Friday, January 21, 2011

ಮಲೆ ಮಾರಿ   
ಹೌದು, ಇದು ತೀರಾ ಮನಸ್ಸಿಗೆ ನೋವು ತರುವಂತಹ ಸಂಗತಿ. ಮೊನ್ನೆ ಶಬರಿಮಲೆಯಲ್ಲಿ ಕಾಲ್ತುಳಿತಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ಏನು ಎತ್ತ ಹೇಗೆ ಎಂಬುವುದು ಈಗ ಅನಿಶ್ಚಿತ ಎನಿಸಿದರೂ ಕೆಲವು ಮಾಹಿತಿಗಳು ಲಭ್ಯವಾಗಿರುವುದಂತೂ ಸತ್ಯ. ಚಾಲಕರ ಗಲಭೆ ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ಬಿಂಬಿಸಲಾಗಿದೆ. 
ಇದೆಲ್ಲದರ ಹೊರತಾಗಿಯೂ ಸರಕಾರದ ವೈಫಲ್ಯ ಎದ್ದು ಕಾಣುತ್ತದೆ. ಕೇವಲ ಸಣ್ಣ ಸರಿಗೆಯನ್ನು ರಸ್ತೆಯ ಬದಿಗೆ ಅಳವಡಿಸಿ ಬಹಳ Conjusted  ಆಗಿ ಮಾಡಿ  1400 ವಾಹನಗಳಿಗೆ ಪಾಸ್ ಕೊಟ್ಟಿರುವುದು ವ್ಯವಸ್ಥೆಯ ಲೋಪ ದೋಷಕ್ಕೆ ಎತ್ತಿ ಹಿಡಿದ ಕನ್ನಡಿ.ಅದೆಷ್ಟೋ ಲಕ್ಷಾಂತರ ಜನ ಮಕರ ಸಂಕ್ರಮಣಕ್ಕೆ ಶಬರಿ ಮಲೆಗೆ ಭೇಟಿ ಕೊಡುತ್ತಾರೆ.'ಭಕ್ತಿಯ ಪರಾಕಾಷ್ಠೆಯ ಭಾವನೆಯೊಂದಿಗೆ'. ಇಂತಹ ಸಂದರ್ಭದಲ್ಲಿ ಅಚಾತುರ್ಯಗಳು ಆಗುವುದು ಸಂಭವನೀಯ.ಕಾರಣ, ಇದಕ್ಕೂ  ಮೊದಲು ಅಲ್ಲಿ ಇದೇ ತರಹದ ತಪ್ಪುಗಳು ನಡೆದಿವೆ.
ಇಂತಹ ಸಂಭವನೀಯ ಅವಘಡಗಳನ್ನು ತಪ್ಪಿಸಲು ಸರಕಾರ ಮತ್ತು ದೇವಾಲಯ ಮಂಡಳಿ ಪೂರ್ವನೀಯೋಜಿತವಾಗಿ  ಸಮಸ್ಯೆಯನ್ನು ಸೂಕ್ಷ್ಮೋಗಂಭೀರವಾಗಿ ಪರಿಗಣಿಸಿ ಎಲ್ಲಾ ರೀತಿಯ ಅನಾನುಕೂಲವನ್ನು ತಡೆದು ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕಿತ್ತು. ಆದರೆ ಅದೇನೇನೋ ಗಾಂಭೀರ್ಯ ಕೆಲಸಗಳಿತ್ತೆಂದು ಈ ವಿಚಾರವನ್ನು ಬದಿಗಿಟ್ಟರೋ  ಗೊತ್ತಿಲ್ಲ. ಇರಲಿ ಬಿಡಿ.
ಈಗ ಹೈ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಉತ್ತಮ ಬೆಳವಣಿಗೆಯೇ ಸರಿ. ಇದಕ್ಕೂ ಮೀರಿ ಮಕರ ಜ್ಯೋತಿಯ ಬಗ್ಗೆಯೂ ತನಿಖೆಯಾಗಬೇಕೆಂಬ ಧ್ವನಿ ಹೈ ಕೋರ್ಟ್ ನಿಂದ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂಬುವುದು ನ್ಯಾಯಾಂಗ ವ್ಯವಸ್ಥೆಗೆ ನ್ಯಾಯಯುತವಾಗಿ ಮತ್ತು ಮೌಲ್ಯಯುತವಾಗಿ ತಿಳಿದಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ನ್ಯಾಯಾಂಗ  ಬೆಳವಣಿಗೆಯಿಂದ ಜನಕ್ಕೆ ಹಾಗೂ ಭಕ್ತಾದಿಗಳಿಗೆ ಉಪಕಾರವಾದರೆ ಸರ್ವರಿಗೂ ಒಳಿತು ಎಂದಷ್ಟೇ ಹೇಳಬಹುದು. 
                                -ಡಾ.ಶ್ರೇ 

No comments:

Post a Comment