Sunday, January 9, 2011

ಮತ್ತೆ ಬಾ 'ಶಂಕರ'...
ನೆಲದಿಂದ 60 ಅಡಿ ಎತ್ತರದಲ್ಲಿ ಹಾರುತ್ತಿರುವ ವಿಲನ್, ಆತನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ಹೀರೋ. ಬಾಲಿನಂತೆ ಹಾರುತ್ತಿರುವ ವಿಲನ್, ತನ್ನ ಕೈಯನ್ನು ತಿರುತಿರುಗಿಸಿ ಹೊಡೆಯುತ್ತಿರುವ ಹೀರೋ. ತನಗೆ ಕುತ್ತಿದ ಸರಳು ಬೆನ್ನಿನ ಮೂಲಕ ಹೊರಬಂದಿದ್ದರು ಅದೇ ಸರಳನ್ನು ವೈರಿಗೆ ಹಾಕುವ ಅದೇ ಹೀರೋ, ಏನಿದು ಅರ್ಥವಾಗುತಿಲ್ಲವಲ್ಲ ಎಂದು ಅಂದುಕೊಂಡಿರ? ಒಂದು ನಿಮಿಷ ಇತ್ತೀಚಿನ  ಕನ್ನಡ ಚಲನಚಿತ್ರದ ಫೈಟಿಂಗ್ ದೃಶ್ಯಗಳನ್ನು ನೆನಪಿಸಿಕೊಳ್ಳಿ,ನಿಮಗೆ ಮೇಲೆ ಹೇಳಿದ ಎಲ್ಲಾ ಅಸಂಬದ್ಧಗಳು ಕಾಣಸಿಗುತ್ತದೆ.
ಕನ್ನಡ ಚಲನಚಿತ್ರಗಳು ಯಾಕೆ ಹೀಗೆ? ನಮ್ಮ ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ ಕಾಣುವುದು, ಹಿಂಸೆಯ ವೈಭವೀಕರಣ, ನಗೆಯೇ ಬಾರದ ಕಾಮಿಡಿಗಳು,ಜೊತೆಗೆ ಅರ್ಥವಿಲ್ಲದ ಕಥೆಗಳು. ಇವು ಕನ್ನಡಚಿತ್ರಗಳನ್ನು ಹರಿದು ಮುಕ್ಕಿ ತಿನ್ನುತ್ತಿವೆ.
ಇತ್ತೀಚಿನ ಕನ್ನಡ ಚಿತ್ರಗಳ ನಿಜವಾದ ವಿಲನ್ ಗಳೆಂದರೆ  ಇತರ ಭಾಷೆಗಳಿಂದ ಯಾವುದನ್ನು ರೀಮೇಕ್ ಮಾಡಬೇಕು ಎಂಬ ಪರಿಜ್ಞಾನವೇ ಇಲ್ಲದ ನಿರ್ದೇಶಕರು , ಸ್ವಂತ ಆಲೋಚನೆ ಮಾಡದೆ, ತಮಿಳಿನಿಂದ ಕಾಮಿಡಿಗಳನ್ನು ಕದಿಯುವ ಕಾಮಿಡಿಯನ್ನರು, ಕೆಟ್ಟ ಸಾಹಿತ್ಯದ ಹಾಡುಗಳೇ ಆಗಿದೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಇಡೀ ದೇಶದ ಗಮನ ಸೆಳೆದಿತ್ತು, ನಮ್ಮ ಶಂಕರ್ ನಾಗ್ ಅವರ ಆಕ್ಸಿಡೆಂಟ್, ಮಿಂಚಿನ ಓಟ, ಒಂದು ಮುತ್ತಿನ ಕಥೆ ಮುಂತಾದ ಚಿತ್ರಗಳು ಯಾವ ಹಾಲಿವುಡ್ ಚಿತ್ರಗಳಿಗೂ ಕಡಿಮೆಯಿಲ್ಲ. ತೀರಾ ಕುಲಗೆಟ್ಟು ಹೋಗಿರುವ ಕನ್ನಡ ಚಿತ್ರರಂಗವನ್ನು ಪಾರುಮಾಡಲು ಶಂಕರ್ ನಾಗ್ ಅವರೆ ಪುನಃ  ಜನ್ಮ ಪಡೆದು ಬರಬೇಕಾಗಿದೆ. ಇದು ೬ ಕೋಟಿ ಕನ್ನಡಿಗರ ಹಂಬಲವಾಗಿದೆ.
ಹಾಗೇ ಸುಮ್ಮನೆ - ಕನ್ನಡ ಚಿತ್ರರಂಗದ ಈಗಿನ ಅವಸ್ಥೆಯನ್ನು ಕಂಡ ನಮ್ಮ ಉಮೇಶ,ತಮಿಳು ನಾಡಿಗೆ ವಲಸೆಹೊಗಬೇಕು ಎನ್ನುತಿದ್ದಾನಂತೆ. ಕನ್ನಡ ನಟರಿಗಿಂತ, ತಮಿಳಿನ ಧಾರಾವಾಹಿಯ ನಟರೆ ಚೆನ್ನಾಗಿ ನಟಿಸುತ್ತಾರೆ ಎನ್ನುವುದು ಆತನ ಗಂಭೀರ ಆರೋಪ.
                                                                 ಡಾ. ಶೆಟ್ಟಿ 

2 comments: