Wednesday, January 5, 2011

ತೆಂಡೂಲ್ಕರ್ ಗೆ  ಭಾರತ ರತ್ನ ಯಾವಾಗ?

ಸಚಿನ್ ಬ್ಯಾಟಿನಿಂದ ಮತ್ತೊಂದು ಶತಕ, ಟೆಸ್ಟ್ ಕ್ರಿಕೆಟಿನಲ್ಲಿ ಶತಕದ ಸಂಖ್ಯೆ 51 , ಇದರ ಜೊತೆಗೆ ಸಾಲು ಸಾಲು ದಾಖಲೆಗಳು. ಹೆಚ್ಚಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದ ವೀರನಿಗೆ ಬ್ರಿಯಾನ್ ಲಾರ ದಾಖಲೆಯ ಆಸೆಯಿಂದಲೇ ಮಾಡಿದ ಟೆಸ್ಟ್ ನ  ಅತ್ಯಧಿಕ 400 ರನ್ನುಗಳು  ಮಾತ್ರ ಉಳಿದಿರುವುದು. ಇಂತಹ ಸಾಧನೆ ಮಾಡಿದ ವ್ಯಕ್ತಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡುವುದು ಸಮಂಜಸವಲ್ಲವೇ? 
'ಬರ್ಖಾ'ತಾಗದ ವ್ಯಕ್ತಿಗಳು, ನಟನೆಯೇ ತಿಳಿಯದ ಚಿತ್ರನಟರಿಗೆ ಪದ್ಮಶ್ರೀ, ಪದ್ಮ ಪ್ರಶಸ್ತಿ ನೀಡುವ ಯು. ಪಿ . ಎ ಸರಕಾರಕ್ಕೆ ಸಚಿನ್ ಸಾಧನೆ ಕಾಣುತ್ತಿಲ್ಲವೇ? 
ನೆಲ್ಸನ್ ಮಂಡೇಲಾನಂತಹ ಆಫ್ರಿಕಾದ ನಾಯಕರಿಗೆ ಭಾರತ ರತ್ನ ನೀಡಬಹುದಾದರೆ, ಕ್ರಿಕೆಟಿಗರ ಆರಾಧ್ಯ ದೈವಕ್ಕೆ ಭಾರತ ರತ್ನ ನೀಡಬೇಕಾಗಿರುವುದು ತುರ್ತು ಅಗತ್ಯವಾಗಿದೆ . ಜಾರ್ಜ್. ಬುಶ್ ಗೆ  ಭಾರತ ರತ್ನ ನೀಡಬೇಕು ಎಂದು ಹೇಳಿದ ಸೋನಿಯಾ ಗಾಂಧಿಯವರೇ , ನೀವ್ಯಾಕೆ ಮೌನವಾಗಿದ್ದೀರಿ? ಸಚಿನ್ ಸಾಧನೆ ನಿಮ್ಮ ಕಣ್ಣು ಕುಕ್ಕುತ್ತಿಲ್ಲವೇ? 
ಮೊನ್ನೆ ಕಾಂಗ್ರೆಸ್ ಸಮಿತಿಯಲ್ಲಿ ಸಚಿನ್ ಗೆ ಭಾರತ ರತ್ನ ನೀಡುವ ಚರ್ಚೆಯನ್ನು ಟಿ.ವಿ ಯಲ್ಲಿ ನೋಡಿದ ನಮ್ಮ ಉಮೇಶ, ದೇವೇಗೌಡರಿಗೆ ಮತ್ತು ಲಾಲು ಪ್ರಸಾದರಿಗೆ ಕೂಡ ಭಾರತ ರತ್ನ ನೀಡಬೇಕೆಂದು ಸೋನಿಯಾ ಗಾಂಧಿಯಾ ಬಳಿ ಲಾಬಿ  ಮಾಡುತ್ತಿದ್ದನಂತೆ. ಇದೇ ವಿಚಾರದಲ್ಲಿ  ನಮ್ಮ  ಕುಮಾರಣ್ಣ ಮತ್ತು ಅವರ ತಂದೆ,  ಅದ್ಯಾರೋ ಚಿತ್ರ ನಟಿ ರಾಧನಿಗೆ ಪದ್ಮಶ್ರೀ ನೀಡಬೇಕೆಂದು ಪ್ರಧಾನಿಗೆ ಪತ್ರ ಬರೆದಿದ್ದಾರಂತೆ. 
                                                                                                                          -ಡಾ. ಶೆಟ್ಟಿ  

No comments:

Post a Comment