Monday, January 10, 2011

Every politicians are trained in the same dog's school
ಇತಿಹಾಸದಲ್ಲೇ ಮೊದಲ ಬಾರಿಗೆ 324 ಭ್ರಷ್ಟರನ್ನು ಬಲೆಗೆ ಹಾಕಿದ ಕೀರ್ತಿ ಲೋಕಾಯುಕ್ತ ಸಂತೋಷ್ ಹೆಗ್ಡೆ  ಅವರದ್ದು. 'every politicians are trained in the same dog's school'  ಎನ್ನುವ ಮೂಲಕ ಯಾರ ಹಂಗನ್ನು ಇಟ್ಟುಕೊಳ್ಳದೆ ಕೈಗೆ ಸಿಕ್ಕ ಎಲ್ಲಾ ಭ್ರಷ್ಟರನ್ನು ಅವರ ವ್ಯಾಪ್ತಿಯಲ್ಲಿ ದಂಡಿಸುತ್ತಲೇ ಬಂದಿದ್ದಾರೆ. 324 ಭ್ರಷ್ಟರಲ್ಲಿ, ಹಲವು ಅಧಿಕಾರಿಗಳು, ಶಾಸಕರು, ಮಂತ್ರಿಮಕ್ಕಳು ಸೇರಿದ್ದಾರೆ.
ಲೋಕಾಯುಕ್ತರಿಗೆ ಬಹಳ ತೊಂದರೆ ಆಗಿರುವ ವಿಚಾರವೇ ವ್ಯಾಪ್ತಿ. ರಾಜಕಾರಣಿಗಳು ಅವರ ಲಾಭಿಗಾಗಿ ಲೋಕಾಯುಕ್ತರ ವ್ಯಾಪ್ತಿಯನ್ನು ಸಂಕುಚಿತ ಗೊಳಿಸಿ ಅವರನ್ನು ನಿಜವಾಗಿಯೂ ಒಂದು ಹುಚ್ಚು ಸಂಕಟದಲ್ಲಿ ಸಿಲುಕಿಹಾಕಿಸಿದ್ದಾರೆ ಎಂದರೆ ತಪ್ಪಲ್ಲ. 'ಆದರೂ ತೊಂದರೆ ಇಲ್ಲ, ನನ್ನ ಬೇಟೆ ನಿಲ್ಲದು' ಎಂಬ ನಿಲುವಿನಲ್ಲಿ ಸದಾ ಬೇಟೆಮಾಡುತ್ತಲೇ ಇದ್ದಾರೆ.
ಈ ರಾಜಕಾರಣಿಗಳ ಪರ ಇರುವ ವ್ಯವಸ್ಥೆ ಎಲ್ಲಿಯವರೆಗೆ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಎಂತಹ ಉತ್ತಮ ಲೋಕಾಯುಕ್ತರು ಬಂದರೂ  ಅವರುಗಳು ಅವರ ವ್ಯಾಪ್ತಿಯಲ್ಲೇ ಉಳಿದುಕೊಂಡು ಬಿಡುತ್ತಾರೆ. ಸ್ವಲ್ಪ ಕೂತು ಆಲೋಚನೆ ಮಾಡಿದರೆ ಇದು ನಿಜವಾಗಿಯೂ ಪ್ರಜಾಪ್ರಭುತ್ವವೇ? ಎಂಬ ಸಂಶಯ ನಮ್ಮನ್ನು ಕಾಡುತ್ತದೆ.
ಈ ಸೌಭಾಗ್ಯಕ್ಕೆ ಇವರು ನೇಮಿಸುವ ಲೋಕಾಯುಕ್ತರು ನಿಜವಾಗಿಯೂ ವ್ಯರ್ಥ ಎನ್ನಿಸಿಬಿಡುವುದುಂಟು. ಎಲ್ಲರೂ ವ್ಯವಸ್ಥೆಯನ್ನು ದೂರುತ್ತಿದ್ದೇವೆ ಎಂದುಕೊಳ್ಳಬೇಡಿ. ಇಲ್ಲಿ ನಮ್ಮ ಆಶಯ ಇಷ್ಟೇ, ನಮ್ಮ ವ್ಯವಸ್ಥೆಯಲ್ಲಿಯೇ ಒಂದು ರೀತಿಯ ವ್ಯವಸ್ಥಿತ ಆಪರೇಶನ್ ಶುರುವಾಗಬೇಕು, random ಆದ ಬದಲಾವಣೆ ಬೇಕು, ಅದು ಯಾವ ರೀತಿಯ ಬದಲಾವಣೆ ಎಂದು ಈಗ ಇಲ್ಲಿ ಪ್ರಸ್ತಾಪಿಸಿದರೆ ತೀರಾ ಹಾಸ್ಯಾಸ್ಪದ ಎನ್ನಿಸಬಹುದು. ಆದರೆ ಪೂರ್ವ ನೀಯೋಜಿತವಾಗಿ ಪಕ್ಕಾ ಪ್ಲಾನ್ ಮಾಡಿ ವ್ಯವಸ್ಥೆಯೊಳಗೆ ಕಾಲಿರಿಸಿದರೆ  ಬದಲಾವಣೆ ಅಂತು ಶತಸಿದ್ದ.
                                             ಡಾ.ಶ್ರೇ 

1 comment: