Monday, January 10, 2011

ಚಳಿ ಚಳಿ ಸಹಿಸೆವು ಈ ಚಳಿಯ!
ತೀವ್ರ ಚಳಿಯಿಂದ ಮತ್ತೆ 13 ಜನರ ಬಲಿ,ಈ ಮೂಲಕ ಉತ್ತರ ಪ್ರದೇಶ ರಾಜ್ಯ ಒಂದರಲ್ಲೇ ಚಳಿಗೆ ಬಲಿಯಾದವರ ಸಂಖ್ಯೆ 81 . ಇನ್ನೂ ದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಮೊದಲಾದ ರಾಜ್ಯಗಳಲ್ಲಿ ಸತ್ತವರ ಸಂಖ್ಯೆ ಎಷ್ಟೋ ? ಲೆಕ್ಕವಿಟ್ಟವರಾರು?  ಇದು ದೇಶದ ಗಂಭೀರ ಸಮಸ್ಯೆಯಲ್ಲವೇ? ಕೇವಲ ಬಹುಕೋಟಿ ಹಗರಣಗಳನ್ನು ಮಾತ್ರ ಹೈ ಲೈಟ್ ಮಾಡಿ ತೋರಿಸುವ ರಾಜಕಾರಣಿಗಳು,ಮಾಧ್ಯಮಗಳಿಗೆ ಇದೊಂದು ದೇಶದ ಸಮಸ್ಯೆ ಎಂದು ಅನಿಸುತಿಲ್ಲವೇ? 
ಬೆಚ್ಚಗಿನ ಫ್ಲ್ಯಾಟ್ ಗಳಲ್ಲಿ , ಬಂಗಲೆಯಂತಹ ಮನೆಗಳಲ್ಲಿ ದಪ್ಪದ ಕಂಬಳಿ ಹೊದ್ದುಕೊಂಡು ಮಲಗುವ ರಾಜಕಾರಣಿಗಳಿಗೆ, ಬುದ್ದಿಜೀವಿಗಳಿಗೆ, ಶೀಮಂತರಿಗೆ ಇದೊಂದು ಸಮಸ್ಯೆ ಎಂದು ಅರ್ಥವಾಗುವುದಾದರು ಹೇಗೆ? 
ಚಳಿಯ ಸಮಸ್ಯೆ ಹೆಚ್ಚಾಗಿ ಬೀದಿ ಬದಿಯಲ್ಲಿ ಮಲಗುವವರು, ಗುಡಿಸಲಿನಲ್ಲಿ ವಾಸಿಸುವವರು, ಸ್ಲಂ ಗಳಲ್ಲಿ  ಕಷ್ಟಪದುವವರನ್ನು ಭಾದಿಸುತ್ತಿದೆ. ಚಳಿಯಿಂದ ರಕ್ಷಣೆ ಪಡೆಯಲು ಅವರ ಬಳಿ ಕನಿಷ್ಠ ಅಗತ್ಯವಾದ ಕಂಬಳಿಯೇ ಇರುವುದಿಲ್ಲ. ಕೂಲಿ ಕೆಲಸ ಮಾಡುವ ಬಡವರಿಗೆ ಎರಡು ಹೊತ್ತಿನ ಊಟ ಸಿಗುವುದೇ ಕಷ್ಟ. ಅಂತಹದರಲ್ಲಿ, ಕಂಬಳಿ ಎಲ್ಲಿಂದ ಬರಬೇಕು? 
ಉತ್ತರ ಪ್ರದೇಶ ರಾಜ್ಯದಲ್ಲಿ ಚಳಿಯಿಂದ ಜನ ಸಾಯುತ್ತಿದ್ದರೆ ಮುಖ್ಯ ಮಂತ್ರಿ ಮಾಯಾವತಿ ಸಿಕ್ಕ ಸಿಕ್ಕಲ್ಲಿ ಪ್ರತಿಮೆ ಸ್ಥಾಪಿಸಿಕೊಂಡು, ಬಡವರ ಕಷ್ಟ ನಿವಾರಣೆ ಮಾಡುವ ಪೋಸು ನೀಡುತ್ತಿದ್ದಾರೆ.
ಹಾಗೇ ಸುಮ್ಮನೆ- ಉತ್ತರ ಭಾರತದಲ್ಲಿ ಚಳಿಯಿಂದ ಜನ ಸಾಯುತ್ತಿರುವುದಕ್ಕೆ ಯಡಿಯೂರಪ್ಪನವರೇ  ಕಾರಣ, ಆದ್ದರಿಂದ ಅವರು ರಾಜೀನಾಮೆ ನೀಡಬೇಕೆಂದು ಕುಮಾರಣ್ಣ ಒತ್ತಾಯಿಸುತ್ತಿದ್ದಾರಂತೆ.ಇದನ್ನು ಕೇಳಿದ ನಮ್ಮ ಉಮೇಶ ಇವರನ್ನು ಹೀಗೆ ಬಿಟ್ಟರೆ ಟೈಟಾನಿಕ್ ಮುಳುಗಲು ಕೂಡಾ ಯಡಿಯೂರಪ್ಪನವರೇ ಕಾರಣ ಎಂದರೂ ಅತಿಶಯೋಕ್ತಿಯಲ್ಲ ಎಂದು ಗೊಣಗಿಕೊಂಡನಂತೆ!
                                                                                  ಡಾ. ಶೆಟ್ಟಿ 

1 comment: