Wednesday, January 19, 2011

ಶಿವಪ್ಪ ಕಾಯೋ ತಂದೆ... 
ಉಟ್ಟ ಸೀರೆಯಲ್ಲಿ ಹಲವೆಡೆ ಚಿಂದಿಯಾಗಿ, ಶರೀರ ನಿಷ್ಕ್ರೀಯವಾಗಿ, ಕಣ್ಣಲ್ಲಿ ಯಾರನ್ನೋ ಹುಡುಕುತ್ತಾ, ಎರಡು ಕೈಗಳಲ್ಲೂ ಊರುಗೋಲನ್ನು ಹಿಡಿದು, ಮುದುಕಿಯೊಬ್ಬಳು ಭಿಕ್ಷಾಟನೆಯಲ್ಲಿ  ತೊಡಗಿದ್ದಳು.
ಭಿಕ್ಷೆ ಬೇಡುವವರನ್ನು ನಾನು ಅಲ್ಲಿ ಇಲ್ಲಿ ನೋಡುತ್ತಾ ಇರುತ್ತೇನೆ. ಆದರೆ ಮಂಗಳೂರಿನ, ಕೊಟ್ಟಾರಚೌಕಿಯ ಬಳಿಯಲ್ಲಿ, ಮೇಲೆ ಹೇಳಿದ ಮುದುಕಿಯನ್ನು ಕಂಡು ಅಳುತ್ತಿದ್ದ ಇನ್ನೊಂದು ಹರೆಯದ ಭಿಕ್ಷುಕಿಯನ್ನು ಕಂಡೆ. ಸಿಟಿ ಬಸ್ ಗಳಿಗೆ ಭಿಕ್ಷೆ ಬೇಡುತ್ತಾ ಬರುವ ಈ ಮುದುಕಿಯನ್ನು ಬಸ್ಸಿನಲ್ಲಿ  ಯಾರು ಗಮನಿಸಿಯೂ, ಗಮನಿಸದಂತೆ ನಟನೆ ಮಾಡುತ್ತಿರಬೇಕಾದರೆ; ಹರೆಯದ ಭಿಕ್ಷುಕಿಯೊಬ್ಬಳು ಬಸ್ಸಿನಿಂದ ಇಳಿದು 20 ರೂಪಾಯಿ ಗಳನ್ನು ಆ ಮುದುಕಿಗೆ ನೀಡಿ, ಭಿಕ್ಷುಕರಿಗೆ ಭಿಕ್ಷುಕರೇ ಸಾಥ್ ನೀಡುತ್ತಾರೆ ಮತ್ತು ನೋವನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂಬ ಗುಟ್ಟನ್ನು ಬಿಡಿಸಿದಳು.
ಭಿಕ್ಷುಕರಲ್ಲೂ ಯಾರಿಗೆ ಭಿಕ್ಷೆ ನೀಡಬಹುದು ಎಂದು ನೋಡಿಕೊಂಡು, ಕನಿಷ್ಠಪಕ್ಷ ಈ ಮುದುಕಿಯಂತವರಿಗೆ ಸಹಾಯ ಮಾಡಬಹುದು. ಗಟ್ಟಿ ಮುಟ್ಟಾದ ಶರೀರವನ್ನು ಹೊಂದಿ, ಮೈ ಬಗ್ಗಿಸಿ ದುಡಿಯಲು ಸೋಮಾರಿತನ ತೋರುವವರ  ಕೈಯಲ್ಲಿ ತೋಟದ ಹುಲ್ಲನ್ನು ಕೀಳಿಸುವುದರಲ್ಲಿ ತಪ್ಪಿಲ್ಲ.
ನಾವು ಸದಾ ಸರ್ದಾರ್ಜೀ ಗಳನ್ನು ಹಾಸ್ಯಕ್ಕೆ ಉಪಯೋಗಿಸುವುದರ ಬದಲು, ಅವರು ಯಾವತ್ತೂ ಭಿಕ್ಷೆ ಎತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಿಲ್ಲ ಎಂಬುದನ್ನು ಅರಿಯಬೇಕು.
                                                                ಕೆ.ಪಿ. ಭಟ್  

No comments:

Post a Comment