ಕಾಲಘಟ್ಟದಲ್ಲಿ ಎಲ್ಲರ ಬಾಯಲ್ಲೂ ಬಾಯಾರಿಕೆಗೆ ಕಾರಣವಾದ ವ್ಯಕ್ತಿತ್ವ ಇವರದು. ಚಲಂ ದೇವರಿಗೆ ಬದಲಾಗಿ ಸ್ತ್ರೀಯನ್ನು ಇರಿಸಿ ಆರಾಧಿಸಿದವರು.
                                   ಕೆ. ಪಿ. ಭಟ್ 
ಫ್ರೀಕ್ ಔಟ್ ಫಂಡ್ 
೧.೩ ಟ್ರಿಲಿಯನ್ ಕೋಟಿ (Astronomical sum) ಇದು ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಘನ ಗಾಂಭೀರ್ಯ ವ್ಯಕ್ತಿಗಳು ಕೂಡಿಟ್ಟ ಮೊತ್ತ.
ಮೊತ್ತದ ಸಂಖ್ಯೆಯನ್ನು ಒಂದು ಖಾಲಿ ಪೇಪರ್ ಮೇಲೆ ಬರೆದರೆ mathematic experts ಅವರುಗಳನ್ನು  ಹೊರತುಪಡಿಸಿ, ಸಾಮಾನ್ಯರಿಗೆ ಲೆಕ್ಕ ಹಾಕಿ ಮೊತ್ತ ಹೇಳಲು  ಸಾಧ್ಯವಿಲ್ಲದಷ್ಟರ ಮಟ್ಟಿಗಿನ ಉದ್ದ ಸಂಖ್ಯೆ.
ಎಲ್ಲರ ಒಳ-ಹೊರ ಗುಟ್ಟುಗಳನ್ನು ಬಯಲಿಗೆಳೆಯುವ ವಿಕೀ ಲೀಕ್ಸ್ ಸಂಸ್ಥೆ ಈ ವಿಚಾರವನ್ನು ಬಯಲು ಮಾಡಿ ಇಡೀ ಭಾರತೀಯರನ್ನು Freak out ಆಗುವಂತೆ ಮಾಡಿದೆ. ಎಂದೂ Practical  ಆಗಿ ಕೇಳರಿಯದಷ್ಟರ ಮಟ್ಟಿಗೆ ನಮ್ಮವರು ಮೊತ್ತ ಕೂಡಿ ಹಾಕಿದ್ದಾರೆ. 
ಸದಾ ಬಡತನ, ಯೋಜನೆಗೆ ಹಣದ ಕೊರತೆ, ಸಾಲ ಬಾಧೆ ಇನ್ನೂ ಹೇಳಲಾಗದ ಹಲವಾರು ಬಾಧೆಗಳಿಂದ ಬಳಲಿ ಬೆಂಡಾಗಿರುವ ನಮ್ಮ ದೇಶಕ್ಕೆ ಈ ಹಣವನ್ನು  ಬಳಸಿದರೆ ಅಥವಾ ಒಂದೊಮ್ಮೆ ಬಳಸಿದ್ದಿದ್ದರೆ, ವಿಶ್ವದ ಮಹೋನ್ನತ ರಾಷ್ಟ್ರಗಳಲ್ಲಿ ಭಾರತವೂ ಒಂದಾಗುತ್ತಿತ್ತು. ಹಲವು ವ್ಯಕ್ತಿಗಳ ಮನದಲ್ಲಿ ಈ ವಿಚಾರದ ಬಗ್ಗೆ  ಈ ವಿಷಯದ ಅಲೆ ಎದ್ದಿದ್ದರೂ, ಅದು ಎಲ್ಲೆಲ್ಲೋ ಬಳಕೆಯಾಗಿ ಪೋಲಾದರೆ, ಇನ್ನೂ ಕೆಲವರನ್ನು ವ್ಯವಸ್ಥೆಯೇ ಕಟ್ಟಿ ಹಾಕಿ ಬಿಟ್ಟಿದೆ. 
