Thursday, January 6, 2011

 ಆಪ್ತವಲಯದಲ್ಲಿ ಅಂದರ್- ಬಾಹರ್
ನೆಪೋಲಿಯನ್ನನ ಸಾವು ಇತಿಹಾಸದಲ್ಲಿ ಉದರದ ಕ್ಯಾನ್ಸರ್ ನಿಂದ  ಎಂದು ದಾಖಲಾಗಿದೆ. ಸುಮಾರು 126 ವರ್ಷಗಳ ನಂತರ ಸ್ವೀಡನ್ನ ದಂತವೈದ್ಯ ಡಾ.ಸ್ಟೆನ್ ಸಂದೇಹ ತಾಳಿದರು. 'ಅಂತಾರಾಷ್ಟ್ರೀಯ ನೆಪೋಲಿಯನ್ ಸಂಘದ' ಸ್ಥಾಪಕ ಹಾಗು ಅದ್ಯಕ್ಷರಾದ ಡಾ. ಬೆನ್ ವೆಲ್ದರ್, ನೆಪೋಲಿಯನ್ ನ 2 ಕೂದಲುಗಳನ್ನು ವಿಷ ತಪಾಸಣೆಗೆಂದು ನೀಡಿ, ಕೂದಲಿನಲ್ಲಿ ಆರ್ಸೆನಿಕ್ ಇದೆ ಎಂದು ಧ್ರುಡಿಕರಿಸಿದರು. ಆಪ್ತ ಸಲಹೆಗಾರನೆ ವೈನ್ ನಲ್ಲಿ ಆರ್ಸೆನಿಕ್ ವಿಷವನ್ನು ಪ್ರತಿನಿತ್ಯ ಸೇರಿಸುತ್ತಾ ಕೊಲೆಗೆ ಕಾರಣನಾಗಿದ್ದ.
ಆಪ್ತರಿಂದಲೆ ಪರಿಸ್ಥಿತಿ ಹದಗೆಡುವ ಸನ್ನಿವೇಶ ಹೆಚ್ಚು, ಇದಕ್ಕೆ ಯಡಿಯೂರಪ್ಪನ ಭೂ ಹಗರಣವೇ ಸಾಕ್ಷಿ, ಕೆಲವು ದಿನಗಳ ಹಿಂದೆ ಕೊಲೆಯಾದ ಭೂಗತ ಪಾತಕಿ ಸೂರಿಯ ಸ್ಟೋರಿಯನ್ನು ಕಾಣಬಹುದು. ದೇಶದ ನಾಯಕರಿಂದ ಹಿಡಿದು ಭೂಗತ ಪಾತಕಿಗಳವರೆಗೆ, ಹೆಚ್ಚಿನ ಸಂದರ್ಭ  ಸಂಕಷ್ಟಗಳು ಎದುರಾಗಿದ್ದು ತಮ್ಮ ಆಪ್ತರಿಂದಲೆ!
ಈ ಆಪ್ತವಲಯಗಳನ್ನು ಇತಿ ಮಿತಿಯಲ್ಲಿ ಇಟ್ಟರೆ ಶ್ರೇಷ್ಟ ವ್ಯಕ್ತಿತ್ವ ಬೆಳೆಯಲು ಸಾದ್ಯ.
                                                                                                ಕೆ.ಪಿ.ಭಟ್ 

1 comment: