Monday, January 17, 2011

ಮಹಾರಾಷ್ಟ್ರದ 'ಆದರ್ಶ' ಧ್ವಂಸ  
ವಿವಾದಾತ್ಮಕ ಆದರ್ಶ ಹೌಸಿಂಗ್ ಸೊಸೈಟಿ, ಮುಂಬೈಯ ಕೊಲಾಬಾದಲ್ಲಿ ನಿರ್ಮಿಸಿರುವ, ಬಹು ಮಹಡಿಗಳ ಕಟ್ಟಡವನ್ನು ಧ್ವಂಸಗೊಳಿಸಬೇಕೆಂದು  ಪರಿಸರ ಸಚಿವಾಲಯ ಶಿಫಾರಸು ಮಾಡಿದೆ. 
ಹುತಾತ್ಮ ಸೈನಿಕರಿಗಾಗಿ  ನಿರ್ಮಿಸಿದ ಈ ಕಟ್ಟಡದಲ್ಲಿ ಹಲವು ಗೋಲ್-ಮಾಲ್ ಗಳು ನಡೆದು ಕೊನೆಗೂ  ಒಂದು ಮುಕ್ತಾಯಕ್ಕೆ ತಲುಪಿದೆ. ಮಹಾರಾಷ್ಟ್ರದ ಮುಖ್ಯ ಮಂತ್ರಿಯಾಗಿದ್ದ ಅಶೋಕ್ ಚೌಹಾಣ್ ರನ್ನು ರಾಜೀನಾಮೆ ಕೊಡಿಸಿದ ಮಾತ್ರಕ್ಕೆ ದೇಶಕ್ಕೆ ಆದ ನಷ್ಟ ತುಂಬುತ್ತದೆಯೇ? ಇಡೀ ಕಟ್ಟಡ ನಿರ್ಮಾಣದ ವೆಚ್ಚವನ್ನು ಆ ಮನುಷ್ಯನ ಕೈಯಿಂದಲೇ ವಸೂಲಿ ಮಾಡಬೇಕು, ಎಂತೂ ಕೋಟಿ ಕೋಟಿ ಗುಳುಂ ಮಾಡಿರುವ ಇವರಿಗೆ ಇದರ ಹಣವನ್ನು ಕೊಡುವಷ್ಟು ಬಡತನ ಇರಲಿಕ್ಕಿಲ್ಲ ಬಿಡಿ. 
ನಾವು ಒಂದು ನೂರು ಗ್ರಾಂ ನ ಪೇಸ್ಟ್ ಕೊಂಡರೂ ಅದಕ್ಕೆ 2 ರೂ ತೆರಿಗೆ ಪಾವತಿಸುತ್ತೇವೆ. ಸಾಮಾನ್ಯ ಜನರ ತೆರಿಗೆ ಹಣವನ್ನು ಈ ರೀತಿ ತಿಂದು ಹಾಕುವದು ಎಷ್ಟು ಸರಿ?
ಹುತಾತ್ಮ ಸೈನಿಕರ ಕುಟುಂಬಗಳಿಗೆ ಸೂರು ಒದಗಿಸಬೇಕಾದುದು ಸರಕಾರದ ಕರ್ತವ್ಯ, ಅದರಲ್ಲೂ ಹಣ ತಿಂದು ತೇಗಿದ ಈ  ಭ್ರಷ್ಟರನ್ನು ಯಾವುದಕ್ಕೆ ಹೋಲಿಸಬಹುದು  ಹೇಳಿ? ಕಜ್ಜಿ ನಾಯಿ!, ಛಿ! ಅದಾದರೂ ಇವರಿಗಿಂತ ಸಾಭೀತಿನಲ್ಲಿ ಇರುತ್ತದೆ. ಸಾರ್ವಜನಿಕರ ತೆರಿಗೆ ಹಣವನ್ನು ಹಗರಣಗಳನ್ನು ಮಾಡಿ ತಿಂದು ಹಾಕುವುದು ಇನ್ನೊಬ್ಬನ ವಾಂತಿಯನ್ನು ತಿಂದಂತೆಯೇ ಸರಿ. 
ದೇಶದ ರಾಜಕಾರಣಿಗಳು ಮತ್ತು ಭ್ರಷ್ಟ ಸರಕಾರಿ ಅಧಿಕಾರಿಗಳಿಗೆ ಅಂಕುಶ ಹಾಕುವವರಾರು?
ಹಾಗೇ ಸುಮ್ಮನೆ- ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿರುವುದನ್ನು ಕಂಡ ಉಮೇಶ, 'ಭ್ರಷ್ಟಾಚಾರ ನಿರ್ಮೂಲನಾ ಯಾಗ' ಮಾಡಿಸಬೇಕೆಂದು ಅಘೋರಿಗಳ ಬಳಿ ಹೋಗಿದ್ದನಂತೆ. ಅಲ್ಲಿ ಹೋದರೆ ಅಘೋರಿಗಳು ಕೂಡಾ ನಮ್ಮ ಗುರು 'ಗೌಡರು' ಒಪ್ಪಿಗೆ ನೀಡಿದರೆ ಮಾತ್ರ ನಾವು ಈ ಯಾಗ ಮಾಡುತ್ತೇವೆ ಎಂದರಂತೆ. 
                                                                        ಡಾ.ಶೆಟ್ಟಿ 

1 comment:

  1. ಆದರ್ಶ ಸೊಸೈಟಿ ಕಟ್ಟಡವನ್ನು ದ್ವ್ಹಂಸ ಗೊಳಿಸುವ ಬದಲು.. ಅಷ್ಟು ಹಣ ಖರ್ಚು ಮಾಡಿ ಕಟ್ಟಿದ ಕಟ್ಟಡವನ್ನು ಬಡಜನರಿಗೆ ದಾನ ಮಾಡಬಾರದೆ ???

    ReplyDelete