ತಮ್ಮನ್ನು ತಾವು ವೈಭವೋಪೇತ ಎಂದು ಕರೆದುಕೊಳ್ಳುವ ಮತ್ತು ಕರೆಸಿಕೊಳ್ಳುವ ಚಟದಲ್ಲಿ ರಾಷ್ಟ್ರ ನಿರ್ಮಾಣದ ಅಗತ್ಯವನ್ನೇ ಬದಿಗಿಟ್ಟಿರುವುದು ಇಲ್ಲಿ ಎದ್ದು ಕಾಣುವಂತಹ ಸಂಗತಿ. ಈ ವ್ಯಕ್ತಿಗಳು ಯಾರು ಎಂದು ಸದ್ಯದಲ್ಲಿ  'ಒಪ್ಪಂದದೊಂದಿಗೆ' ಬಯಲು ಮಾಡುವ ಸುದ್ದಿ ಈಗ ಪ್ರಸ್ತುತ ಪರಿಸ್ಥಿತಿ. ಅಲ್ಲಿ ಯಾರೂ ಬೇಕಾದರೂ ದುಡ್ಡು ಕೂಡಿಟ್ಟಿರಲಿ. ಈ ಎಲ್ಲಾ ಮೊತ್ತವನ್ನು ಅವರು ದೇಶಕ್ಕೆ ಕೊಟ್ಟು ಮಹಾನ್ ತ್ಯಾಗಿಗಳಾಗಿದ್ದರೂ ಚಿಂತೆಯಿಲ್ಲ. ಆದರೆ ಕನಿಷ್ಠ ಪಕ್ಷ ಕನಿಷ್ಠ ಮೊತ್ತವನ್ನು ನೀಡುವ ಮನಸ್ಸಾದರೆ ದೇಶದ ಸ್ಥಿತಿ ಬದಲಾಗುವುದರಲ್ಲಿ ಸಂಶಯವಿಲ್ಲ. 
                                                                     - ಡಾ.ಶ್ರೇ 

Wednesday, January 19, 2011

ಚಿಲ್ಲರೆ ಜಗಳ..
ಅಲ್ಲೊಂದು ಕಡೆ ಬಸ್ಸಿನ ಕಂಡೆಕ್ಟರ್ ಮತ್ತು ಪ್ರಯಾಣಿಕ  ಜಗಳವಾಡುತ್ತಿದ್ದಾರೆ, ಇನ್ನೊಂದು ಕಡೆ ಹೋಟೆಲಿನ ಮಾಲೀಕ ಮತ್ತು ಗಿರಾಕಿಯ ಜೊತೆ ಜಟಾ-ಪಟಿ ನಡಯುತ್ತಿದೆ; ಮತ್ತೊಂದು ಕಡೆ ವೈನ್ ಶಾಪಿನಲ್ಲಿ ಪಾನಮತ್ತ ಗಿರಾಕಿ  ದೊಡ್ಡ ದನಿಯಲ್ಲಿ ಬೊಬ್ಬೆ ಹಾಕುತ್ತಿದ್ದಾನೆ. ಏನಪ್ಪಾ ಇದು? ಎಂದು ಅಂದುಕೊಂಡಿರ? ನಮ್ಮಲ್ಲಿ ದಿನಕಳೆದಂತೆ ಚಿಲ್ಲರೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ನಿಮಗೆ ಅನಿಸುತಿಲ್ಲವೇ?
