Friday, January 7, 2011

 ಬೇಕು ತೂ.ಚಾ.ಸ 
ಕೇಂದ್ರ ಸರಕಾರವನ್ನು ಪೂರ್ತಿಯಾಗಿ ಪುರುಸೋತುಇಲ್ಲದೆ ತಲೆಕೆರಯುವ ಹಾಗೇ ಮಾಡಿದ ೧.೭೪ ಲಕ್ಷ ಕೋಟಿಯ ೨ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ ರಾಜ್ಯ ಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್, ಉನ್ನತ ಮಟ್ಟದ ತನಿಖೆಯಿಂದ ಸಂಪೂರ್ಣ ನಿಜಾಂಶ ಬೆಳಕಿಗೆ ಬರುತ್ತದೆ ಎಂದು ಬಹಳ ಗಂಭೀರವಾಗಿ ಹೇಳಿದ್ದಾರೆ.
ವಿಚಾರ ಅದಲ್ಲ, ಈ ಗಂಭೀರ ಹೇಳಿಕೆಯಷ್ಟೇ, ನಮ್ಮ ಉನ್ನತ ಮಟ್ಟದ ತನಿಖಾ ಸಂಸ್ಥೆ ಗಂಭೀರವಾಗಿಯೇ ಕೆಲಸ ಮಾಡಿದರೆ ನಿಜಾಂಶ ಹೊರಬರುವುದಂತು ಖಚಿತ. ಆದರೆ ಈ ತನಿಖಾ ಸಂಸ್ಥೆ ಅದೆಷ್ಟರ ಮಟ್ಟಿಗೆ ತನ್ನ ಗಂಭೀರತೆಯನ್ನು ಉಳಿಸಿಕೊಂಡಿದೆ ಮತ್ತು ಅದಾವ ಪಕ್ಷ ಹೆಣೆದ ಬಲೆಯಲ್ಲಿ ಸಿಲುಕಿದೆ ಎಂಬುವುದು ಸರ್ವರಿಗೂ ತಿಳಿದ ವಿಚಾರವೆ. ಇಂತಹ ತನಿಖೆಗಳಿಂದ ತಪ್ಪುಗಳು ಕತ್ತಲಲ್ಲೇ ಕರಗುವುದಂತು ಸತ್ಯ.
ಮತ್ತಾವುದೋ ಜೆ.ಪಿ.ಸಿ. ತನಿಖೆಗೆ ಆಗ್ರಹ ಮಾಡಿದ ಬಿ.ಜೆ.ಪಿಯ ಬಹಳ ಒಲವಿನ ಸಮಿತಿಯಿಂದ, ಸತ್ಯ ಹೊರಬಂದರೂ ಬರಬಹುದು. (ರಾಜಕೀಯ ಲಾಬಿಗಾಗಿ). ಒಂದು ಪಕ್ಷ ಯಾರಾದರು ಬಿ.ಜೆ.ಪಿ ಯವರು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ, ಅದನ್ನು ಮುಚ್ಚಿ ಹಾಕುವ ಪ್ರಯತ್ನವೂ ಇದಾಗಿರಬಹುದು. ಇದೇನು ಹೊಸ ವಾದ ಎನ್ನಬಹುದು. ರಾಜಕೀಯ ಅನ್ನೋದೇ ಸಾಧ್ಯತೆಗಳ ಕಲೆ.ಆದ್ದರಿಂದ ಹೊಸ ಕೋನದಲ್ಲಿ ವಿಶ್ಲೇಷಣೆ ಮಾಡಿದ್ದು ಅಷ್ಟೆ.
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದ ನಮ್ಮ ಗಾಂಧಿ ಪಾರ್ಕ್ ಸುರೇಶ ಹೇಳ್ತಿದ್ದ, ಈ ಕಳ್ಳ ನನ್ನ ಮಕ್ಕಳ ಸುಳ್ಳುಗಳನ್ನು ಹೊರಹಾಕ್ಲಿಕ್ಕೆ ಯಾವ ಸಿ.ಬಿ.ಐ ಗೂ ಆಗೋಲ್ಲ ಜೆ.ಪಿ.ಸಿ. ಗೂ ಆಗೋಲ್ಲ. ಅದರ ಬದ್ಲು ತೂ.ಚಾ.ಸ ( ತೂತು ಚಾಪೆ ಸಮಿತಿ) ಅಂತ ಹೊಸ ಸಮಿತಿ ರಚನೆ ಆಗಬೇಕು. ತೂತು ಚಾಪೆ ಮೇಲೆ ಕೂತು,ತುಂಡು ಸಿಗರೇಟು ಸೇದುತ್ತ  ದೇಶದ ಬಗ್ಗೆ ಹೊಸ ಆಲೋಚನೆಗಳನ್ನು ತಲೆಯಲ್ಲಿ ಸಿಕ್ಕಾಪಟ್ಟೆ ತುರುಕಿಕೊಂಡು ಸದಾ ಹೊಸತನಕ್ಕೆ ಹಾತೊರೆಯುವ ನವ ಯುವಕರ ಗುಂಪಿಗೆ ತನಿಖೆ ಮಾಡಲು ಕೊಟ್ಟರೆ 'ರಾಡಿ' ಮೆತ್ತಿ ಕೊಂಡಿರುವ ಎಲ್ಲಾ 'ರಾಜ'ರ ಕಥೆಯು ತೀರಾ ಕ್ಲೋಸ್- ಅಪ್ ನಲ್ಲೆ ನಮ್ಮ ಜನರನ್ನು ತಲುಪುತ್ತೆ. 
  ನಿಮಗೆ ತಮಾಷೆ ಅನ್ನುಸ್ಬೋದು. but  ಸ್ವಲ್ಪ ಹೊತ್ತು ಕೂತು ಆಲೋಚನೆ ಮಾಡಿ.
                                                                         ಡಾ. ಶ್ರೇ  

1 comment: