Sunday, January 23, 2011

Facebook ಮಹಿಮೆ!!
ನನಗೆ ಕವಿಯೊಬ್ಬನ ಮಾತುಗಳು  ನೆನಪಾಗುತ್ತಿದೆ, ' ಹರಿಯುತ್ತಿರುವ  ನೀರಿನಲ್ಲಿ, ತೇಲುತ್ತಿರುವ ಮರದ ತುಂಡುಗಳಂತೆ ನಮ್ಮ ಬದುಕು. ಒಂದು ಕ್ಷಣ ಒಟ್ಟಿಗೆ ಇರುತ್ತೇವೆ, ನಂತರ ಬೇರೆ ಬೇರೆ. ಆದರೆ ನದಿ ಮಾತ್ರ ನಿರಂತರವಾಗಿ ಹರಿಯುತ್ತಲೇ ಇರುತ್ತದೆ'. ಈ ಮಾತು ಪ್ರಸ್ತುತ ಕಾಲಘಟ್ಟದಲ್ಲಿ ಅಪ್ರಸ್ತುತ ಎಂಬುವುದು ನನ್ನ ಅನಿಸಿಕೆ. ಯಾಕೆಂದರೆ ನಾವು L.K.G ಯಲ್ಲಿ ಕಳಕೊಂಡ ನಮ್ಮ ದೋಸ್ತ್ ಅನ್ನು, ಹೈಸ್ಕೂಲಿನಲ್ಲಿ ಅರಳಿದ, ನಂತರ ಮರೆತೇ ಬಿಟ್ಟ ಮೊದಲ ಪ್ರೇಮವನ್ನು, ಕಾಲದ ಆಟದಿಂದ ದೂರ ದೂರ ಆದ ನಮ್ಮ ಗೆಳೆಯರನ್ನು ಮರಳಿ ಪಡೆಯಬಹುದು. ಹೇಗೆ ಅಂತೀರ? ಅದೇ ರೀ facebook ಎಂಬ social networking site ಮೂಲಕ. ಇದರ ಆಕರ್ಷಣೆಗೆ ಬೀಳದ ಯುವಜನರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು, ಹೆಚ್ಚಿನ ಯುವಜನರು ಈ ಮಾಯೆಯ ಸದಸ್ಯರೇ ಆಗಿದ್ದಾರೆ, ' ಲೋ facebook ಅಲ್ಲಿ ಚಾಟ್ ಮಾಡಿಕೊಂಡು ಕೂತರೆ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ' ಇದು ನನ್ನ ಗೆಳೆಯನೊಬ್ಬನ ಮಾತು, ಹೌದು ಇದೊಂದು ರೀತಿ ಮಾಯಾಲೋಕ, ಎಷ್ಟೋ ವಿಷಯಗಳನ್ನು ನಮ್ಮ ಗೆಳೆಯರ ಜೊತೆ ಹಂಚಿ ಕೊಳ್ಳಬಹುದು, ಹೊಸ ಗೆಳೆಯರನ್ನು ಸಂಪಾದಿಸಿಕೊಳ್ಳಬಹುದು, ಯಾರದೋ profile ಗೆ ಮೂಗು  ತೋರಿಸಿ, comment ಮಾಡಬಹುದು. ಒಟ್ಟಿನಲ್ಲಿ ಇದರಲ್ಲಿ ಏನುಂಟು ಏನಿಲ್ಲ ಹೇಳಿ?
ದಿನಕಳೆದಂತೆ ಪ್ರಸಿದ್ದವಾಗುತ್ತಿರುವ  facebook ಯುವಜನರನ್ನು ತನ್ನತ್ತ ಸೆಳೆಯುತ್ತಿದೆ, ಇದರಿಂದಾಗಿ ಒಳಿತು ಇದೆ, ಕೆಡುಕು ಇದೆ. ಅಮೇರಿಕಾದಂಥಹ ದೇಶಗಳಲ್ಲಿ ಡೈವೋರ್ಸ್ ಪ್ರಮಾಣ ಹೆಚ್ಚಲು ಇದು ಕೂಡ ಒಂದು ರೀತಿ ಕಾರಣವಂತೆ, ಇದು ಭಾರತದ ಕಡೆಗೆ ತಿರುಗದಿದ್ದರೆ ಸಾಕು. ಇತರ  social networking site ಗಳಾದ ಆರ್ಕುಟ್, ಮೈಸ್ಪೇಸ್ ಗಳನ್ನು ಮೀರಿಸಿ ವಾಯುವೇಗದಲ್ಲಿ ಬೆಳೆಯುತ್ತಿರುವ facebook ನಲ್ಲಿ ಚೈನಾ, ಭಾರತ ಬಿಟ್ಟರೆ ಹೆಚ್ಚಿನ population ಇರುವುದಂತೂ ಸತ್ಯ.
ಹಾಗೇ ಸುಮ್ಮನೆ - ಉಮೇಶ ಆಸ್ಪತ್ರೆಯಲ್ಲಿ ಇದ್ದಾನಂತೆ, ಯಾಕೆ ಗೊತ್ತೇ? ಆತನ ಮನೆಯ ಕೆಲಸದ ಹೆಂಗಸು 'ಧಣಿ ನಿಮಗೆ  facebook ನಲ್ಲಿ request ಕಳಿಸಿದ್ದೇನೆ, accept ಮಾಡಿ'  ಎಂದಳಂತೆ. ಇದನ್ನು ಕೇಳಿದ ಉಮೇಶ ಶಾಕ್ ಆಗಿ ಹೋಗಿದ್ದಾನಂತೆ.
                                                                     ಡಾ. ಶೆಟ್ಟಿ 

1 comment:

  1. hee hee aa hengasannu nodake gandipark gaga hogiddaana

    ReplyDelete