ಈ ಚಿಲ್ಲರೆಯ ಸಮಸ್ಯೆ ದಿನಕಳೆದಂತೆ ನಮಗೆ ತೊಂದರೆ ಕೊಡುತ್ತಿದೆ. ಎಲ್ಲಿ ಹೋದರು 'ಹೇ ಚಿಲ್ರೆ ಕೊಡ್ರಿ' ಅನ್ನುವ ವ್ಯಕ್ತಿಗಳು ನಮ್ಮ ಸುತ್ತಮುತ್ತ ತುಂಬಾ ಇದ್ದಾರೆ. ಪ್ರಸ್ತುತ ದಿನಗಳಲ್ಲಿ ಜನರ ಪರ್ಸಿನಿಂದ 1 ರೂಪಾಯಿ, 2 ರೂಪಾಯಿ ನಾಣ್ಯಗಳು ಕಾಣೆಯಾಗಿ, ಆ ಜಾಗದಲ್ಲಿ ಗರಿ ಗರಿ ನೋಟುಗಳು ಬಂದು ಕುಳಿತಿವೆ. ಜನರಲ್ಲಿ ಬಡತನ ನಿವಾರಣೆಯಾಗಿದೆಯೋ ಇಲ್ಲವೋ ಆದರೆ ಜನರಲ್ಲಿ ಚಿಲ್ಲರೆ ಕಾಣುವುದು ವಿರಳ. ಜನ  5 ರೂಪಾಯಿ ಸಾಮಾನು ಕೊಂಡುಕೊಂಡರು 50 ರೂಪಾಯಿ ನೋಟು ನೀಡುತ್ತಾರೆ, ಇದರಿಂದಾಗಿ ಅಂಗಡಿಯ ಮಾಲಕ, ಬಸ್ಸಿನ ನಿರ್ವಾಹಕ ಮುಂತಾದವರು ಗಿರಾಕಿಗಳ ಜೊತೆ ಹೋದಲ್ಲಿ ಬಂದಲ್ಲಿ ಜಗಳವಾಡುವುದನ್ನು ಕಾಣಬಹುದು. ಕೆಲವೊಮ್ಮೆ ಈ ಜಗಳಗಳು ತಾರಕಕ್ಕೇರಿ ಹೊಡೆದಾಟ ನಡೆಯುವುದುಂಟು.
ಈ ಚಿಲ್ಲರೆ ಸಮಸ್ಯೆ ಎಲ್ಲಿಯವರೆಗೆ ಬಿಗಡಾಯಿಸಿದೆ ಎಂದರೆ ಬ್ಯಾಂಕಿನಲ್ಲಿರುವ ಅಧಿಕಾರಿಗಳು ಕೂಡ ಗ್ರಾಹಕರ ಜೊತೆ ಚಿಲ್ಲರೆ ಕೇಳುವ ಹಂತಕ್ಕೆ ತಲುಪಿದ್ದಾರೆ. ಈ ಸಮಸ್ಯೆಗೆ ಪರಿಹಾರವಂತೂ ಸದ್ಯದಲ್ಲಿ ಕಾಣುತ್ತಿಲ್ಲ, ಕಾರಣ ಹುಡುಕ ಹೊರಟರೆ ಸಮರ್ಪಕವಾದ ಕಾರಣವು ಸಿಗುತ್ತಿಲ್ಲ. ಇನ್ನು ಜನ ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗಳವಾಡುವುದರ ಜೊತೆಗೆ ಚಿಲ್ಲರೆಗಾಗಿ ಯುದ್ದ ಮಾಡಿದರು ಸಂಶಯವಿಲ್ಲ.
ಹಾಗೇ ಸುಮ್ಮನೆ- ಚಿಲ್ಲರೆ ಸಮಸ್ಯೆಯಿಂದ ತೊಂದರೆ ಅನುಭವಿಸಿದ ಉಮೇಶ, ದೇಶದಲ್ಲಿ  coin-box ಗಳನ್ನು ನಿಷೇಧಿಸಬೇಕು ಎಂಬ ಸಲಹೆ ನೀಡಿದ್ದಾನೆ. ಚಿಲ್ಲರೆಗಳು ಇದರಲ್ಲೇ ಬಂಧಿಯಾಗಿದೆ ಎಂಬುವುದು ಈತನ ಭಾವನೆ. ಜನರಲ್ಲಿ 2,3 ಮೊಬೈಲ್ ಇರುವಾಗ coin-box ಗಳ ಅವಶ್ಯಕತೆಯಾದರು ಏನು? ಎಂಬ ಪ್ರಶ್ನೆ ಉಮೇಶನದು.
