Monday, January 24, 2011

ಗನ್ ಮ್ಯಾನ್ ಗಳೇ ಇಲ್ಲವಂತೆ!
ಸಿರಾಜಿನ್  ಬಾಷಾ, ಕೆ.ಎನ್.ಬಾಲರಾಜ್ ಅವರ ದಿಟ್ಟ ನಡೆಗೆ ಕೆಲವರ  ವಕ್ರ ದೃಷ್ಟಿ ನೆಟ್ಟಿದೆ. 
ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ಪ್ರಕರಣದ ವಿರುದ್ದ ದಾವೆ ಹೂಡಲು ಅನುಮತಿ ಕೊಡಿ ಎಂದು ಮನವಿ ಸಲ್ಲಿಸಿದ ನಂತರದಿಂದ ಇವರಿಗೆ ಕಾಲ್ ಭಾದೆ ಪ್ರಾರಂಭವಾಗಿತ್ತಂತೆ. ಯಾರ ಕರೆ, ಎಲ್ಲಿಂದವೆಂಬುದು ಜನತೆಗೆ ಗೊತಿಲ್ಲವಾದರೂ, ಆ ಕರೆ ಯಾರದ್ದೋ ಘನ ವ್ಯಕ್ತಿಯ ಪರಮಾಪ್ತರದ್ದು ಎಂಬ ಸಂಶಯ ಕೆಲವು ರಾಜಕೀಯ ಬೆಳವಣಿಗೆಗಳಿಂದ ಅರಿವಾಗುತ್ತದೆ.
ತಮಗೆ ಬೆದರಿಕೆ ಇದೆಯೆಂದು, ಜನವರಿ 6 ರಂದೇ ಸೆಕ್ಯುರಿಟಿಗಾಗಿ ರಾಜಭವನಕ್ಕೆ ಮನವಿ ಸಲ್ಲಿಸಿದ ಲಾಯರ್ ದ್ವಯರಿಗೆ ಯಾವುದೇ ಭಧ್ರತಾ ವ್ಯವಸ್ಥೆ ದೊರೆತಿಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇದಕ್ಕೂ ಮೀರಿ ಈರ್ವರೂ ಗ್ರಹ ಇಲಾಖೆಯ ಪ್ರಧಾನ  ಕಾರ್ಯದರ್ಶಿಯಿಂದ ತೊಡಗಿ ರಾಜ್ಯ ಪೋಲಿಸ್ ಮಹಾ ನಿರ್ದೇಶಕ, ನಗರ ಪೋಲಿಸ್ ಆಯುಕ್ತ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರವರಗೆ ಎಲ್ಲರಿಗೂ ಪತ್ರ ಬರೆದ ಮೇಲೂ ಇವರಿಗೆ ಒಂದಿಷ್ಟೂ ಕನಿಕರ ತೋರದೆ ಇರುವುದನ್ನು ಕಂಡರೆ ವಿಭಾಗಗಳ ಬೇಜಾವಾಬ್ದಾರಿ  ಹಿಂದಿರುವ ಸೇಡಿನ ಯುದ್ದ ಎದ್ದು ಕಾಣುತ್ತದೆ. 
ಎಂತೆಂಥಾ ಮೂರೂ ಕಾಸಿಗೆ ಯೋಗ್ಯತೆ ಇಲ್ಲದ ಅಯೋಗ್ಯರಿಗೆ ಕೇಳಿದ ತಕ್ಷಣ ಸೆಕ್ಯೂರಿಟಿ ಸೌಲಭ್ಯ ಒದಗಿಸಿ ಪ್ರಜಾಪ್ರಭುತ್ವ ಎಂದು ಬೀಗುವ ಸರಕಾರ ಈಗ ಯಾವ ಪುರುಷಾರ್ಥ ಕೆಲಸದಲ್ಲಿ ತೊಡಗಿದೆ?  ಪಾಪ ಇದರ ಬಗ್ಗೆ ಆಲೋಚನೆಮಾಡಲೂ ಸಮಯವಿಲ್ಲದಷ್ಟರ ಮಟ್ಟಿಗೆ ಬ್ಯುಸಿ ಅನುಸುತ್ತೆ ನಮ್ಮ ಸರಕಾರ. ಅಥವಾ ನಮ್ಮ  ಗನ್ ಮ್ಯಾನ್ ಗಳು  ಖಾಲಿಯಾಗಿದ್ದರೋ? ಒಂದೂ ಅರ್ಥವಾಗೋಲ್ಲ(!)
                                                 -ಡಾ. ಶ್ರೇ 

No comments:

Post a Comment