Saturday, January 15, 2011

ಶ್!!! ನ್ಯಾಕ್ ಬರುತ್ತಿದೆ...

ಶ್!!!  ನ್ಯಾಕ್  ಬರುತ್ತಿದೆ... 
ಜಪ್ಪಯ್ಯ ಎಂದರು ನೀರು ಬಾರದ ನಳ್ಳಿಯಲ್ಲಿ ಇಂದು ನೀರು ಬರುತ್ತಿದೆ. ಎಷ್ಟೋ ದಶಕದಿಂದ ಹಿಡಿದ ಕಟ್ಟಡದ ಧೂಳನ್ನು ಬ್ರಶ್ ಮೂಲಕ ಉಜ್ಜುತ್ತ, ಕೆಲಸಗಾರ ತನ್ನ ಅಳಲು ತೋರುತಿದ್ದಾನೆ. ಗಾರ್ಡನ್ ಗಳಿಗೆ pot ಹೊತ್ತು ತಂದು ಸಾಲಾಗಿ ಇಡುತ್ತಿದ್ದಾರೆ. ಇದು ನಮ್ಮ ಸರಕಾರಿ ಮತ್ತು ಖಾಸಗಿ ಕಾಲೇಜುಗಳ ನ್ಯಾಕ್ ತಯಾರಿ.
ವಿದ್ಯಾರ್ಥಿಗಳನ್ನು  ನಾನಾ ವಿಷಯಗಳಿಗೆ ಪ್ರತ್ಯೇಕವಾಗಿ ತಯಾರಿ, (ಇದು ಉಪನ್ಯಾಸಕರಿಗೆ ಮನಸ್ಸು ಮತ್ತು ಎಲ್ಲದರಲ್ಲೂ ಹತ್ತಿರವಿದ್ದರೆ ಮಾತ್ರ ಈ ಹಕ್ಕು ಸೀಮಿತ). sympathy ಮೂಲಕ ಅಡ್ಡ ಮಲಗಿಸಿದ ತತ್ವಗಳನ್ನು ವಿಧ್ಯಾರ್ಥಿಗಳ ಮೇಲೆ ಸಿಂಪಡನೆ ಮಾಡಲಾಗುತ್ತಿದೆ.
ಅಲ್ಲಿ ಇಲ್ಲಿ ಧೂಳಲ್ಲಿ ಬಿದ್ದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡ ಫೈಲುಗಳು, ಇಂದು ಟೇಬಲ್ ಗಳ  ಮೇಲೆ ನಗುತ್ತ ಪುನಹ ತಮ್ಮ ಇರುವಿಕೆಯನ್ನು ತೋರಿಸುತ್ತಿವೆ. ಸರಿಯಾದ ವ್ಯವಸ್ಥೆಯೆಡೆಗೆ ತನ್ನನ್ನು ನುಸುಳಿಸುವ ಪ್ರಯತ್ನ,ಅವಸರದಲ್ಲಿ ನಡೆಯುತ್ತದೆ.
ಇದು ಯಾವುದೇ ಒಂದು ಕಾಲೇಜಿಗೆ ಸೀಮಿತವಾಗಿರದೆ ಹೆಚ್ಚಿನ ಕಾಲೇಜುಗಳ ಜಾಯಮಾನವೂ ಇದೇ ರೀತಿಯಲ್ಲಿ ಸಾಗುವುದನ್ನು ಕಾಣಬಹುದು. ನಮ್ಮ ಉದ್ದೇಶವೇನೆಂದರೆ  ಈ ರೀತಿಯ ಬದಲಾವಣೆಗಳು; ಒಂದು ನಿರಂತರ process ಆಗಬೇಕು. ಇದು ಯಾರ ಕಣ್ಣಿಗೂ ಮಣ್ಣೆರೆಚುವಂತಿರಬಾರದು.
ಹಲವು ದಶಕಗಳಿಂದ ತುಂಬಿ ತುಳುಕುತ್ತಿರುವ ಮನಸ್ಸಿನ ಧೂಳನ್ನು ದೂರ ಮಾಡಿದಾಗ ಇಂತಹ ಬೆಳವಣಿಗೆ ಕಾಣಲು ಸಾಧ್ಯ. ನಿರಂತರ process ರೀತಿಯಲ್ಲಿ ಬೆಳೆದು ಬಂದ ಹಲವು ವಿದ್ಯಾ ಸಂಸ್ಥೆಗಳನ್ನು ನಾವು ನಮ್ಮ ಸುತ್ತ ಮುತ್ತ ಕಾಣಬಹುದು.
                                                           ಕೆ.ಪಿ.ಭಟ್                           

No comments:

Post a Comment