Tuesday, January 11, 2011

ಶಿಕ್ಷೆಯೂ ಚೆನ್ನಾಗಿರಲಿ... 
ಹೊನ್ನಾವರದಲ್ಲಿ ಶಾಲಾ ಶಿಕ್ಷಕನೊಬ್ಬನ ಶಿಕ್ಷೆಯಿಂದ ಬಾಲಕನೊಬ್ಬನ ಸಾವು, ತರಗತಿಗೆ ಗೈರು ಹಾಜರಾದದಕ್ಕೆ ಆ ಬಾಲಕನಿಗೆ ಶಾಲಾ ಮೈದಾನಕ್ಕೆ ಸುತ್ತು ಬರುವ ಶಿಕ್ಷೆ ನೀಡಲಾಗಿತ್ತು. ಇದು ಹೊನ್ನಾವರದ ಕಥೆಯಾದರೆ, ಇನ್ನೂ ಬಾಗೇಪಲ್ಲಿಯಲ್ಲಿ ಶಿಕ್ಷಕನಿಂದ ಥಳಿತಕ್ಕೊಳಗಾದ ವಿಧ್ಯಾರ್ಥಿ 2 ದಿನಗಳಿಂದ ಆಸ್ಪತ್ರೆಯಲ್ಲಿದ್ದಾನೆ. ಇಂತಹ ಘಟನೆಗಳು ದೇಶದೆಲ್ಲೆಡೆ ಆಗಾಗ ಸಂಭವಿಸುತ್ತಲೇ ಇದೆ, ಅದರಲ್ಲೂ ಖಾಸಗಿ ಶಾಲೆಗಳಲ್ಲಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇದರ ಸಂಖ್ಯೆ ಹೆಚ್ಚು. 
ಗುಣಮಟ್ಟದ ಶಿಕ್ಷಣ ನೀಡುತ್ತೇವೆ, ವಿಧ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುತ್ತೇವೆ ಎಂದು ಶಾಲಾ ಶಿಕ್ಷಕರು ಮಕ್ಕಳಿಗೆ ನಾನಾ ಶಿಕ್ಷೆಗಳನ್ನು ನೀಡುತ್ತಾರೆ. ಅದರಲ್ಲಿ ಮೈದಾನಕ್ಕೆ ಸುತ್ತ ಓಡಿಸುವುದು, ಬಸ್ಕಿ ಹೊಡೆಸುವುದು, ಬೆತ್ತದಿಂದ ಸುಸ್ತಾಗುವವರೆಗೆ ಬಡಿಯುವುದು ಇತ್ಯಾದಿ, ಒಟ್ಟಿನಲ್ಲಿ ವಿಧ್ಯಾರ್ಥಿಗಳನ್ನು ಜೈಲಿನಲ್ಲಿರುವ ಖೈದಿಗಳಂತೆ ನೋಡಿಕೊಳ್ಳುತ್ತಾರೆ . ಇದೇ ಕಾರಣಕ್ಕೆ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿರುವುದು. ಶಿಕ್ಷಕನಾದವನು ಮಕ್ಕಳನ್ನು ಓದಿಸ ಬೇಕಾದರೆ ಶಿಕ್ಷೆ ನೀಡುವುದು ಅನಿವಾರ್ಯ ಆದರೆ ದೈಹಿಕ ದಂಡನೆಯಂತಹ ಶಿಕ್ಷೆ ನೀಡುವುದು ಸರಿಯಲ್ಲ. ನನಗೊಬ್ಬರು ಮೇಸ್ಟ್ರು ಇದ್ದರು ಅವರು ನಮಗೆ ದೈಹಿಕವಾಗಿ ದಂಡಿಸುತ್ತಿರಲಿಲ್ಲ ಬದಲಾಗಿ ಯಾವುದಾದರು ಪಾಠವನ್ನು 100 ,200 ಸಲ ಬರೆಸುತ್ತಿದ್ದರು. ಪೆಟ್ಟು ತಿನ್ನುವುದಕ್ಕಿಂದ ಇದೇ ನಮಗೆ ಹೆಚ್ಚು ಕಷ್ಟವಾಗುತ್ತಿತ್ತು. ಆದರೆ ಅದು ಮುಂದೆ ಪರೀಕ್ಷೆಗಳು ಬಂದಾಗ ಉಪಯೋಗವಾಗುತ್ತಿತ್ತು. ಶಾಲಾ ಶಿಕ್ಷಕರು ಇಂತಹ ಶಿಕ್ಷೆ ನೀಡುವುದು ಸಮಂಜಸ.
                                                           ಡಾ. ಶೆಟ್ಟಿ 

1 comment: