Friday, January 14, 2011

ಆದರ್ಶ ಪ್ರಾಯರಾಗುವ ಅಕ್ಕ ಪಕ್ಕದ ವ್ಯಕ್ತಿಗಳು
ವಿಶ್ವದಲ್ಲಿ ಬಹಳ ದೊಡ್ಡ ಸಾಧನೆಗೈದ, ಅದೇನೇನೋ ಭಾಷಣ ಬಿಗಿಯುವ, ಅದಿನ್ನೇನೋ ವೈಚಿತ್ರ್ಯಗಳನ್ನು ಸಾಧಿಸುವ ವ್ಯಕ್ತಿಗಳು ನಮಗೆ ಸದಾ ಒಂದು ರೀತಿಯ ಮಿಂಚಿನಂತಹ Inspiration ಆಗಿಬಿಡುತ್ತಾರೆ. ಅವರ ಬದುಕು,ಬಗೆ, ರೀತಿ, ನೀತಿ ಇವೆಲ್ಲವೂ, ಅವರ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ. ಒಮ್ಮೊಮ್ಮೆ ಅವರ ಸಾಧನೆಗಳನ್ನು ನೆನೆಯುತ್ತಾ ನಾವು struck ಆದ ನಿದರ್ಶನಗಳೂ ಇವೆ.
ಆದರೆ, ಇದಕ್ಕಿಂತ  ಹೊರತಾಗಿ, ನಮ್ಮ ಅಕ್ಕ ಪಕ್ಕದಲ್ಲೇ ಕಂಡರೂ ಕಾಣದಂತೆ ಇರುವ ಸಾಧಕರನ್ನು ನಾವು ಮರೆತೇ  ಬಿಡುತ್ತೇವೆ. ಕಾರಣ,ಸಮಾನವಯಸ್ಕರೆಂದೋ, ನಮಗೆ competition ಎಂದೋ ಗೊತ್ತಿಲ್ಲ. ಆದರೆ ಒಂದಂತು ಸತ್ಯ; ಅವರುಗಳು ಕೂಡ ನಮಗೆ ನಿಜವಾದ ಸ್ಪೂರ್ತಿ ಆಗಬಲ್ಲರು. ಯಾಕೆಂದರೆ, ಯಾರೋ ದೂರದ ವ್ಯಕ್ತಿಗಿಂತ ಹತ್ತಿರದ ವ್ಯಕ್ತಿಯ ಮಿಂಚು ಹೆಚ್ಚು ಸಂಚಲನ ಮೂಡಿಸುತ್ತದೆ.
ಇದೇ ರೀತಿಯಾದ ವ್ಯಕ್ತಿಯೊಬ್ಬ ಮಂಗಳೂರಿನ ಬಜ್ಪೆಯಲ್ಲಿ ಇದ್ದಾನೆ. ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿ. ಸಂದೇಶ್ ಕುಮಾರ್, ಕಿತ್ತು ತಿನ್ನುವ ಬಡತನದ ನಡುವೆಯೂ ಯಾವ ಕಷ್ಟಗಳನ್ನು ಲೆಕ್ಕಿಸದೆ ತನ್ನ ಸಾಧನೆಗೆ ಪೂರಕವಾಗುವಂತೆ ಎಲ್ಲೆಲ್ಲೋ, ಹೇಗೇಗೋ ಬಹಳ ಕಷ್ಟ ಪಟ್ಟು ದುಡಿದು ವ್ಯಾಸಂಗ ಮಾಡುತ್ತಿದ್ದಾನೆ. ಈಗಾಗಲೇ ಹಲವು ಸಾಧನೆ ಗೈದಿರುವ ಈತ ಸದ್ಯ ಜರುಗಲಿರುವ  R.D ಪರೇಡಿನಲ್ಲಿ  ಪಿ.ಯಂ ಜೊತೆ ಕಾರ್ಯಕ್ರಮ ವೀಕ್ಷಣೆಗೈಯುವ ಅವಕಾಶವನ್ನು ಪಡೆದುಕೊಂಡಿದ್ದಾನೆ. ಇಂತಹ ಅವಕಾಶ ದೊರಕುವ ಕೆಲವೇ ವಿದ್ಯಾರ್ಥಿಗಳ ನಿಯೋಗದಲ್ಲಿ ಈತನು ಒಬ್ಬ. ಈ ಪರೇಡ್ ನಲ್ಲಿ  ಭಾಗವಹಿಸುವ ವಿದ್ಯಾರ್ಥಿಗಳೆಲ್ಲರದು ಒಂದು ಸಾಧನೆಯೇ ಸರಿ, ಆದರೆ ಈತನ ಸಾಧನೆ ತುಸು ಅವರಿಗಿಂತ ಮಿಗಿಲು ಎನ್ನಬಹುದು. ಪರಿಸ್ಥಿತಿಗೆ ಅನುಗುಣವಾಗಿ. I.A.S ಮಾಡಬೇಕೆಂದಿರುವ ಈತನಿಗೆ ನಮ್ಮ ಕಡೆಯಿಂದ  hats off and best of luck. 
                                                                         -ಡಾ.ಶ್ರೇ                              

No comments:

Post a Comment