Sunday, January 16, 2011

ನಮ್ಮವರೇ ..ಆದರೆ..ಬದಲಾವಣೆ ಅಗತ್ಯ ಅಷ್ಟೆ.
ಮಾಡಬಾರದ  ಕೆಲಸಗಳನ್ನು  ಮಾಡಿ ಕಾರಾಗ್ರಹ ಸೇರುವ ಕೈದಿಗಳನ್ನು ಮಾನಸಿಕ ಅಸ್ವಸ್ಥರಾಗುವಂತೆ ನಡೆಸಿಕೊಳ್ಳುವುದು ಸರಿಯೇ? ತಾವು ಮಾಡಿರುವ ತಪ್ಪಿಗೆ ತಮ್ಮ ಮಾನವ ಹಕ್ಕುಗಳನ್ನು ಪ್ರಶ್ನಿಸಲಾರದಷ್ಟರ ಮಟ್ಟಿಗೆ ಪೊಳ್ಳು ಶಿಕ್ಷೆಯನ್ನು ಅನುಭವಿಸಿದ್ದಾರೆ.. ಕೈದಿಗಳಿಗೂ ಸಂವಿಧಾನಾತ್ಮಕ ಮಾನವ ಹಕ್ಕುಗಳು ಇರುತ್ತದೆ. ಕೈದಿಗಳ ಪರಿಸ್ಥಿತಿ ಸುಧಾರಿಸಲು I.P.C  ಗೆ ತಿದ್ದುಪಡಿ ತಂದರೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಲ್ತಮಸ್ ಕಬೀರ ಹೇಳಿದ್ದಾರೆ. ಈ ಮಾತಿನಂತೆ ತಿದ್ದುಪಡಿಯ ಅಗತ್ಯವಿದೆ.
ಒಂದೇ ನಾಣ್ಯದ 2 ಮುಖಗಳಾದ ಭಯೋತ್ಪಾದಕರು ಮತ್ತು ರಾಜಕೀಯ ಮುಖಂಡರುಗಳಿಗೆ, ಕಾರಾಗ್ರಹದಲ್ಲಿ ರಾಜ ಮರ್ಯಾದೆ ನೀಡುವ ನಮ್ಮ ಉನ್ನತ ಪೋಲಿಸ್ ಅಧಿಕಾರಿಗಳು, ಇತರ ಕೈದಿಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದು ಭಂಡ ನೈತಿಕತೆ.
ಕಾರಾಗ್ರಹವು ಕೈದಿಯ ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿಟ್ಟು, ಆತನಲ್ಲಿ ಬದಲಾವಣೆಯನ್ನು ತರುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಆತನ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ ಸಮಯೋಚಿತ ಆಲೋಚನೆ ಅತ್ಯಗತ್ಯ.
                                                                     -ಕೆ.ಪಿ. ಭಟ್ 

No comments:

Post a Comment