                                          ಡಾ. ಶೆಟ್ಟಿ 
ಶಿವಪ್ಪ ಕಾಯೋ ತಂದೆ... 
ಉಟ್ಟ ಸೀರೆಯಲ್ಲಿ ಹಲವೆಡೆ ಚಿಂದಿಯಾಗಿ, ಶರೀರ ನಿಷ್ಕ್ರೀಯವಾಗಿ, ಕಣ್ಣಲ್ಲಿ ಯಾರನ್ನೋ ಹುಡುಕುತ್ತಾ, ಎರಡು ಕೈಗಳಲ್ಲೂ ಊರುಗೋಲನ್ನು ಹಿಡಿದು, ಮುದುಕಿಯೊಬ್ಬಳು ಭಿಕ್ಷಾಟನೆಯಲ್ಲಿ  ತೊಡಗಿದ್ದಳು.
ಭಿಕ್ಷೆ ಬೇಡುವವರನ್ನು ನಾನು ಅಲ್ಲಿ ಇಲ್ಲಿ ನೋಡುತ್ತಾ ಇರುತ್ತೇನೆ. ಆದರೆ ಮಂಗಳೂರಿನ, ಕೊಟ್ಟಾರಚೌಕಿಯ ಬಳಿಯಲ್ಲಿ, ಮೇಲೆ ಹೇಳಿದ ಮುದುಕಿಯನ್ನು ಕಂಡು ಅಳುತ್ತಿದ್ದ ಇನ್ನೊಂದು ಹರೆಯದ ಭಿಕ್ಷುಕಿಯನ್ನು ಕಂಡೆ. ಸಿಟಿ ಬಸ್ ಗಳಿಗೆ ಭಿಕ್ಷೆ ಬೇಡುತ್ತಾ ಬರುವ ಈ ಮುದುಕಿಯನ್ನು ಬಸ್ಸಿನಲ್ಲಿ  ಯಾರು ಗಮನಿಸಿಯೂ, ಗಮನಿಸದಂತೆ ನಟನೆ ಮಾಡುತ್ತಿರಬೇಕಾದರೆ; ಹರೆಯದ ಭಿಕ್ಷುಕಿಯೊಬ್ಬಳು ಬಸ್ಸಿನಿಂದ ಇಳಿದು 20 ರೂಪಾಯಿ ಗಳನ್ನು ಆ ಮುದುಕಿಗೆ ನೀಡಿ, ಭಿಕ್ಷುಕರಿಗೆ ಭಿಕ್ಷುಕರೇ ಸಾಥ್ ನೀಡುತ್ತಾರೆ ಮತ್ತು ನೋವನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂಬ ಗುಟ್ಟನ್ನು ಬಿಡಿಸಿದಳು.
ಭಿಕ್ಷುಕರಲ್ಲೂ ಯಾರಿಗೆ ಭಿಕ್ಷೆ ನೀಡಬಹುದು ಎಂದು ನೋಡಿಕೊಂಡು, ಕನಿಷ್ಠಪಕ್ಷ ಈ ಮುದುಕಿಯಂತವರಿಗೆ ಸಹಾಯ ಮಾಡಬಹುದು. ಗಟ್ಟಿ ಮುಟ್ಟಾದ ಶರೀರವನ್ನು ಹೊಂದಿ, ಮೈ ಬಗ್ಗಿಸಿ ದುಡಿಯಲು ಸೋಮಾರಿತನ ತೋರುವವರ  ಕೈಯಲ್ಲಿ ತೋಟದ ಹುಲ್ಲನ್ನು ಕೀಳಿಸುವುದರಲ್ಲಿ ತಪ್ಪಿಲ್ಲ.
