Thursday, January 20, 2011

ಪ್ರಭಾವ/ಪರಭಾವ 
ಪ್ರತಿಯೊಬ್ಬನ ಬೆಳವಣಿಗೆಯಲ್ಲಿ ಆತ ನಂಬಿಕೊಂಡು ಬಂದಿರುವ ತತ್ವಗಳಿಗಿಂತಲೂ; ಕೆಲವು ವ್ಯಕ್ತಿಗಳ ಮಾತು,ಕ್ರಿಯೆ ಅಥವಾ ಜೀವನ ಶೈಲಿಯು ಪ್ರಭಾವ ಬೀರುತ್ತದೆ.ಅಂತಹ ಪ್ರಭಾವ ಶಾಲಿ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ತಮ್ಮದೇ ಆದ ಛಾಪು ಬೀರಿ ಇಮೇಜ್ ಪಡೆದುಕೊಂಡಿರುತ್ತಾರೆ. ಇವರ ವಂಶಸ್ತರ ಪೈಕಿ ಯಾವಾನಾದರೊಬ್ಬ ತನ್ನದೇ ಇಮೇಜ್ ಗಳಿಸುವ ಹಪಹಪಿಯಲ್ಲಿ ಹೊರಗಿಳಿದರೆ, ಜನರು ಆತನನ್ನು ಮೂಲವ್ಯಕ್ತಿಯ ಇಮೇಜ್ ಗೆ ಹೋಲಿಕೆ ಮಾಡಲು ತಕ್ಕಡಿಯಲ್ಲಿ ಕೂರಿಸಿ ತೂಕ ನೋಡ ತೊಡಗುತ್ತಾರೆ. ಇಲ್ಲೇ ಆಗುವುದು ಎಡವಟ್ಟು!!
ಇವನೊಬ್ಬ ಉತ್ತಮ ಕುಟುಂಬದಲ್ಲಿ ಜನಿಸಿ ಬೆಳೆದು ಬಂದ, ಜನರ ನಡುವೆ Genius ಎನಿಸಿಕೊಂಡವ. ಈತನ ಮಾತು, ಜ್ಞಾನ, ಕನಸು(?) , ಕಲ್ಪನೆ, ಸಾಮಾಜಿಕ ಚಿಂತನೆ ಯಾವ ಪರಿಯಿತ್ತೆಂದರೆ, ಮುಂದೆ ಒಬ್ಬ ಮಹಾತ್ಮನಾಗುವ ಎಲ್ಲಾ ಮೌಲ್ಯಭರಿತ ಅಂಶಗಳಿಂದ ತುಂಬಿ ತುಳುಕುವಂತಿತ್ತು. ಈತನ ತತ್ವ ಸಿದ್ದಾಂತಗಳಿಗೆ  ಕಿವಿಕೊಟ್ಟವರೆಲ್ಲ ಕೊನೆಗೆ ತಲೆಯನ್ನೇ ಕೊಟ್ಟು ಬರುವಂತಹ ಪರಿಸ್ಥಿತಿಗೆ ಬಂದು ಸಿಲುಕಿದ್ದು ಬೇರೆ ವಿಷಯ! ಅಂತೂ, ಈತ ಸಾಮಾನ್ಯ ದ್ರಡತೆಯ  ಮನಸ್ಸಿನೊಂದಿಗೆ ತನ್ನ ಬಳಿ ಬಂದವರನ್ನು ಕುಣಿಸುವುದರಲ್ಲಿ ಕರಗತನಾಗಿದ್ದ.
