Saturday, January 8, 2011

ರೆಡ್ಡಿ ರೈಡ್ 
ಹೈಕೋರ್ಟ್  ತಡೆಯಾಜ್ಞೆಯಿಂದ ಬಹಳ ಹೈ ಆಗಿಯೇ ಬೀಗಿ ಬೀದಿಯೆಲ್ಲಾ ತಿರುಗಾಡುತ್ತಿದ್ದ 'ಕರ್ನಾಟಕದ ಕೇಡಿಗಳು' ಎಂದು ಜನರ ಬಾಯಿಯಿಂದ  ಬಿರುದು ಗಿಟ್ಟಿಸಿಕೊಂಡಿರುವ ರೆಡ್ಡಿ ಬ್ರದರ್ಸ್ ಅವರ ಅಟ್ಟಹಾಸಕ್ಕೆ ನಿನ್ನೆ ತುಸು ಬ್ರೇಕ್ ಬಿದ್ದಿದೆ.
ಸುಪ್ರೀಂ ಕೋರ್ಟ್  ನೇಮಿಸಿದ, 6  ಮಂದಿಯನ್ನು ಒಳಗೊಂಡಿರುವ ಸಿ. ಇ. ಸಿ ( central  empowered committee ), ಬಹಳ ಕೂಲಂಕುಷವಾಗಿ ಅಕ್ರಮ ಗಣಿಗಾರಿಕೆಯ ಬಗ್ಗೆ ಅಧ್ಯಯನ ನಡೆಸಿದಾಗ, ಕೇಡಿಗಳ ಮೈನಿಂಗ್ ಕಂಪೆನಿ , ರೀತಿ ರಿವಾಜುಗಳನ್ನು ಸಾರಾಸಗಟವಾಗಿ ಗಾಳಿಗೆ ತೂರಿರುವುದು ಬೆಳಕಿಗೆ ಬಂದಿದೆ. ಗಡಿರೇಖೆಯ 50 ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಇದಕ್ಕಾಗಿಯೇ ಕರ್ನಾಟಕ-ಆಂಧ್ರ ಗಡಿ ಒತ್ತುವರಿ, ಸಂರಕ್ಷಿತ ಅರಣ್ಯದ ಲೂಟಿ  ಇತ್ಯಾದಿ. ಇಷ್ಟು ದಿನ ಬಹಳ ಚೂಟಿಯಾಗಿ ಯಾರಿಗೂ ತಿಳಿಯದಂತೆ ಲೂಟಿಮಾಡುತ್ತಿದ್ದ ರೆಡ್ಡಿ ಮಾಲೀಕತ್ವದ  3 ಕಂಪೆನಿಗಳ ಲೈಸೆನ್ಸ್ ರದ್ದತಿಗೆ ಸಮಿತಿ ಶಿಫಾರಸು ಮಾಡಿದರೆ, ಇವರದೇ ಕಂಪೆನಿಯ 137 ಹೆಕ್ಟೇರ್ ಗಣಿ ಗುತ್ತಿಗೆಗೂ ಕುತ್ತು ಬಂದಿದೆ.
ಇಷ್ಟೆಲ್ಲಾ ಆದರೂ, ಇನ್ನೂ ತಮ್ಮದೇನೂ ತಪ್ಪಿಲ್ಲ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ಇವರ ಸಮಜಾಯಿಷಿ ಕೇಳಿ ಜನ ನಗುತಿದ್ದಾರೆ. ಅದು ಬೇರೆ ವಿಚಾರ ಬಿಡಿ. ಪ್ರತಿಪಕ್ಷಗಳು ಮತ್ತೆ  ರಾಜೀನಾಮೆಗೆ  ಆಗ್ರಹ  ಮಾಡುತ್ತಿದ್ದಾರೆ. 2003 ರಲ್ಲಿ, 1000 ಚ. ಕಿ.ಮೀ ಸಾರ್ವಜನಿಕ ಹಿತಾಸಕ್ತಿಯ ಅರಣ್ಯ ಭೂಮಿಯನ್ನು ಎಸ್.ಎಂ. ಕೃಷ್ಣಾರವರೇ ಪೋಲು ಮಾಡಿದ್ದು ಎಂಬುವುದನ್ನು, ಕಾಂಗ್ರೇಸ್ ಪಕ್ಷ ಮರೆತಂತಿದೆ. ಜೆ.ಡಿ. ಎಸ್. ಬಿಡಿ, ಹೇಳಿಕೆಗಳನ್ನು  ನೀಡಿ ನೀಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಎಲ್ಲಾ ಪಕ್ಷದವರಿಗೂ ಒಂದು ಸಣ್ಣ ಸಲಹೆ. ದಯಮಾಡಿ ಹೇಳಿಕೆ ನೀಡುವ ಮೊದಲು ಸ್ವಲ್ಪ ಯೋಚಿಸಿ..(ರಾಜಕೀಯದ ಹೊರತಾಗಿ)
ಸಿ.ಇ.ಸಿ ಅವರ ಹೆಜ್ಜೆ ನಿಜವಾಗಿಯೂ ಪ್ರಶಂಸನೀಯ. ಇವರ ತನಿಖೆಯಿಂದ ಮತ್ತು ಸರ್ವರ ಹೋರಾಟದಿಂದ ಅಕ್ರಮ ಗಣಿಗಾರಿಕೆಗೆ ಪೂರ್ಣ ವಿರಾಮ ಬಿದ್ದರೆ ನಮ್ಮ ರಾಜ್ಯದ ಬಹು ಪಾಲು ಸಂಪತ್ತನ್ನು ಉಳಿಸಿಕೊಳ್ಳಬಹುದು. ಇನ್ನೂ ಷಂಡರಂತೆ ನಾವು ತೆಪ್ಪಗಿದ್ದರೆ ಕೊನೆಗೆ ನಮ್ಮ ಮನೆಯಲ್ಲೂ ಗಣಿಗಾರಿಕೆ ಶುರುಮಾಡಿಯಾರು.
                                                -ಡಾ.ಶ್ರೇ 

No comments:

Post a Comment