Thursday, January 13, 2011

ಮದುವೆಗೆ ಮುಂಚೆ H.I.V ಟೆಸ್ಟ್.
ಮದುವೆಯಾಗುವ ಮೊದಲು  H.I.V ಟೆಸ್ಟ್ ಕಡ್ಡಾಯಗೊಳಿಸಬೇಕು  ಎಂದು ಕೇರಳ ಮಹಿಳಾ ಆಯೋಗ ಸರಕಾರಕ್ಕೆ ಆಗ್ರಹಿಸಿದೆ. ನಿಜವಾಗಿಯೂ ಇದೊಂದು ಪ್ರಶಂಸನೀಯ ಬೇಡಿಕೆ 
ತಾನು H.I.V ಪಾಸಿಟಿವ್ ಎಂಬ ವಿಚಾರ ಗೊತ್ತಿದ್ದರೂ, ಮನೆಯವರ ಒತ್ತಾಯಕ್ಕಾಗಿ, ಕುಟುಂಬದ ಪ್ರತಿಷ್ಠೆಗಾಗಿ ಆ ವಿಚಾರವನ್ನು ಬಚ್ಚಿಟ್ಟುಕೊಂಡು  ಮದುವೆಯಾಗುವ ವ್ಯಕ್ತಿಗಳು ಬಹಳಷ್ಟಿದ್ದಾರೆ. ಇವರ ಈ ಕೆಲಸದಿಂದಾಗಿ ಮದುವೆಯಾಗಿ ಬರುವ ಹೆಣ್ಣಿಗೆ, ಹುಟ್ಟುವ  ಮಕ್ಕಳಿಗೆ ಆ ಖಾಯಿಲೆ ಹರಡುತ್ತದೆ. ಯಾವುದೇ ತಪ್ಪು  ಮಾಡದ ಅವರು ಈ ಮಾರಿಗೆ ಬಲಿಯಾಗುತ್ತಾರೆ. 
ಕೇರಳ ಮಹಿಳಾ ಆಯೋಗದಿಂದ ಹುಟ್ಟಿಕೊಂಡ ಈ ಬೇಡಿಕೆ ದೇಶಾದ್ಯಂತ  ಪ್ರಚಾರ ಪಡೆಯಬೇಕಾದ ಅಗತ್ಯವಿದೆ. ಸ್ತ್ರೀ ಸಮಾನತೆ ಬೇಕು, ಸ್ತ್ರೀಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ, ಎಂದು ಬೊಬ್ಬೆ ಹಾಕಿ ನಂತರ ಅದನ್ನು ಮರೆತು ಬಿಡುವ ಮಹಿಳಾ ಸಂಘಟನೆಗಳು,ಕೇರಳ ಮಹಿಳಾ ಸಂಘಟನೆಯನ್ನು   ಮಾದರಿಯಾಗಿಟ್ಟುಕೊಂಡು, ಸಾಮಾನ್ಯರಲ್ಲಿ ಏಡ್ಸ್ ಕುರಿತಾದ ಜಾಗ್ರತಿ ಮೂಡಿಸಬೇಕು. ಆ ಮೂಲಕ ಅಮಾಯಕ ಮಹಿಳೆಯರನ್ನು, ಮಕ್ಕಳನ್ನು ಪಾರು ಮಾಡಬೇಕು.
ಹಾಗೇ ಸುಮ್ಮನೆ- ಮದುವೆಗೆ ಮುಂಚೆ H.I.V  ಟೆಸ್ಟ್ ಮಾಡಬೇಕು ಎಂಬುವುದನ್ನು ಕೇಳಿದ ಉಮೇಶ, ಇದರ ಜೊತೆಗೆ ಆಲ್ಕೋಹಾಲ್  ಟೆಸ್ಟ್ ಕೂಡಾ ಮಾಡಬೇಕು ಎಂದನಂತೆ. ಇದರಿಂದಾಗಿ ಕೆಲವು ಮಹಿಳೆಯರ ತಾಳಿ ಅಡವಿಡುವುದು ತಪ್ಪಬಹುದು ಎಂಬುವುದು ಆತನ ಅಭಿಪ್ರಾಯ. ಯಾವಾಗಲೂ ಸಿಲ್ಲಿಯಾಗಿ ಯೋಚಿಸುವ ಉಮೇಶ ಇವತ್ತು ಸರಿಯಾಗಿ ಯೋಚಿಸಿದ್ದಾನೆ ಅಲ್ಲವೇ?
                                                                      ಡಾ - ಶೆಟ್ಟಿ 

1 comment:

  1. u r absolutly right.before tat indian women shoud be educat.u added alkhole test also needed, if it is so like u peopl's life will be in trouble!

    ReplyDelete