Thursday, January 13, 2011

ಡೊಂಕು ಬಾಲದ ನಾಯಕರೆ!!!
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದ ಮತ್ತೊಂದು ಜೀವ ಬಲಿಯಾಗಿದೆ. ಒಂದೂವರೆ ವರ್ಷದ ಮಗುವೊಂದನ್ನು ಬೀದಿ ನಾಯಿಗಳು ತಿಂದು ಹಾಕಿದೆ, ಆ ಮೂಲಕ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ವರೆಗೆ ನಾಯಿಗಳ ದಾಳಿಗೆ ಬಲಿಯಾದ ಮಕ್ಕಳ ಸಂಖ್ಯೆ ೪ಕ್ಕೇರಿದೆ. ಬೆಂಗಳೂರಿನಲ್ಲಿ ಪೊಲೀಸರು ರೌಡಿಗಳನ್ನು ಹಿಡಿಯುವ ಕೆಲಸ ಬಿಟ್ಟು ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ.
ನಾಯಿಯೊಂದನ್ನು ಕೊಂದರೆ ಬೊಬ್ಬೆ ಹಾಕುವ ಪ್ರಾಣಿ ದಯಾ ಸಂಘದವರು, ಮಗು ಬಲಿಯಾದಾಗ ಎಲ್ಲಿದ್ದಾರೆ? ಅವರ ಪ್ರಕಾರ ನಾಯಿ ಮನುಷ್ಯರನ್ನು ಕೊಲ್ಲಬಹುದು ಆದರೆ ಮನುಷ್ಯ ನಾಯಿಗಳನ್ನು ಕೊಲ್ಲಬಾರದು ಎಂಬ ಅರ್ಥವೇ?
ಹಸಿದ ಬೀಡಾಡಿ ನಾಯಿಗಳಿಗೆ ಸಣ್ಣ ಸಣ್ಣ ಮಕ್ಕಳು ಸುಲಭ ತುತ್ತಾಗುತಿದ್ದಾರೆ. ಕೂಲಿ ಕೆಲಸಗಾರರ, ಕಟ್ಟಡ ಕಾರ್ಮಿಕರ ಮಕ್ಕಳು ನಾಯಿಗಳಿಗೆ ಸುಲಭವಾಗಿ ಸಿಗುತ್ತಿವೆ, ಯಾಕೆಂದರೆ ಇವರು ಒಂದು ಹೊತ್ತಿನ ಊಟಕ್ಕಾಗಿ ಮಕ್ಕಳನ್ನು ಎಲ್ಲೆಲ್ಲೋ ಬಿಟ್ಟು ದುಡಿಯುತ್ತಾರೆ.
ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರ ನಗರಗಳಲ್ಲೂ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ, ಅವುಗಳನ್ನು ಕೊಲ್ಲುವಂತೆಯೂ ಇಲ್ಲ ಹಾಗೇ ಬಿಡಲು ಸಾಧ್ಯವಿಲ್ಲ. ಸರಕಾರ ಹಾಗೂ ಪ್ರತಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸುವ ಬದಲಾಗಿ, ಸಾಮಾನ್ಯ ಜನರ ಸಮಸ್ಯೆಯ ಕಡೆಗೆ ಗಮನಹರಿಸಿ.
ಹಾಗೇ ಸುಮ್ಮನೆ - ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವುದರ ಜೊತೆಗೆ ಅದರ ಹಲ್ಲುಗಳನ್ನು ಕೂಡ ಕೀಳುವುದು ಉತ್ತಮ ಎಂಬುವುದು ಉಮೇಶನ ಅಭಿಪ್ರಾಯ. ಅದರ ಜೊತೆಗೆ ರಾಜ್ಯದ ಪೋಲಿಸ್ ಇಲಾಖೆಯಲ್ಲಿ 'ನಾಯಿ ಹಿಡಿಯುವ ಪೊಲೀಸರು' ಎಂಬ ಹೊಸ ವಿಭಾಗವೊಂದನ್ನು ತೆರೆಯಬೇಕು ಎಂಬ ಸಲಹೆಯನ್ನು ಕೂಡ ನೀಡಿದ್ದಾನಂತೆ.
                                                                              ಡಾ. ಶೆಟ್ಟಿ 

No comments:

Post a Comment