ನಾವು ಸದಾ ಸರ್ದಾರ್ಜೀ ಗಳನ್ನು ಹಾಸ್ಯಕ್ಕೆ ಉಪಯೋಗಿಸುವುದರ ಬದಲು, ಅವರು ಯಾವತ್ತೂ ಭಿಕ್ಷೆ ಎತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಿಲ್ಲ ಎಂಬುದನ್ನು ಅರಿಯಬೇಕು.
                                                                ಕೆ.ಪಿ. ಭಟ್  
'ಪವರ್' ಪಾವತಿ 
ಸದಾ  ಗಿಜಿಗುಡುತ್ತಿರುವ, ನೂಕಿ ನೂಕಿ ನಾನೊಬ್ಬನೇ ಎಲ್ಲರಿಗಿಂತ ಜಾಕಿ ಎಂದು ತನ್ನನ್ನೇ ತಾನು ಅಂದುಕೊಂಡು ಎಲ್ಲರನ್ನೂ ಹಿಂದಿಕ್ಕಿ ಎಲ್ಲೆಲ್ಲೋ ನುಸುಳಿ ಸರಧಿಯ ಒಳಸುಳಿಯನ್ನು ಅರ್ಥೈಸಿ, ಕಷ್ಟ ಪಟ್ಟು ಮೊದಲನೆಯವನಾಗಿ ನಿಲ್ಲುವ, ಕಾದು ಕಾದು ಸಾಕಾಗಿ ಬೇಸತ್ತು ಬೆವರಿಳಿಸಿ ಬಸವಳಿದು ರೋಸಿ ಹೋಗಿ ಕೆಲಸ ಸಾಧಿಸದೆ ಮನೆಗೆ ಮುನ್ನುಗ್ಗುವ ದೃಶ್ಯಗಳು ಕರೆಂಟ್ ಬಿಲ್ ಪಾವತಿಯ ಸಮಯದಲ್ಲಿ ಮಾಮೂಲು. ಇದರೊಂದಿಗೆ ವ್ಯವಸ್ಥೆಯನ್ನು ದೂರುವುದು ಅದಕ್ಕಿಂತ ಮಾಮೂಲು.
ಆದರೆ ಈಗ, ಇಂತಹ ಸಮಸ್ಯೆಗೆ ಉತ್ತರವೆಂಬಂತೆ ಮೆಸ್ಕಾಂ ಹೊಸ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದ್ದಾರೆ. 24/7 ವಿದ್ಯುತ್ ಬಿಲ್ ಪಾವತಿಯ ಪರಿವಿಡಿಯನ್ನು ಹೊರಡಿಸಿದ್ದಾರೆ. ಏನೀ ಟೈಮ್ ಪೇಮೆಂಟ್ ಸೌಲಭ್ಯವನ್ನು ಸಂಸ್ಥೆ; ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಚಿಕ್ಕಮಗಳೂರು, ಕಡೂರು  ಕ್ಷೇತ್ರಗಳಲ್ಲಿ ಜಾರಿಗೊಳಿಸಿದೆ.
ಏನೀ ಟೈಮ್ ಹೋಗಿ ಹಣ ಡ್ರಾ ಮಾಡುವಂತೆ, ಈಗ ಹಣ ಪಾವತಿ ಮಾಡಬಹುದು. ಕರೆಂಟ್ ಬಿಲ್ ಮೊತ್ತವನ್ನು Round figure ಮಾಡಿ ಕಂಪ್ಯೂಟರೀಕೃತ ಯಂತ್ರದ ಮೂಲಕ ಬಿಲ್ ಪಾವತಿ ಮಾಡಿದರೆ ಖೇಲ್ ಖತಂ. ಇಷ್ಟು ದಿನ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರಿಗೆ ಇದೊಂದು   ಸಂತಸದ ಸುದ್ದಿ. 
ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಮೆಸ್ಕಾಂ ಹಾಗೂ ಇದರ ಆಡಳಿತ ನಿರ್ದೇಶಕ ಎಸ್. ಸುಮಂತ್ ಅವರಿಗೂ Hats off...
                                                                -ಡಾ.ಶ್ರೇ. 

Tuesday, January 18, 2011

 'ಬೈ-ಪಾಸ್ ಸರ್ಜರಿ ಅಗತ್ಯ' 
ಮೈಸೂರು-ಮಾಣಿ ರಾಜ್ಯ ಹೆದ್ದಾರಿಯ ವಿಸ್ತರಣಾ ಕಾರ್ಯ ಕೆಲ ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಈ ಕಾಮಗಾರಿಯು ಅವ್ಯವಸ್ಥೆಯ ಆಗರವಾಗಿದೆ. 
ಪುತ್ತೂರು ಬೈ-ಪಾಸ್ ಮೂಲಕ ಹಾದು ಹೋಗುವ ಈ ರಸ್ತೆಯ ಕಾಮಗಾರಿ ನಡೆಯುತ್ತಿರುವ  ಸ್ಥಳಗಳಲ್ಲಿ, ಕೆಲವೆಡೆ ಎಚ್ಚರಿಕೆಯ ಫಲಕಗಳು ಇದ್ದರೆ,ಇನ್ನೂ ಕೆಲವೆಡೆ ಇದು ಮಾಯವಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಹಾದು ಹೋಗುವ ಇಲ್ಲಿ ಸೂಚನಾ ಫಲಕಗಳನ್ನು ಸರಿಯಾಗಿ ಅಳವಡಿಸದೆ ಇರುವುದು ಕಾಮಗಾರಿಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. 
ಇಲ್ಲಿ ರಾತ್ರಿ ಹೊತ್ತು ಸಂಚರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ತಪ್ಪಿದಲ್ಲಿ 3 ಅಡಿ ಆಳದ ಗುಂಡಿಗೆ ಬೀಳುವುದರಲ್ಲಿ ಸಂಶಯವಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಸಂಭವನೀಯ ಅಪಾಯವನ್ನು ತಪ್ಪಿಸಬಹುದು.
                                                                    -ಪ್ರತಿನಿಧಿ  
ರಸ್ತೆ ಪುರಾಣ!!! 
ಇತ್ತೀಚಿಗೆ ಹಿಂದಿಯಲ್ಲಿ ತೆರೆ ಕಂಡ ಅಂಜಾನ-ಅಂಜಾನಿ ಚಿತ್ರದ ಪದ್ಯದ ದ್ರಶ್ಯ ಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ, ಅದರ ಪದ್ಯ ಒಂದರಲ್ಲಿ ನಾಯಕ ರಣಬೀರ್ ಮತ್ತು ನಾಯಕಿ ಪ್ರಿಯಾಂಕ , ಅಮೇರಿಕಾದ ತೀರಾ ಹಳ್ಳಿಯೊಂದರಲ್ಲಿ ಕಾರಿನಲ್ಲಿ ಹೋಗುವ ದೃಶ್ಯವಿದೆ; ಸುತ್ತ ಮುತ್ತ ಬರೇ ಬೆಟ್ಟ ಗುಡ್ಡಗಳೇ ತುಂಬಿರುವ ಆ ಹಳ್ಳಿಯ ರಸ್ತೆಯನ್ನು ಒಮ್ಮೆ ಸರಿಯಾಗಿ ಗಮನಿಸಿ, ಸತ್ಯ ಹೇಳುತ್ತೇನೆ ನಮ್ಮ ದೇಶದ ಮಹಾ ನಗರಗಳಲ್ಲೇ ಅಷ್ಟು ಚಂದದ ರಸ್ತೆ ಕಾಣುವುದಿಲ್ಲ. ನಮ್ಮ ದೇಶಕ್ಕೆ ಯಾಕೆ ಈ ದುರವಸ್ಥೆ ? ನಮ್ಮ ದೇಶದ ರಸ್ತೆಗಳು ಯಾಕೆ ಈ ರೀತಿ ಇದೆ? ನಮ್ಮ ರಸ್ತೆಗಳಲ್ಲಿ ಮನುಷ್ಯರು ಹೋಗುವ ಬದಲಾಗಿ ಹೆಣ ಸಾಗಿಸುವುದೇ ಉತ್ತಮ.
