Sunday, January 9, 2011

ಅತಿಥಿ ದೇವೋಭವ?
ನಮ್ಮ ಸಂಸ್ಕೃತಿಯಲ್ಲಿ ಅತಿಥಿ ದೇವೋಭವ ಎನ್ನುವ ಮಾತು ಚಿರಪರಿಚಿತ. ಅತಿಥಿಯನ್ನು ದೇವರಂತೆ ಕಾಣುವ ನಮ್ಮ ಸಮಾಜದಲ್ಲಿ ಸರಕಾರೀ ಕಾಲೇಜುಗಳ ಅತಿಥಿ ಉಪನ್ಯಾಸಕರ ಈ ಪಾಡು ಇದಕ್ಕೆ ತದ್ವಿರುದ್ಧವಾಗಿದೆ.
ಇತರ ಉಪನ್ಯಾಸಕರಂತೆ ಅತಿಥಿ ಉಪನ್ಯಾಸಕನು ಯಾವ ವಿಷಯಗಳಲ್ಲೂ ಕೂಡ ಹಿಂದೆಯಿಲ್ಲ,ಆದರೆ ವೇತನದ  ವಿಷಯಕ್ಕೆ ಬಂದಾಗ ಕೇವಲ ವರ್ಷಕ್ಕೊಮ್ಮೆ ವೇತನ ಪಡೆಯುವ  ಇವರಿಗೆ ಅದು ಹೇಗೆ ತಮ್ಮ ಖರ್ಚು-ವೆಚ್ಚ ಪೂರೈಸುತ್ತಾರೆ ಅರ್ಥವಾಗುತ್ತಿಲ್ಲ.
ಈ ನಿಮಿತ್ತ ಅದೆಷ್ಟೋ ಬಾರಿ ವ್ಯವಸ್ಥೆಯ ವಿರುದ್ಧ ಅವರುಗಳು ಧ್ವನಿ ಎತ್ತಿದರು, ಕಿವಿಗಳಲ್ಲಿ ಗುಗ್ಗೆ ತುಂಬಿದಂತೆ ನಟನೆಯಲ್ಲಿ ತೊಡಗಿದ್ದಾರೆ.
ತಲೆಯಲ್ಲಿ ತುಂಬಿದ ಗೊಬ್ಬರವನ್ನು ಹೊರಹಾಕುವವರಿಗೆ ಹಣದ ತೀರಾ ಅಗತ್ಯವಿಲ್ಲದಿದ್ದರೂ, ತಾನೊಬ್ಬನೇ ದುಡಿದು ಕುಟುಂಬದ ವೆಚ್ಚ ಪೂರೈಸಬೇಕೆಂಬವರಿಗೆ, ಈ ಜಡ್ಡು ಹಿಡಿದ ವ್ಯವಸ್ಥೆಯ ವ್ಯವಸ್ಥಿತ,ಅವ್ಯವಸ್ಥೆಗೆ ಯಾವಾಗ ತಿಲಾಂಜಲಿ ಕೊಡುತ್ತಾರೋ ಕಾದು ನೋಡಬೇಕು.
                                                -ಕೆ.ಪಿ.ಭಟ್ 

No comments:

Post a Comment