Tuesday, January 4, 2011

                                  ಇವತ್ತು ಎಣ್ಣೆ ಲ್ವಂತೆ!!!
ಥೂ...ಇವ್ರು ಮನೆ ಕಾಯೋಗ ..ಹಲ್ಕಾ ನನ್ನ ಮಕ್ಳು . ವರ್ಷಕ್ಕೊಂದುಸಲ ವೋಟು ಗೀಟು ಅಂತ ಮಾಡ್ಕೊಂಡು ದಿನಂಪ್ರತಿ ತಲೆಗೆ ಎಣ್ಣೆ ಹಕ್ತಿದ್ದವ್ನನ್ನು ಹಾಕದಾಗೆ ಮಾಡ್ಬಿಟ್ರಲ್ಲಪ್ಪ, ಅಂತ ಉಮೇಶ ಹಿಗ್ಗಾ ಮುಗ್ಗಾ ಬೈತಿದ್ದಾನಂತೆ. ಯಾಕಂತ ಕೇಳಿದಿರಾ? ಅದೇ ರೀ ಇವತ್ತು ಕೂಡ ರಾಜ್ಯದಲ್ಲಿ ಮದ್ಯ  ಮಾರಾಟ ನಿಷೇದ, ಇದೆ ತಿಂಗಳು 2 ದಿನ ಬಾರ್ ಬಂದಾಗಿ ತಿರ್ಗ ಓಪನ್ ಆಯಿತು ಅಂತ ಖುಶಿಯಲ್ಲಿರುವಾಗಲೇ ಪುನಹ ಮತದಾನದ ಲೆಕ್ಕಾಚಾರ ಅಂತ ಹೇಳ್ಕೊಂಡು ಈ ದಿನ 12 ಗಂಟೆ ರಾತ್ರಿವರೆಗೆ ಬಾರ್ ಬಂದ್ ಮಾಡಿದ್ದಾರೆ ಅಂತ ಶಾಪ ಹಾಕೊಂಡು ಉಮೇಶ ಕಂಡ ಕಂಡ ಹೆಂಡದಂಗಡಿ ಸುತ್ತ ಬ್ಲ್ಯಾಕ್  ಏನಾದರು ಸಿಗುತ್ತಾ ಅಂತ ಸುಳಿದಾಡುತ್ತಿದ್ದಾನಂತೆ. 
ಮೊನ್ನೆ ತಾನೇ, ಡಿ.31 ರ ಸಂಜೆ ಬಾರ್ ಪುನ ಓಪನ್ ಆದಾಗ ಹನುಮಂತನ ಬಾಲದ ತರ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ಮದ್ಯ ಪ್ರಿಯರನ್ನು ನಾವು ನೋಡಿದ್ದೇವೆ, ಇವತ್ತು ಕೂಡ ರಾತ್ರಿ ಬಾರ್ ಯಾವಾಗ ಓಪನ್ ಆಗುತ್ತಪ್ಪ ಎಂದು ಜನ ಕಾಯುವುದು ಸಂಭವನೀಯ. ಆದರೆ ಮೊನ್ನೆ ಚುನಾವಣಾ ಸಂಧರ್ಭದಲ್ಲಿ ನೀಡಿದ ಎಣ್ಣೆ ಕೆಲವರಲ್ಲಿ ಹಾಗೆ ಉಳಿದಿದೆಯಂತೆ. ಅದೇ ಹೆಂಡವನ್ನು ಈ ದಿನವು ಕುಡ್ಕೊಂಡು ಕಾಂಗ್ರೆಸ್ ಕೀ ಜೈ, ಯಡಿಯೂರಪ್ಪನಿಗೆ ಜಯವಾಗಲಿ ಅಂತ ಜಯಕಾರ ಹಾಕಲು ಅಣಿಯಾಗಿದ್ದಾರೆ ಅಂತೆ .  
ನಮ್ಮ ರಾಜಕಾರಣಿಗಳು ಕೊಟ್ಟ ಹೆಂಡ ಕಳಪೆ ಗುಣಮಟ್ಟದ್ದು ಎಂದು ನಮ್ಮ ಉಮೇಶ ಆರೋಪ ಮಾಡುತ್ತಿದ್ದಾನೆ. ಆತನ ಗೆಳೆಯ ನಟೇಶ ಮೊನ್ನೆ ತಾನೇ ವೋಟು ಹಾಕ್ಲಿಕ್ಕೆ ಹೋದವನು ಮೈಯಲ್ಲಿದ್ದ ಪರಮಾತ್ಮ ಹೆಚ್ಚಾಗಿ ಕಿಡ್ನಿ ಕರಗುತ್ತಾ ಬಂತು , ಲಿವರ್ ವೂಸ್ಟ್ ಆಯಿತು,  ಇನ್ಯಾಕೆ ಮತದಾನ ಎಂದು ಮತಯಂತ್ರವನ್ನು ಬಾವಿಗೆ ಎಸೆದಿದ್ದಾನೆ ಅಂತೆ. ನಮ್ಮ ಪುಡಾರಿಗಳು ಮಾತ್ರ ಫ್ಹಾರಿನ್ ಸರಕು ಕುಡಿತಾರೆ ನಮಗೆ ಕಡಿಮೆ ಕ್ರಯದ್ದು ಕೊಡುತ್ತಾರೆ . ಆ ಕಾರಣದಿಂದ ನಮಗೂ ಒಳ್ಳೆ ರೇಟ್ನ ಮಾಲು ಕೊಡಬೇಕು ಎಂದು ಉಮೇಶ ಆಗ್ರಹಿಸುತ್ತಿದ್ದಾನೆ.
                                                                           - ಡಾ. ಶೆಟ್ಟಿ 

1 comment: