Monday, January 17, 2011

ಮಲಗಿದ್ದವರಿಗೆಲ್ಲ ಮೊನ್ನೆ ಕಾದಿತ್ತೊಂದು ಮಹೋನ್ನತ ಶಾಕಿಂಗ್ ನ್ಯೂಸ್ 
ಯಾವತ್ತಿನಂತೆ ಬೈದುಕೊಂಡು ಟಿ.ವಿ ಆಫ್ ಮಾಡಿ ಮತ್ತೆ ತೀಟೆ ತೀರುವವರೆಗೆ ಉಗಿದು, ನಂತರ ಉಂಡು, ಅದಾದ ಮೇಲೆ ಶಪಿಸಿ, ಟಿ.ವಿ ಆನ್ ಮಾಡಲು ಮನಸ್ಸಾಗದೆ ಗುಡಿ ಹೊದ್ದುಕೊಂಡು ಮಲಗಿ ಬಿಟ್ಟಿದ್ದರು.
ಮರುದಿನ ಎದ್ದು ಟೀ ಹೀರುತ್ತಾ, ಟಿ.ವಿ ಆನ್ ಮಾಡಿದಾಗ 'ಅಮೋಘ ಶಾಕಿಂಗ್ ನ್ಯೂಸ್': 'ಭಾರತ ದಕ್ಷಿಣ ಆಫ್ರಿಕಾ ವಿರುದ್ದದ ಕ್ರಿಕೆಟ್ ಪಂದ್ಯಾಟದಲ್ಲಿ  ೧ ರನ್ನಿನ ರೋಚಕ ಗೆಲುವು ದಾಖಲಿಸಿದೆ'. ನಿನ್ನೆ ರಾತ್ರಿ ತಾರಾಮಾರ ಉಗಿದಿದ್ದವರು ಮತ್ತೆ  ಹೊಗಳಲು ಆರಂಭಿಸಿದರು. ಭಾರತ ಪಂದ್ಯ ಗೆದ್ದದು ಮೆಚ್ಚತಕ್ಕ ವಿಚಾರವೆ. ಸಂಪೂರ್ಣ ಒಂದೇ ಕಡೆ ವಾಲಿದ್ದ ವಿಜಯಲಕ್ಷ್ಮಿಯನ್ನು ತಮ್ಮ ಕಡೆ ಒಲಿಸಿ ಗೆಲುವು ದಾಖಲಿಸಿದ ತಂಡದ  ಸಾಧನೆಗೆ  Hearty congrats.Hard work makes one to achieve  ಅನ್ನೋದಕ್ಕೆ,  ಪ್ರಸ್ತುತ ಭಾರತದ ಕ್ರಿಕೆಟ್ ತಂಡವೇ ಸಾಕ್ಷಿ. 
ಪ್ರೇಕ್ಷಕರಾಗಿ ನಾವು ಮಾತ್ರ; ದೇಶ ಗೆದ್ದಾಗ ಹೊಗಳಿ, ಸೋತಾಗ ತೆಗಳಿ 'ಮಲಗುತ್ತೇವೆ' ನಾವು ಮಲಗಿಯೇ ಇರುತ್ತೇವೆ. ಎದ್ದಿರುವ ಕೆಲವರು ಮಾತ್ರ ಸೋಲಿಗೂ ಉತ್ತರಿಸದೆ ಗೆಲುವಿಗೂ ಉತ್ತರಿಸದೆ ಸುದ್ದಿ ಅರಿತು ತಮ್ಮ ಕಾರ್ಯದಲ್ಲಿ ಮಗ್ನರಾಗಿಬಿಡುತ್ತಾರೆ.
                                                                               -ಡಾ.ಶ್ರೇ.

No comments:

Post a Comment