Wednesday, February 2, 2011

ಪ್ರಾಂಶುಪಾಲರ ನಡೆ 
ಕಾಲೇಜಿನ ಎಲ್ಲಾ ಸಮಸ್ಯೆಗಳಿಗೂ ಉತ್ತರ ಕೊಡಬೇಕಾದ ವ್ಯಕ್ತಿ ಪ್ರಾಂಶುಪಾಲರು ಆಗಿರುವುದರಿಂದ ಆತನನ್ನು ಫುಟ್ಬಾಲ್ ಗೆ  ಹೋಲಿಸಬಹುದು,ಯಾರು ಬೇಕಾದರೂ ಕಿಕ್ ಕೊಡಬಹುದು; ಆ ಹುದ್ದೆಯೇ ಅಂತಹದ್ದು.
ಒಂದೆಡೆಯಲ್ಲಿ ಆಡಳಿತ ವರ್ಗ, ಇನ್ನೊಂದೆಡೆ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಹೆತ್ತವರು ಎಲ್ಲರನ್ನು ಹೊಂದಿಸಿಕೊಂಡು ಹೋಗುವುದೇ ಒಂದು ಸಾಹಸ. 
ಪ್ರಾಂಶುಪಾಲರಿಗೆ 'ಅಹಂ' ಬಂದರೆ ಅದು ಕಾಲೇಜಿನ ಅವನತಿಗೆ ಮುನ್ಸೂಚನೆ ಕೊಟ್ಟಂತೆ. ಈ ಹುದ್ದೆಗೆ ಎಷ್ಟು ಗೌರವವಿದೆಯೋ ಅಷ್ಟೇ ಜವಾಬ್ದಾರಿಯು ಇದೆ. ಆತನ ಒಂದು ಹೊತ್ತಿನ ವರ್ತನೆಯಲ್ಲಿ ಮೇಲು ಕೆಳಗಾದರೆ ಎಡವಟ್ಟುಗಳು ಮಹಡಿಯಷ್ಟರ ಮಟ್ಟಿಗೆ ಬೆಳೆದಿರುತ್ತದೆ.
ಚಿಕ್ಕ ತೂತು ಸಾಕು ನೀರು ದೋಣಿಯೊಳಗೆ ಪ್ರವೇಶಿಸಿ ಕೆಲವೇ ಕ್ಷಣಗಳಲ್ಲಿ ದೋಣಿ ಮುಳುಗಿ ಪಾತಾಳ ಸೇರಲು. 
'ನಾನು ಬ್ಯುಸಿ' ಎಂಬ ಪದ ಇಲ್ಲಿ ಅರ್ಥಹೀನ. 24 ಘಂಟೆಗಳ ಕಾಲ ಕೆಲಸದ ಒತ್ತಡದಲ್ಲಿರುವ ಅದೆಷ್ಟೋ ಉನ್ನತ ವ್ಯಕ್ತಿಗಳು ವಿದ್ಯಾರ್ಥಿಗಳ ಜೊತೆ 'ರಂಗ'ದಲ್ಲಿ ಕಲೆತು ಬೆರೆಯುವುದನ್ನು ನಾವು ಕಂಡಿದ್ದೇವೆ. ಎಲ್ಲರನ್ನು ಕೂಡಿಕೊಂಡು ರೂಢಿಸಿಕೊಂಡ ಮುಖವಾಡಗಳನ್ನು ಕಳಚಿ ಧ್ಯೇಯ, ತತ್ವಗಳ ಸರಿಯಾದ ಪಾಲನೆ ಅಗತ್ಯ. 
                                                            -ಕೆ.ಪಿ.ಭಟ್  

No comments:

Post a Comment