Thursday, January 20, 2011

ಫ್ರೀಕ್ ಔಟ್ ಫಂಡ್ 
೧.೩ ಟ್ರಿಲಿಯನ್ ಕೋಟಿ (Astronomical sum) ಇದು ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಘನ ಗಾಂಭೀರ್ಯ ವ್ಯಕ್ತಿಗಳು ಕೂಡಿಟ್ಟ ಮೊತ್ತ.
ಮೊತ್ತದ ಸಂಖ್ಯೆಯನ್ನು ಒಂದು ಖಾಲಿ ಪೇಪರ್ ಮೇಲೆ ಬರೆದರೆ mathematic experts ಅವರುಗಳನ್ನು  ಹೊರತುಪಡಿಸಿ, ಸಾಮಾನ್ಯರಿಗೆ ಲೆಕ್ಕ ಹಾಕಿ ಮೊತ್ತ ಹೇಳಲು  ಸಾಧ್ಯವಿಲ್ಲದಷ್ಟರ ಮಟ್ಟಿಗಿನ ಉದ್ದ ಸಂಖ್ಯೆ.
ಎಲ್ಲರ ಒಳ-ಹೊರ ಗುಟ್ಟುಗಳನ್ನು ಬಯಲಿಗೆಳೆಯುವ ವಿಕೀ ಲೀಕ್ಸ್ ಸಂಸ್ಥೆ ಈ ವಿಚಾರವನ್ನು ಬಯಲು ಮಾಡಿ ಇಡೀ ಭಾರತೀಯರನ್ನು Freak out ಆಗುವಂತೆ ಮಾಡಿದೆ. ಎಂದೂ Practical  ಆಗಿ ಕೇಳರಿಯದಷ್ಟರ ಮಟ್ಟಿಗೆ ನಮ್ಮವರು ಮೊತ್ತ ಕೂಡಿ ಹಾಕಿದ್ದಾರೆ. 
ಸದಾ ಬಡತನ, ಯೋಜನೆಗೆ ಹಣದ ಕೊರತೆ, ಸಾಲ ಬಾಧೆ ಇನ್ನೂ ಹೇಳಲಾಗದ ಹಲವಾರು ಬಾಧೆಗಳಿಂದ ಬಳಲಿ ಬೆಂಡಾಗಿರುವ ನಮ್ಮ ದೇಶಕ್ಕೆ ಈ ಹಣವನ್ನು  ಬಳಸಿದರೆ ಅಥವಾ ಒಂದೊಮ್ಮೆ ಬಳಸಿದ್ದಿದ್ದರೆ, ವಿಶ್ವದ ಮಹೋನ್ನತ ರಾಷ್ಟ್ರಗಳಲ್ಲಿ ಭಾರತವೂ ಒಂದಾಗುತ್ತಿತ್ತು. ಹಲವು ವ್ಯಕ್ತಿಗಳ ಮನದಲ್ಲಿ ಈ ವಿಚಾರದ ಬಗ್ಗೆ  ಈ ವಿಷಯದ ಅಲೆ ಎದ್ದಿದ್ದರೂ, ಅದು ಎಲ್ಲೆಲ್ಲೋ ಬಳಕೆಯಾಗಿ ಪೋಲಾದರೆ, ಇನ್ನೂ ಕೆಲವರನ್ನು ವ್ಯವಸ್ಥೆಯೇ ಕಟ್ಟಿ ಹಾಕಿ ಬಿಟ್ಟಿದೆ. 
ತಮ್ಮನ್ನು ತಾವು ವೈಭವೋಪೇತ ಎಂದು ಕರೆದುಕೊಳ್ಳುವ ಮತ್ತು ಕರೆಸಿಕೊಳ್ಳುವ ಚಟದಲ್ಲಿ ರಾಷ್ಟ್ರ ನಿರ್ಮಾಣದ ಅಗತ್ಯವನ್ನೇ ಬದಿಗಿಟ್ಟಿರುವುದು ಇಲ್ಲಿ ಎದ್ದು ಕಾಣುವಂತಹ ಸಂಗತಿ. ಈ ವ್ಯಕ್ತಿಗಳು ಯಾರು ಎಂದು ಸದ್ಯದಲ್ಲಿ  'ಒಪ್ಪಂದದೊಂದಿಗೆ' ಬಯಲು ಮಾಡುವ ಸುದ್ದಿ ಈಗ ಪ್ರಸ್ತುತ ಪರಿಸ್ಥಿತಿ. ಅಲ್ಲಿ ಯಾರೂ ಬೇಕಾದರೂ ದುಡ್ಡು ಕೂಡಿಟ್ಟಿರಲಿ. ಈ ಎಲ್ಲಾ ಮೊತ್ತವನ್ನು ಅವರು ದೇಶಕ್ಕೆ ಕೊಟ್ಟು ಮಹಾನ್ ತ್ಯಾಗಿಗಳಾಗಿದ್ದರೂ ಚಿಂತೆಯಿಲ್ಲ. ಆದರೆ ಕನಿಷ್ಠ ಪಕ್ಷ ಕನಿಷ್ಠ ಮೊತ್ತವನ್ನು ನೀಡುವ ಮನಸ್ಸಾದರೆ ದೇಶದ ಸ್ಥಿತಿ ಬದಲಾಗುವುದರಲ್ಲಿ ಸಂಶಯವಿಲ್ಲ. 
                                                                     - ಡಾ.ಶ್ರೇ 

No comments:

Post a Comment