ಹಳ್ಳಿಗಳನ್ನು ಬಿಡಿ, ದೇಶದ,ರಾಜ್ಯದ ಪ್ರಮುಖ ನಗರಗಳನ್ನು ಸೇರಿಸುವ ಹೆದ್ದಾರಿಗಳೇ ತೂತು ಬಿದ್ದು ಹೋಗಿದೆ. ನಮ್ಮಲ್ಲಿ ರಸ್ತೆ ಮಾಡುವುದೇ ಕಷ್ಟದಲ್ಲಿ, ಹೇಗೋ ರಸ್ತೆಯೊಂದು ರೆಡಿಯಾಯಿತು ಎಂದಿಟ್ಟುಕೊಳ್ಳಿ ಆಗ ಶುರುವಾಗುತ್ತದೆ, ರಸ್ತೆಯನ್ನು ಅಗೆದು ಕೇಬಲ್ ಅಳವಡಿಸುವವರು, ಹೆಣ ಭಾರದ  ಲೋಡ್ ಗಳನ್ನು ಹೊತ್ತುಕೊಂಡು ಸಾಗುವ ಲಾರಿಗಳು ಒಟ್ಟಿನಲ್ಲಿ ಇಡೀ ರಸ್ತೆಯನ್ನು ಕುಲಗೆಡಿಸಿ ಬಿಡುತ್ತಾರೆ. ಇದರ ಜೊತೆಗೆ ಕಳಪೆ ಕಾಮಗಾರಿಗಳಲ್ಲಿ ಬೇಕಾ ಬಿಟ್ಟಿ ರಸ್ತೆ ನಿರ್ಮಿಸುತ್ತಾರೆ . ಇಂತಹ ರಸ್ತೆಗಳು ನಿರ್ಮಾಣವಾದ ಮರುದಿನದಿಂದಲೇ ಹಾವು ಪೊರೆ ಬಿಟ್ಟಂತೆ ತನ್ನ ಒಡಲಲ್ಲಿ ಇರುವ  ಡಾಂಬರು ಮತ್ತು ಜಲ್ಲಿಗಳನ್ನು ಹೊರಕಕ್ಕುತ್ತವೆ. ನಮ್ಮ ದೇಶದ ರಸ್ತೆಗಳು ಉದ್ಧಾರವಾಗಲು ಸಾಧ್ಯವಿಲ್ಲವೇ? 
ಹಾಗೇ ಸುಮ್ಮನೆ- ಭಾರತೀಯ ರಸ್ತೆಗಳ ಬಗ್ಗೆ ಉಮೆಶನಲ್ಲಿ ಕೇಳಿದಾಗ ಆತನ ಕಣ್ಣಲ್ಲಿ ನೀರು ಬಂತು. ಸರಿಯಾಗಿ ವಿಚಾರಿಸಿದಾಗ ತಿಳಿಯಿತು ಉಮೇಶನ ತಂದೆ ಇಂತದೆ ಕುಲಗೆಟ್ಟ ರಸ್ತೆಯೊಂದರಲ್ಲಿ ಪ್ರಯಾಣಿಸುತ್ತಿರುವಾಗ, ಕುಲುಕಾಡಿ ಕುಲುಕಾಡಿ ಕಿಡ್ನಿ ಹೊರ ಬಿದ್ದು ಸತ್ತದ್ದಂತೆ.
                                      ಡಾ.ಶೆಟ್ಟಿ