ಈತನ ಬಗ್ಗೆ Introduction ಕೊಟ್ಟು ಓದುಗರ ಮೂಡ್ ಹಾಳು ಮಾಡುವ ಉದ್ದೇಶ ನನಗಿಲ್ಲ. ಆದರೆ ಈತನ ವಿಲಕ್ಷಣ ಬುದ್ದಿಯ ಬಗ್ಗೆ ಹೇಳದಿರಲು ಕಷ್ಟವಾಗುತ್ತಿದೆ. ನಿಮ್ಮಲ್ಲಿ ಯಾವುದಾದರು ಉತ್ತಮ ಆಲೋಚನೆ, ಯೋಜನೆಗಳಿದ್ದರೆ ಈತ ತನ್ನ ಜ್ಞಾನಭಂಡಾರದ ಹಿಡಿದ ಮಾತುಗಳಿಂದ ನಿಮ್ಮ ಯೋಜನೆಗಳನ್ನು ಮೇಲೆತ್ತಿಟ್ಟು, ಕೆಳಗೆ ಬೀಳಿಸಿ, ಮೆಟ್ಟಿ, ಗುಂಡಿ ತೋಡಿ, ಮಣ್ಣು ಮುಚ್ಚಿ, ಕಲ್ಲೊಂದನ್ನು ಇಟ್ಟು  ಅದರ ಮೇಲೆ 'Desperate'  ಎಂದು ಬರೆಸಿಬಿಡುತ್ತನೆ. ನೀವು ಅದ್ಯಾವ ಹುರುಪು ಹುಮ್ಮಸ್ಸಿನಿಂದ ನಿಮ್ಮ ಕೆಲಸ ಸಾಧಿಸಲೆಂದು ಅವನ ಬಳಿ ಹೋಗಿದ್ದಿರೋ, ಆ ಕೆಲಸವೇ ನಿಮ್ಮ ಮೂರ್ಖತನದ ಪ್ರತೀಕವೆಂಬಂತೆ ಗೋಚರವಾಗುತ್ತದೆ. ಅಂತಹ, ಕಲೆ ಅವನಲ್ಲಿದೆ.   
ನಾವು ಯಾವುದೇ creative ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಬೇಕೆಂದರೆ ಅದರಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುನ್ನುಗ್ಗಿದರೆ ನಮ್ಮ ವಿಜಯ ನಿಶ್ಚಿತ. ಆದರೆ ಆ ಸಮಯದಲ್ಲಿ ನಮ್ಮ ಒಡನಾಟ ಯಾರೊಂದಿಗಿದೆಯೆಂದು ನಾವೊಮ್ಮೆ ಅವಲೋಕನ ಮಾಡಿಕೊಳ್ಳದೆ ಹೋದರೆ ಇಂತಹ Fake ಬುದ್ದಿಜೀವಿಗಳ ಮುಷ್ಠಿಯೊಳಗೆ ಸಿಲುಕಿ ಒದ್ದಾಡಬೇಕಾಗುತ್ತದೆ. ಇವರು ನಮ್ಮನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡಿ, ನಮ್ಮ ಕನಸುಗಳನ್ನು ಹೀರಿ, ಭವಿಷ್ಯವೊಂದು ಕತ್ತಲೆಂದು ತೋರಿಸುತ್ತಾರೆ. 
