Wednesday, January 12, 2011

ಸ್ವಾಮೀ ವಿವೇಕಾನಂದ 
The greatest sin of your life is to think yourself weak, strength is life weakness is death, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ಅಬಬ್ಬ ! ಅದೆಂತ ಮೈ ನವಿರೇಳಿಸುವ, ಮನಸ್ಸನ್ನು ಹೊಸ ಚಿಂತನೆಗೆ ಎಡೆ ಮಾಡುವ, ಹ್ರದಯದಾಳದ ಕೋಣೆಯಲ್ಲಿ ಆರದ ಬೆಳಕನ್ನು ಹೊತ್ತಿಸುವ, ಜ್ಞಾನ ಭಂಡಾರದ ಕಿಚ್ಚನ್ನು ಹಚ್ಚಿಸುವ ಮಾತುಗಳು? 
ಈ ಎಲ್ಲಾ ಮಾತುಗಳ ಹಿಂದಿರುವ 'ಮೌನ'ವೇ, ಉಕ್ಕಿನಂತಹ ಚಿಂತನೆಗಳುಳ್ಳ, ಸದಾ ಹೊಸ ಯುಗದತ್ತವೇ  ದ್ರಿಷ್ಟಿ ನೆಟ್ಟಿರುವ, ಪೂರ್ತಿ ವಿಶ್ವದ ಜ್ಞಾನ  ಭಂಡಾರದ ಸಂಕೇತವಾಗಿರುವ, None other than  ಸ್ವಾಮೀ ವಿವೇಕಾನಂದರು. 
ಇವರು ಸದಾ ಹೀಗೆಯೇ. ಊರಗಲ ಬರೆಯುವ ಜ್ಞಾನವನ್ನು ಕೇವಲ ಒಂದೇ ಮಾತಿನಲ್ಲಿ ಹೇಳಿ ಮುಗಿಸುವ ಚತುರ. ಭಾರತ ದೇಶ ಏನು, ಎತ್ತ, ಹೇಗೆ, ಎಂಬುವುದನ್ನು ಇಡೀ ವಿಶ್ವಕ್ಕೆ ಸಾರಿದ ಏಕೈಕ ವ್ಯಕ್ತಿ. ನಿಜವಾದ ಹಿಂದೂ ಎಂದರೆ ಯಾರು ಮತ್ತು ಹೇಗಿರುತ್ತಾನೆ ಎಂಬುವುದನ್ನು ಕೂಲಂಕುಶವಾಗಿ ಪರಿಪರಿಯಾಗಿ, ಬಿಡಿಬಿಡಿಯಾಗಿ, ಎಲ್ಲಾ ಅನ್ಯ ಧರ್ಮೀಯರಿಗೆ ಹಾಗು ಅರ್ಥವಾಗದೆ ಇದ್ದ ಸ್ವಧರ್ಮೀಯರಿಗೆ ಬಿಡಿಸಿ ಅರ್ಥಿಸಿದ್ದಾರೆ. 
ಅವರ ಮಾತಿನ ದಾಟಿ, ನಡೆಯುವ ವೇಗ, ನೋಡುವ ನೋಟ, ಮೌನದ ತೀಕ್ಷ್ಣತೆ, ಜ್ಞಾನದ ಒರತೆ ಹಾಗು ದಾಹ, ಕಡೆಗಣಿಸಿದ ಮೋಹ, ಇನ್ನೂ ಹೇಳಲಾಗದ ಏನೇನೋ ಇವೆಲ್ಲವೂ ಇಂದಿನ ನವಯುಗದ ನವಯುವಕರಿಗೆ ಮತ್ತು ಮುಂದೆ, ಅನಂತತೆಯವರೆಗೆ ಬರುವ ಎಲ್ಲಾ ಮಕ್ಕಳಿಂದ ಮುದುಕರವರೆಗೆ ನಿಲ್ಲುವ ಸಾರ್ವಕಾಲಿಕ ಆದರ್ಶ.
ನಿನ್ನೆ ಅವರು ಹುಟ್ಟಿದ ದಿನ, ಅದೆಷ್ಟೋ ಮಂದಿ, ನಿನ್ನೆ  ಆಚರಣೆಯಲ್ಲಿ ನಿರತರಾಗಿರ ಬಹುದು,  ಇವರೆಲ್ಲರಿಗೂ ಒಂದು ಕಿವಿ ಮಾತು, ಆಚರಣೆ ತಪ್ಪಲ್ಲ, ಮಾಡಲೇ ಬೇಕು. ಆದರೆ, ಒಂದು ದಿನ ಆಚರಣೆ ಮಾಡಿ ಮತ್ತೆ ಸಂಪೂರ್ಣವಾಗಿ ವಿವೇಕಾನಂದರನ್ನು ಮರೆತರೆ, ನಿಮ್ಮಲ್ಲಿ ಕಿಂಚಿತ್ತೂ ವಿವೇಕ ಇಲ್ಲ ಎಂಬುವುದು ಅರಿವಾಗುತ್ತದೆ. ಅವರು ಆಡಿದ ಮಾತು ಮತ್ತು ಅವರ ಬದುಕು ಇದನ್ನು ಅಧ್ಯಯಿಸಿ ನಡೆದರೆ ಭಾರತೀಯರು ಯಾರೂ ಕಂಡರಿಯದಂತೆ, ಕೇಳರಿಯದಂತೆ ನವ ಮನುಷ್ಯನಾಗಿ ಬದಲಾಗುವುದಂತು ಸೂರ್ಯ ಚಂದ್ರ ಇರುವಷ್ಟರ ಮಟ್ಟಿಗೆ ಸತ್ಯ. 
                                                                -ಡಾ.ಶ್ರೇ 

3 comments:

  1. bhaaratha dhesha shakthi saamarthyadhindhalla.. sneha, vinaya, viveka mathu aathma shakthiyindhale mele baruthadhe..endhu saamaanyarigu manadhattaguwanthe heliruwa.. swaami vivikanandarannu matthu awara mowlyabharitha maathugalannu moolegittu..
    "VIVEKANADA" endu awara hesarannashte balasi.. avivekathana pradharshana nadeyuthiruwudu namma raamarajyawaagabekiddha bharathakhandakke ondhu 'DRAWBACK'

    ReplyDelete
  2. good one bro..:-) im one of dam fan of vivekananda...:-)

    ReplyDelete
  3. huduga karect heeliddane gripp untu idakke.

    ReplyDelete