Thursday, January 13, 2011

Idea ಕಳ್ಳರು!!!
ಜೀವನದ ತತ್ವದ ಬಗ್ಗೆ ಅರಿಯಲು ಕಷ್ಟ. ತ್ಯಾಗ ಮಾಡೋದಕ್ಕೆ ಹೊರಟರೆ ಅನಂತವನ್ನು ಕೇಳಿಬಿಡುತ್ತದೆ ಜಗತ್ತು. ನಮ್ಮಲ್ಲಿ ಹುಟ್ಟುವಂತಹ ಬೆಲೆಬಾಳುವ Idea ಗಳಿಗೆ ಸರಿಯಾದ ವೇದಿಕೆಯನ್ನು ಒದಗಿಸುವ, ಹಾಗೂ ನಮ್ಮ Idea ಗಳ ಜೊತೆ-ಜೊತೆಗೆ ನಮ್ಮನ್ನು ಬೆಳೆಸುವಂತಹ ವ್ಯಕ್ತಿತ್ವಗಳ ಒಡನಾಟ ಅಗತ್ಯವಿದೆ. ಅಂತವರೊಂದಿಗೆ ನಮ್ಮ Idea ಗಳನ್ನು ತೆರೆದ ಮನಸ್ಸಿನಿಂದ ಹಂಚಿಕೊಳ್ಳಬಹುದು.
ರಾತ್ರಿಯಿಡೀ ಕುಳಿತು ಆಲೋಚನೆ ಮಾಡಿದರು ದೊರಕದ, ಕೆಲವರಿಗೆ ದೊರಕುವ ಹೊಸ ಅನ್ವೇಷಣೆಗೆ ಪೂರಕವಾಗುವ ಐಡಿಯಾಗಳನ್ನು ರೂಪಿಸುವ ಕೆಲವೇ ಬೆರಳೆಣಿಕೆಯಷ್ಟು ಮಂದಿಯನ್ನು ಕಾಣಬಹುದು.
ಇಂದಿನ ಕಾಲದಲ್ಲಿ ಐಡಿಯಾಗಳನ್ನು ತೆಗೆದುಕೊಂಡು, ಐಡಿಯಾ ಕೊಟ್ಟ ವ್ಯಕ್ತಿಯನ್ನು ಕುಗ್ಗಿಸಿ, ಸ್ವಂತ ತಾವೇ ಮೇಲೆ ಬರುವ ಮಂದಿಯೇ ಹೆಚ್ಚು. ಇಂದು ನಮ್ಮ ಎದುರು ಇರುವ ಫಿಲಂಗಳ ಕಥೆಗಳು ಹಾಡುಗಳನ್ನು ನಾವು ಗಮನಿಸಬಹುದು, ಇದಕ್ಕೆ ಐಡಿಯಾ ನೀಡಿದ ವ್ಯಕ್ತಿ ಯಾರಿಗೂ ಪರಿಚಯವಿಲ್ಲದ ಹಾಗೇ ಮೂಲೆಗುಂಪಾಗಿರುತ್ತಾನೆ.
ಆ ವ್ಯಕ್ತಿ ಇನ್ನಷ್ಟು ಐಡಿಯಾಗಳನ್ನು ತನ್ನಲ್ಲಿ ಹುಟ್ಟುಹಾಕಿಕೊಂಡು, ಸೂಕ್ತ ಹೃದಯಕ್ಕೆ ತಲುಪಿಸಲು ಕಾಯುತ್ತಿರುತ್ತಾನೆ. ಹೀರೋ ಎನಿಸಿಕೊಂಡವರು ಎಲ್ಲಾ ಸಂಧರ್ಭಗಳಲ್ಲಿ ಹೀರೋಗಳಲ್ಲ, ಅದರ ಮೂಲ ಅನ್ವೇಷಣೆ ಅಗತ್ಯ. ಅನುಭವದಿಂದ, ಮತ್ತು ಉತ್ತಮ ಪುಸ್ತಕಗಳ ಓದುವಿಕೆಯಿಂದ ಇದು ಸಾಧ್ಯ.
                                                                       ಕೆ.ಪಿ.ಭಟ್  

1 comment:

  1. yes u r right i have a sugtn..........................it is better to join with me.ican develop your ideas so your talent will cum up.

    ReplyDelete