ಇಂತವರ Management ನಲ್ಲಿ ಪಳಗಿ ಉತ್ತಮ ಅಡಿಆಳುಗಳಾಗಿ ತಮ್ಮದೇ ಒಂದು Fake ಸಮಾಜದಲ್ಲಿ ತಮ್ಮನ್ನು ತಾವೇ ದುರೀಣರು ಎಂದೆನಿಸಿಕೊಂಡು ಬದುಕುವವರೂ ಇದ್ದಾರೆ. ಇವರೆಲ್ಲಾ ಕೂಪ ಮಂಡೂಕಗಳಿಗಿಂತ ಒಂದು ಲೆವೆಲ್ ಕಡಿಮೆ.ನಿತ್ಯಾನಂದ ಭಕ್ತರಂತೆ ಇವರೆಲ್ಲಾ Brain wash ಮಾಡಿಸಿಕೊಂಡ ಶುದ್ದ, ಶುಚಿ,'Ste-riled' ಮನಸ್ಕರು.ಇವರ ಆಲೋಚನೆಗಳಲ್ಲಿ ಯಾವುದೇ ವೈಶಿಷ್ಟ್ಯತೆ ಒಳಗೊಂಡಿರುವುದಿಲ್ಲ. ಇವರಿಗೆ ಕನಸಿನ ಕೂಸು ಹುಟ್ಟಿಸುವಷ್ಟು Thinking sperms ಇಲ್ಲವೇ ಇಲ್ಲ. ಯಾಕೆಂದರೆ, ಇವರ ಮನಸ್ಸು sterile-ಲಿಂಗರಹಿತ.ಇಂತವರ ಒಂದು ಗುಂಪಿಗೆ ನಾಯಕನಾಗಿ ಉಳಿಯಲು ಏಕೈಕ ರಣಧೀರನಾಗಿ ಈ ನಮ್ಮ So called ಜ್ಞಾನಿಯಾಗಿರುತ್ತಾನೆ. ತನ್ನ ವಿಕೃತ, ವಿಕಲ್ಪ, ವಿವೇಚನಾ ರಹಿತ ಒಳ ಮನದ ಒಣ ತೀಟೆಯನ್ನು ತೀರಿಸಲು, ತನ್ನದೇ ವಿಶೇಷ(?) ವಿಚಾರವಂತಿಕೆ ವಿವಿಧ ಆಯಾಮಗಳನ್ನೊಳಗೊಂಡ ಪ್ರಯೋಗಗಳಲ್ಲಿ ತೊಡಗುತ್ತಾನೆ.ರೇಸ್ ಕುದುರೆ ಹಾಗೇ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಇವನ ಶಿಷ್ಯ೦ದಿರೆಲ್ಲ ,ಹೆಜ್ಜೆ ಹೆಜ್ಜೆಗೂ ತಾವೇ ಗೆಲ್ಲುತ್ತಿದೀವೆ ಎಂಬ ಭ್ರಮೆಯಲ್ಲಿ ಮುಂದಿನ ಗುರಿಯಕಡೆ ಸಾಗುತ್ತಿರುತ್ತಾರೆ. ಆದರೆ, ಆ ಗುರಿಯು ಮೀನಿಗೆ ಹಾಕಿದ ಗಾಳವೆಂದು ತಿಳಿಯುವಷ್ಟು ಕೆಪಾಸಿಟಿ, ಮೆದುಳು ತೊಳೆಸಿ ಬಂದವರಿಗೇನು ಗೊತ್ತು? ಈತನ ವಾಶಿಂಗ್ ಪ್ರೋಸೆಸ್ಸ್ ಕೂಡಾ ಲೇಟೆಸ್ಟ್ ಆಗಿರುತ್ತದೆ.  Ariel, Tide ನಂತಿರುವ ಮಾತು ನಿಮ್ಮ ನೆಲದ ಕ್ರಿಮಿ ಕೀಟವನ್ನು ಸಂಪೂರ್ಣ ನಾಶಮಾಡಬಲ್ಲ Phenoyl, Lizol ಗಳಂತ ಸಿದ್ದಾಂತ, ಎಲ್ಲವೂ ನಿಮ್ಮನ್ನು ಸ್ವಚ್ಚಂದಗೊಳಿಸುವ Psycho-chemical process.  ಈ Chemistry ಯಲ್ಲಿ ಸಾಯುತ್ತಿರುವುದು ವೈರಸ್ಗಳಲ್ಲ, ನಿಮ್ಮ ಕನಸುಗಳು ಎಂದು ತಿಳಿಯುವ ಮುಂಚೆಯೇ ನೀವು ಹೊರಬಂದರೆ ನೀವು ಬದುಕಿದಿರಿ. ಅನುಭವಿಸಿ ಬಂದರೆ ನೀವು ಗೆದ್ದಿದೀರಿ. ಅಲ್ಲೇ, ಸ್ವಾಮಿ ಭಕ್ತರಾಗಿ ಉಳಿದರೆ, ಜೈ ನಿತ್ಯಾನಂದಜೀಕಿ 
                                                      -ಅತಿಥಿ 

No comments:

Post a Comment