Tuesday, January 18, 2011

ಭಯ 'ಉತ್ಪಾದಕರು'
ಅಲ್ಲಿ ಇಲ್ಲಿ ಗುಹೆಗಳಲ್ಲಿ,ಸಣ್ಣ ಸಣ್ಣ ಗುಡಿಸಲುಗಳಲ್ಲಿ, Apartment ಗಳಲ್ಲಿ  ತನ್ನಷ್ಟೇ ಉದ್ದದ ಕೋವಿಗಳನ್ನು ಬೆನ್ನಲ್ಲಿ ತೂಗುಬಿಟ್ಟು ನೆಲಸಮ ಮಾಡುವಂತಹ ಪ್ಲಾನುಗಳನ್ನು  ಪರಿಪಾಠ ಮಾಡಿಕೊಂಡು, ಸರಿಯಾದ ಸಂದರ್ಭಕ್ಕಾಗಿ  ಕಾಯುವ ಭಯೋತ್ಪಾದಕರ ಅಳಿವು ಅಗತ್ಯವಾಗಿ ಆಗಬೇಕು.
ಆಲ್-ಖೈದಾ ಸಂಘಟನೆ ಯು ಯುರೋಪಿಯನ್ನರಲ್ಲಿ ಭಯೋತ್ಪಾದಕ ಸಂಘಟನೆಗೆ ಯೋಗ್ಯವಾದ, ಅಯೋಗ್ಯರ ಕೈ ಗೆ ಗನ್ನು ಕೊಟ್ಟು ತರಬೇತಿ ನೀಡುತ್ತಿದೆ. ಇದು ಪಾಶ್ಚಿಮಾತ್ಯರಲ್ಲಿ ಭಯವನ್ನು ಹುಟ್ಟಿಸುವ ಜೊತೆಗೆ ಇನ್ನೊಂದು ಎಚ್ಚರಿಕೆಯ ಘಂಟೆಯನ್ನು ನೀಡುತ್ತಿದೆ.
2001ರಲ್ಲಿ ಅಮೇರಿಕಾದ ಅವಳಿ ಕಟ್ಟಡಕ್ಕೆ ವಿಮಾನವನ್ನು ಗುದ್ದಿಸಿ ಆ ದಾಳಿಯ ಹೊಣೆಯನ್ನು ಹೊತ್ತುಕೊಂಡ ಆಲ್-ಖೈದಾ ಸಂಘಟನೆ ಇನ್ನಷ್ಟು ಅಮಾಯಕರ ಪ್ರಾಣವನ್ನು ತೆಗೆಯಲು ಸಜ್ಜಾಗಿ ನಿಂತಿದೆ.
ಭಯೋತ್ಪಾದನೆಯ ಮೂಲಕ ತಮ್ಮ ಪ್ರಭುತ್ವವನ್ನು ಸಾಧಿಸುವ ಹುನ್ನಾರ ಇವರದ್ದಾಗಿದ್ದು, ಗಡ್ಡವನ್ನು ಉದ್ದವಾಗಿ ಬೆಳೆಸುವುದರ ಬದಲು ಮಾನವೀಯತೆಯ ದೃಷ್ಟಿಯಲ್ಲಿ ಬುದ್ದಿ ಬೆಳೆಸುವ ಅಗತ್ಯವಿದೆ. ಭಯೋತ್ಪಾದಕರ ಸಂಘಟನೆಯು ಬೆಳೆಯಲು ಕಾರಣ; ಪ್ರತಿಯೊಂದು ರಾಷ್ಟ್ರದ ಪ್ರಜೆಗಳಲ್ಲಿ ದೇಶ ಪ್ರೇಮದ ಕೊರತೆ ಇರುವುದು ಮತ್ತು ಕ್ಷಣಿಕ ಸುಖಕ್ಕಾಗಿ ದೇಶದ ಗುಟ್ಟು ರಟ್ಟು ಮಾಡುವವರು ಇರುವ ತನಕ ಭಯೋತ್ಪಾದಕರನ್ನು ಮಟ್ಟ ಹಾಕುವುದು ಕಷ್ಟವೇ ಸರಿ.
ಅಲ್ಲಲ್ಲಿ  ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿರುವ ಇವರುಗಳನ್ನು ನಿಷ್ಕ್ರಿಯಗೊಳಿಸುವ ಯೋಗ್ಯ ಪಡೆಯ ಅಗತ್ಯವಿದೆ.
                                                                 -ಕೆ.ಪಿ ಭಟ್

No comments:

Post a Comment