Friday, January 7, 2011

                                 ನರಕ ಯಾತನೆ 
ಸುತ್ತ ಮೋಡ ಮುಸುಕಿದ ಛಾಯೆ, ನಡುವೆ ಸ್ಮಶಾನದಂತ ವಾತಾವರಣ. ಬಾಗಿಲ ಬಳಿ ಎರಡು ಪರಿಚಯದ ಮುಖಗಳು ಕೈಯಲ್ಲಿ ಭರ್ಜಿ  ಹಿಡಿದು ತೆಲುಗು ಭಾಷೆ ನುಡಿಯುತಿದ್ದರು. ಸಿಡುಕು ಮುಖದ ಮುದುಕನೋರ್ವ ಆನೆ ಗಾತ್ರದ ಕೋಣವನ್ನು ಸ್ನಾನ ಮಾಡಿಸುವ ತವಕದಲ್ಲಿ ಹಗ್ಗದಲ್ಲಿ ಎಳೆಯುತ್ತಾ ಪಕ್ಕದಲ್ಲಿ ಇದ್ದ ಖಾಲಿ ನಿವೇಶನ notify ಆಗಿದೆಯೇ ಎಂದು ನೋಡುತಿದ್ದ. ಸೊಂಟದಲ್ಲಿ ಕೊಡವನ್ನು ಹಿಡಿದು ಶೋಭಾ ಇತ್ತ ಕಡೆ ಬರುತ್ತಿದ್ದಳು.
ಕೆಂಡದ ರಾಶಿಯನ್ನು ಒಲೆಯಿಂದ ಖಾಲಿ ಮಾಡುತಿದ್ದ ಕುಮಾರ  ತನ್ನ ನೋಟವನ್ನು, ತಂದೆ ಕ್ಷೀಣ ಮುದುಕನಲ್ಲಿ ಬೀರಿದ, ಬಲುದಿನಗಳಿಂದ ರಾಗಿಮುದ್ದೆ ತಿನ್ನದ ಈ  ಮುದುಕ ಮೂಗಿನಮೇಲೆ ಕೈ ಇಟ್ಟು ಪಕ್ಕದ ಒಲೆಯಿಂದ ಬೂದಿಯನ್ನು ಹೊರಗಡೆ ಎಳೆಯುತಿದ್ದ.
ಧರ್ಮ,ಸಿದ್ದ,ಉಗ್ರ ಮೊದಲಾದವರು ದೂರದಿಂದ ಹೊತ್ತು ತಂದ ಎಣ್ಣೆಯನ್ನು ಕಾಯಿಸಲು ಸಿದ್ದತೆ ಮಾಡುತಿದ್ದರು. ಅದೇ ದಿಕ್ಕಿನ ಮೂಲೆಯಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿ ವಾಕ್ಯಗಳು ಕೇಳಿಬರುತಿದ್ದದನ್ನು ನೋಡಿ ಕಪ್ಪು ಕನ್ನಡಕಧಾರಿ, ಯಮಧರ್ಮರಾಯನ ಸಿಂಹಾಸನಕ್ಕೆ ಉಚ್ಚೆ ಹೊಯ್ಯುತಿದ್ದ.
ನರಕದಲ್ಲಾದರು ಎಲ್ಲಾ ರಾಜಕಾರಣಿಗಳನ್ನು ಕಾಣುತಿದ್ದ ನನ್ನ ಆನಂದಕ್ಕೆ ಪಾರವೆ ಇರಲಿಲ್ಲ, ಸ್ವಲ್ಪ ಹೊತ್ತಿನಲ್ಲಿಯೇ ಭರ್ಜಿಯಿಂದ  ಚುಚ್ಚಿದ ಅನುಭವವಾಗಿ ಕನಸಿನಿಂದ ಹೊರಬಂದುಬಿಟ್ಟೆ.
                                                         ಕೆ.ಪಿ. ಭಟ್ 

No comments:

Post a Comment